Site icon Vistara News

Ration Card : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಇಂದೇ ಕೊನೇ ದಿನ; ಹೊಸದಕ್ಕೆ ಡಿ. 3ರಂದು ಅವಕಾಶ!

New Ration card application

ಬೆಂಗಳೂರು: ರಾಜ್ಯದಲ್ಲಿ ಪಡಿತರ ಕಾರ್ಡ್‌ (Ration Card) ಹೊಂದಿರುವವರಿಗೆ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇವೆ. ಇಲ್ಲಿ ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ಕೆಲವರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ (Congress Government) ಗ್ಯಾರಂಟಿ ಯೋಜನೆಗಳು (Congress Guarantee Scheme) ಸಿಗದೇ ಇರುವುದು. ಕಾರಣ, ರೇಷನ್‌ ಕಾರ್ಡ್ ಆಗದೇ ಇರುವುದು, ಕಾರ್ಡ್‌ನಲ್ಲಿ ಹೆಸರು ಸಹಿತ ಇನ್ನಿತರ ಲೋಪಗಳು ಇರುವುದು, ಇಲ್ಲವೇ ತಿದ್ದುಪಡಿ ಆಗದೇ ಇರುವುದರಿಂದ ಸರ್ಕಾರದ ಗ್ಯಾರಂಟಿ ಫಲ ಸಿಗುತ್ತಿಲ್ಲ. ಈ ಕಾರಣದಿಂದ ಹೊಸ ರೇಷನ್‌ ಕಾರ್ಡ್‌ ಮಾಡಿಸಲು, ತಿದ್ದುಪಡಿ ಮಾಡಿಸಲು ಆಗಾಗ ಅವಕಾಶ ನೀಡಲಾಗುತ್ತಿದೆ. ಈಗ ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಅವಕಾಶವನ್ನು ನೀಡಲಾಗಿದೆ. ನ. 29ರಿಂದ ಪ್ರಾರಂಭವಾಗಿದ್ದು, ನ. 30ರಂದು ಅರ್ಜಿ ಸಲ್ಲಿಸಲು ಕೊನೇ ದಿನವಾಗಿದೆ. ಶೀಘ್ರದಲ್ಲಿಯೇ ಇತರೆ ಜಿಲ್ಲೆಗಳಿಗೆ ಅವಕಾಶ ನೀಡಲು ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಉಳಿದವರೂ ಅಗತ್ಯ ದಾಖಲೆಗಳನ್ನು ಇಟ್ಟುಕೊಂಡು ಸಿದ್ಧರಾಗಿರಿ.

ಫಲಾನುಭವಿಗಳ ಜಿಎಸ್‌ಸಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅವಕಾಶ ನೀಡಿರುವುದರ ಜತೆಗೆ ಹೊಸ ಆದ್ಯತಾ ಪಡಿತರ ಚೀಟಿಗೂ ಅರ್ಜಿ ಸಲ್ಲಿಸಬಹುದಾಗಿದೆ.

ತಿದ್ದುಪಡಿಗೆ ಎಲ್ಲಿ ಅವಕಾಶ?

ಜಿಎಸ್‌ಸಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆ, ಹೊಸ ಪಡಿತರ ಕಾರ್ಡ್‌ ಪಡೆಯಲು ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಏನೆಲ್ಲ ಬದಲಾವಣೆ ಮಾಡಿಸಬಹುದು?

ತಿದ್ದುಪಡಿ ಸಮಯ ಏನು?

ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಡಿ. 3ಕ್ಕೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ

ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಡಿ.3ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಒಂದು ದಿನ ಮಾತ್ರ ಅವಕಾಶ ನೀಡಲಾಗಿದ್ದು, ಕರ್ನಾಟಕ ಒನ್‌ ಹಾಗೂ ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಖಾಸಗಿ ಆನ್‌ಲೈನ್‌ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಅನುಮತಿ ನೀಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.

ತಿದ್ದುಪಡಿಗೆ ದಾಖಲೆಗಳೇನು ಬೇಕು?

ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕೆಲವು ದಾಖಲೆಗಳ ಅಗತ್ಯವಿದೆ. ಹೊಸ ಸದಸ್ಯರ ಸೇರ್ಪಡೆ ಮಾಡಬೇಕಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು. 5 ವರ್ಷದ ಒಳಗಿನ ಮಕ್ಕಳನ್ನು ಸೇರ್ಪಡೆ ಮಾಡಬೇಕಾದರೆ ಮನೆಯ ಹಿರಿಯ ಸದಸ್ಯರ ಆಧಾರ್‌ ಕಾರ್ಡ್ ಜತೆಗೆ ಆ ಮಗುವಿನ ಜನನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಬೇಕು. ಹೆಸರು ತಿದ್ದುಪಡಿಗೆ ಆಧಾರ್‌ಕಾರ್ಡ್‌ ಅಥವಾ ಇತರೆ ಅಧಿಕೃತ ಗುರುತಿನ ಚೀಟಿಯನ್ನು ನೀಡಬೇಕು.

ಹೊಸ ರೇಷನ್‌ ಕಾರ್ಡ್‌ಗೆ ಬೇಕಾದ ದಾಖಲಾತಿ

Exit mobile version