ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಬಾರಿ ಲಾಲ್ಬಾಗ್ನಲ್ಲಿ ಪುನೀತ್ ರಾಜಕುಮಾರ್ ಹಾಗೂ ಗಾಜನೂರಿನ ಅವರ ಮನೆಯನ್ನು ಪುಷ್ಪ ಪ್ರದರ್ಶನ ಮೂಲಕ ಕಟ್ಟಿಕೊಡಲು ನಿರ್ಧರಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೊರೊನಾ ಕಾರಣದಿಂದ ಲಾಲ್ಬಾಗ್ನಲ್ಲಿ ಅದ್ಧೂರಿಯಾಗಿ ಪ್ಲವರ್ ಶೋ ನಡೆಸಲು ಸಾಧ್ಯವಾಗಿರಲಿಲ್ಲ, ಆದರೆ, ಈ ಬಾರಿ ಆಗಸ್ಟ್ 15ರಂದು ಈ ಹಿಂದಿನದ್ದಕ್ಕಿಂತಲೂ ಅದ್ಧೂರಿಯಾಗಿ ಪುಷ್ಪ ಪ್ರದರ್ಶನ ಮಾಡಲಾಗುತ್ತದೆ. ಆಗಸ್ಟ್ 5ರಿಂದಲೇ ಆರಂಭವಾಗುವ ಪ್ಲವರ್ ಶೋ ಆಗಸ್ಟ್ 15ರವರೆಗೂ ಇರಲಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಪ್ಲವರ್ ಶೋನಲ್ಲಿ ಪುನೀತ್ ರಾಜ್ಕುಮಾರ್ ಹಾಗೂ ರಾಜ್ಕುಮಾರ್ ಅವರ ಗಾಜನೂರಿನ ಮನೆಯ ಮಾದರಿಯನ್ನು ಪ್ಲವರ್ ಡೆಕೋರೆಟ್ ಮಾಡಲು ನಿರ್ಧರಿಸಿದ್ದೇವೆ. ಜತೆಗೆ ಬೇರೆ ದೇಶಗಳಿಂದೂ ವಿಶೇಷ ಹೂ ಗಿಡಗಳನ್ನು ತರಿಸಲಾಗುತ್ತದೆ. ಅವುಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗುತ್ತದೆ. ಇನ್ನು ಈ ಬಾರಿ ಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಸಾರ್ವಜನಿಕರು ಅವಕಾಶ ನೀಡಲಾಗಿದೆ. ಕೊರೊನಾದಿಂದ ಎರಡು ವರ್ಷ ಸಾರ್ವಜನಿಕರಿಗೆ ಅವಕಾಶ ನೀಡಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕರ ಪ್ರವೇಶ ಮುಕ್ತಗೊಳಿಸಲಾಗಿದೆ. ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಇದನ್ನು ಓದಿ| ಬ್ಯಾನರ್ ವಿವಾದ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ರಾ ಸಚಿವ ಮುನಿರತ್ನ?