Site icon Vistara News

Leopard Attack | ರಾತೋರಾತ್ರಿ ಎಮ್ಮೆ ಮೇಲೆ ದಾಳಿ ಮಾಡಿ ಪರಾರಿಯಾಗಿರುವ ಚಿರತೆ

Leopard Attack

ಚಿಕ್ಕೋಡಿ: ಇಲ್ಲಿನ ಇಂಗಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, 2 ವರ್ಷದ ಎಮ್ಮೆ ಕರುವಿನ ಮೇಲೆ ದಾಳಿ (Leopard Attack) ನಡೆಸಿದೆ. ಮೂಡಲಗಿ, ಬೆಳಗಾವಿ, ಚಂದೂರುಟೇಕ್, ಕಾಗವಾಡದಲ್ಲಿ ಚಿರತೆ ಭೀತಿ ಇರುವಾಗಲೇ ಈಗ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಚಿರತೆ ದಾಳಿಗೆ 2 ವರ್ಷದ ಎಮ್ಮೆ ಮೃತಪಟ್ಟಿದೆ. ಇಂಗಳಿ ಗ್ರಾಮದ ಕೃಷ್ಣಾ ಜಾಧವ್ ಎಂಬುವವರಿಗೆ ಸೇರಿದ ಎಮ್ಮೆ ಕರುವಿನ ಮೇಲೆ ರಾತೋರಾತ್ರಿ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿ ಮಾಡಿದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Leopard Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ; ಕೃಷಿ ಕಾರ್ಮಿಕ ಮಹಿಳೆ ಸಾವು

Exit mobile version