ಕಾರವಾರ: ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಬೈಲ್ ಸಮೀಪದ ಗಣಪು ಪಿ. ಹೆಗಡೆ ಎನ್ನುವವರ ಮನೆಯ ಅಂಗಳದಲ್ಲಿ ಶನಿವಾರ ಮುಂಜಾನೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಮನೆಯಂಗಳದಲ್ಲಿ ಇದ್ದ ನಾಯಿಯನ್ನು ಬೇಟೆಯಾಡಲು (Leopard attack) ಆಗಮಿಸಿದ ಚಿರತೆಯು ದಾಳಿ ಮಾಡಿರುವ ದೃಶ್ಯಾವಳಿಯು ಮನೆಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶನಿವಾರ ಮುಂಜಾನೆ 4:20ರ ಸುಮಾರಿಗೆ ಈ ಘಟನೆ ನಡೆದಿದ್ದು ನಾಯಿ ಒಂದೇ ಸಮನೆ ಕೂಗಿಕೊಳ್ಳಲು ಆರಂಭಿಸಿದ ಹಿನ್ನಲೆ ಮನೆಯವರು ಲೈಟ್ ಆನ್ ಮಾಡುತ್ತಿದ್ದಂತೆ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ಇತ್ತೀಚಿನ ದಿನದಲ್ಲಿ ಚಿರತೆ ಕಾಟ ಹೊಸಾಕುಳಿ ಸಾಲ್ಕೋಡ್ ಗ್ರಾಮದಲ್ಲಿ ಆತಂಕ ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರೂ ಚಿರತೆ ಒಳಹೋಗದೇ ತಪ್ಪಿಸಿಕೊಳ್ಳುತ್ತಿದೆ. ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗಡೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ | Leopard attack | ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ