Site icon Vistara News

Land Dispute: ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; ಯುವಕನ ಬರ್ಬರ ಹತ್ಯೆ

land dispute between those person

ಕೋಲಾರ: ಇಲ್ಲಿನ ಶ್ರೀನಿವಾಸಪುರ ತಾಲೂಕಿನ ನೀಲಟೂರು ಗ್ರಾಮದಲ್ಲಿ ಜಮೀನು ವಿಚಾರಕ್ಕೆ (Land Dispute) ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಯುವಕನೊಬ್ಬ ಚಾಕುವಿನಿಂದ ತಿವಿದು ಹತ್ಯೆ (Murder Case) ಮಾಡಿದ್ದಾನೆ. ಪ್ರಸಾದ್ ರೆಡ್ಡಿ (25) ಮೃತ ದುರ್ದೈವಿ.

ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು

ಪ್ರಸಾದ್‌ ರೆಡ್ಡಿ ಹಾಗೂ ಕಿರಣ್‌ ರೆಡ್ಡಿ ಎಂಬುವವರ ನಡುವೆ ಕಳೆದ ಹಲವು ವರ್ಷಗಳಿಂದ ಜಮೀನು ವಿವಾದ ಇತ್ತು. ಹೀಗಾಗಿ ಎರಡು ಕುಟುಂಬದವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಶನಿವಾರ (ಜೂ.24) ಮುಂಜಾನೆ ಜಮೀನಿನ ಬಳಿ ಬಂದ ಕಿರಣ್‌ ಗಲಾಟೆ ಶುರುವಾಗಿದ್ದು, ಪ್ರಸಾದ್‌ಗೆ ಚಾಕುವಿನಿಂದ ತಿವಿದಿದ್ದಾನೆ. ಕೂಡಲೇ ಗಂಭಿರ ಗಾಯಗೊಂಡಿದ್ದ ಪ್ರಸಾದ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಉಸಿರು ಚೆಲ್ಲಿದ್ದಾನೆ.

ಸದ್ಯ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಕೋಲಾರದ ಆರ್‌.ಎಲ್ ಜ್ವಾಲಪ್ಪ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಕೊಲೆ ಆರೋಪಿ ಕಿರಣ್ ರೆಡ್ಡಿ ಪೊಲೀಸರಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: Murder Case: ತಂಗಿಗೆ ಮೆಸೇಜ್‌ ಮಾಡ್ಬೇಡ ಎಂದಿದ್ದಕ್ಕೆ ಅಣ್ಣನಿಗೆ ಚಾಕು ಹಾಕಿದ ಕಿರಾತಕ

ನದಿ ತೀರದಲ್ಲಿ ಶೂ ಇರಿಸಿ ವ್ಯಕ್ತಿ ನಾಪತ್ತೆ

ದಕ್ಷಿಣ ಕನ್ನಡದ ಕಡಬ ತಾಲೂಕಿನ ಗ್ರಾಮ ಕೊಡಿಂಬಾಳ ಎಂಬಲ್ಲಿ ನದಿ ತೀರದಲ್ಲಿ ಶೂ ಇರಿಸಿ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ಸಕಲೇಶಪುರ ಬಾಲಗದ್ದೆ ನಿವಾಸಿ ಧರ್ಮಯ್ಯ (40) ನಾಪತ್ತೆಯಾದವರು.

ಕುಮಾರಧಾರ ನದಿಯಲ್ಲಿ ಹುಡುಕಾಟ ನಡೆಸುತ್ತಿರುವ ಕಡಬ ಪೊಲೀಸರು

ಧರ್ಮಯ್ಯ ರಬ್ಬರ್ ಕಟ್ಟಿಂಗ್ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಾಪತ್ತೆಯಾಗಿರುವ ಧರ್ಮಯ್ಯಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಡಬ ಪೊಲೀಸರು ಹಾಗೂ ಶೌರ್ಯ ತಂಡದವರು ಕುಮಾರಧಾರ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version