ಚಿಕ್ಕಮಗಳೂರು: ಗಂಡನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ದೂರು ಕೊಡಲು ಮಹಿಳೆ ಹೋದ ಸಮಯದಲ್ಲಿ ಮಸ್ಯೆ ಆಲಿಸದೆ ಪೊಲೀಸರು ನಿರ್ಲಕ್ಷಿಸಿರುವ ಘಟನೆ ಜಿಲ್ಲೆಯ (Chikkamagaluru News) ಕುದುರೆಮುಖ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಂಪ್ಲೇಂಟ್ ದಾಖಲಿಸಿಕೊಳ್ಳದೇ ಮಹಿಳೆಯನ್ನು ಮಧ್ಯೆ ರಾತ್ರಿವರೆಗೆ ಠಾಣೆಯಲ್ಲಿ ಕೂರಿಸುವ ಮೂಲಕ ಪೊಲೀಸರು ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
ಪತಿ ರಾಜೇಂದ್ರ ಮೇಲೆ ಹಲ್ಲೆ ಪ್ರಭಾವಿ ವ್ಯಕ್ತಿಗಳು ಹಲ್ಲೆ ನಡೆಸಿದ್ದರಿಂದ ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿದ್ದಾರೆ. ಆದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ಕು ವರ್ಷದ ಮಗುವಿನೊಂದಿಗೆ ಮಹಿಳೆ ಮಧ್ಯರಾತ್ರಿವರೆಗೂ ಠಾಣೆಯಲ್ಲೇ ಕೂತಿದ್ದಾರೆ.
ಮನೆಯ ಬಳಿ ಬಂದು ಶ್ರೇಯಾಂಶ್ ಹಾಗೂ ನವೀನ್ ಕುಮಾರ್ ಎಂಬುವವರು ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಹಿಳೆ ಗಂಡನ ಮೇಲೆ ಶ್ರೇಯಾಂಶ್ ಹಾಗೂ ನವೀನ್ ಕುಮಾರ್ ಹಲ್ಲೆ ನಡೆಸಿದ್ದರು. ಈ ವೇಳೆ ತಡೆದಿದ್ದಕ್ಕೆ ತಮ್ಮ ಮೇಲೆಯೂ ದೌರ್ಜನ್ಯ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ದೂರು ನೀಡಲು ನಾಲ್ಕೈದು ದಿನ ಠಾಣೆಗೆ ಅಲೆದು ಅಲೆದು ಮಹಿಳೇ ಸುಸ್ತಾಗಿದ್ದರು. ಆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಗುರುವಾರ ಸಂಜೆ ಠಾಣೆಗೆ ಹೋಗಿದ್ದಾಗಲೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಆದ್ದರಿಂದ ಠಾಣೆಯಲ್ಲಿ ಮಹಿಳೆ ಪ್ರತಿಭಟನೆ ನಡೆಸಿದ್ದರಿಂದ ಪಿಎಸ್ಐ ಶಂಭುಲಿಂಗ ಮಧ್ಯ ರಾತ್ರಿ 2.30ಕ್ಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Mangalore News: ಮಂಗಳೂರು ನೈತಿಕ ಪೊಲೀಸ್‌ಗಿರಿ ಪ್ರಕರಣ; ಐವರ ವಿರುದ್ಧ ಕೇಸ್ ದಾಖಲು
ನ್ಯಾಯ ಕೇಳಲು ಹೋದ ಮಹಿಳೆ ಸಮಸ್ಯೆ ಆಲಿಸದೆ, ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.