Site icon Vistara News

Lalbagh Flower Show | ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಈ ಬಾರಿ ರಾಜ್‌, ಪುನೀತ್‌ ಫೋಕಸ್‌

lalbagh flower show

ಬೆಂಗಳೂರು: ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿದ್ದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನವನ್ನು (Lalbagh Flower Show) ತೋಟಗಾರಿಕೆ ಇಲಾಖೆ ಈ ಬಾರಿ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದೆ. ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್‌ ಹಾಗೂ ಡಾ. ಪುನೀತ್ ರಾಜ್‌ಕುಮಾರ್‌ ಅವರನ್ನು ವಿಶೇಷವಾಗಿ ಬಂಬಿಸಲು ತೀರ್ಮಾನಿಸಲಾಗಿದೆ.

ಆಗಸ್ಟ್ 5ರಂದು ಫಲಪುಷ್ಪ ಪ್ರದರ್ಶನವು (Lalbagh Flower Show) ಉದ್ಘಾಟನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್‌ರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರನ್ನು ಆಹ್ವಾನಿಸಲಾಯಿತು. ಜತೆಗೆ ಫಲಪುಷ್ಪ ಪ್ರದರ್ಶನಕ್ಕೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲು ಕರ್ನಾಟಕ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಅವರನ್ನು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಾನ ಕಲಾಸಂಘದ ಉಪಾಧ್ಯಕ್ಷ ವಾಸುದೇವ್, ತೋಟಗಾರಿಕೆ ಜಂಟಿ ನಿರ್ದೇಶಕ ಡಾ. ಎಂ ಜಗದೀಶ್ ಹಾಗೂ ಲಾಲ್‌ಬಾಗ್‌ ತೋಟಗಾರಿಕೆ ಉಪ ನಿರ್ದೇಶಕಿ ಕುಸುಮ ಹಾಜರಿದ್ದರು.

ಇದನ್ನೂ ಓದಿ | ಲಾಲ್​ಬಾಗ್​ ಪುಷ್ಪ ಪ್ರದರ್ಶನ | ಪುನೀತ್​ ರಾಜ​ಕುಮಾರ್ ಸ್ಮರಣೆಗೆ ಸರ್ಕಾರದ ಸಿದ್ಧತೆ

Exit mobile version