ಚಿಕ್ಕಬಳ್ಳಾಪುರ: ಇಲ್ಲಿನ ಅವಲಗುರ್ಕಿ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಉಪನ್ಯಾಸಕರೊಬ್ಬರು (Lecturer Death) ಮೃತಪಟ್ಟಿದ್ದಾರೆ. ಸುದರ್ಶನ್ (25) ಮೃತ ಉಪನ್ಯಾಸಕ.
ಸುದರ್ಶನ್ ಬಾಗೇಪಲ್ಲಿ ಮೂಲದ ನಿವಾಸಿ ಆಗಿದ್ದಾರೆ. ಬಿಜಿಎಸ್ ಕಾಲೇಜಿನಲ್ಲಿ ಗಣಿತ ವಿಭಾಗದ ಉಪನ್ಯಾಸಕನಾಗಿದ್ದರು. ಕಾಲೇಜು ಸಮೀಪದ ಆವಲಗುರ್ಕಿ ಗ್ರಾಮದಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Namma Metro: ಮೆಟ್ರೋ ಟ್ರ್ಯಾಕ್‌ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದ ಮಹಿಳೆ ಸಾವು
ಮಂಗಳೂರು: ಇಲ್ಲಿನ ಸುಳ್ಯ ಬೆಳ್ಳಾರೆ ಸಮೀಪದ ಶೇಣಿ ಎಂಬಲ್ಲಿ ವಿಷಕಾರಿ ಹಣ್ಣಿನ (Poison juice) ಜ್ಯೂಸ್ ಕುಡಿದು ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು (Mangaluru News) ಮೃತಪಟ್ಟಿದ್ದಾರೆ. ಶೇಣಿಯ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ದುರ್ದೈವಿ.
ಲೀಲಾವತಿ ವಾರದ ಹಿಂದೆ ಮೈರೋಲ್ ಎಂಬ ಕಾಡಿನ ಹಣ್ಣು ತಂದಿದ್ದರು. ಆದರೆ ಅದು ಮೈರೋಲ್ ಹಣ್ಣಿನಂತೇ ಹೋಲುವ ವಿಷದ ಹಣ್ಣಾಗಿತ್ತು. ಇದು ತಿಳಿಯದೆ ಆ ಹಣ್ಣಿನಲ್ಲಿ ಜ್ಯೂಸ್ ಮಾಡಿ ಲೀಲಾವತಿ ಹಾಗೂ ಆಕೆ ತಂದೆ ಕುಡಿದಿದ್ದರು. ಜ್ಯೂಸ್ ಕುಡಿಯುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು.
ವಾಂತಿ, ಭೇದಿಯಾಗಿ ಸುಸ್ತು, ಆಯಾಸದಿಂದ ಬಳಲುತ್ತಿದ್ದ ಲೀಲಾವತಿಯನ್ನು ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಜೀವ ಬಿಟ್ಟಿದ್ದಾಳೆ. ಜ್ಯೂಸ್ ಕುಡಿದಿದ್ದ ಲೀಲಾವತಿ ತಂದೆಯವರು ಚೇತರಿಸಿಕೊಳ್ಳುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ