Site icon Vistara News

Leopard Attack | ಮಂಡ್ಯದಲ್ಲಿ ನಿಲ್ಲದ ಚಿರತೆ ಹಾವಳಿ; 6 ಮೇಕೆಗಳ ಕೊಂದು, 4 ಮೇಕೆಗಳನ್ನು ಹೊತ್ತೊಯ್ದ ಚಿರತೆಗಳು

ಮಂಡ್ಯ: ಇಲ್ಲಿನ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ತಡರಾತ್ರಿ ಚಿರತೆಗಳು(Leopard Attack) ಪ್ರತ್ಯಕ್ಷವಾಗಿವೆ. ನಾಗೇಗೌಡ ಎಂಬುವರ ಕುರಿ ಕೊಟ್ಟಿಗೆಗೆ ನುಗ್ಗಿರುವ ಚಿರತೆಗಳು 6 ಮೇಕೆಗಳನ್ನು ಕೊಂದು, 4 ಮೇಕೆಗಳನ್ನು ಹೊತ್ತೊಯ್ದಿವೆ.

ಕೊಟ್ಟಿಗೆಯಲ್ಲಿದ್ದ 18 ಮೇಕೆಗಳಲ್ಲಿ ಆರನ್ನು ಕಚ್ಚಿ ಸಾಯಿಸಿದ್ದು, 4 ಮೇಕೆಗಳನ್ನು ಮೂರ್ನಾಲ್ಕು ಚಿರತೆಗಳು ಎಳೆದೊಯ್ದಿವೆ. ಚಿರತೆ ಹಾವಳಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Road Accident | ರಸ್ತೆ ಬದಿಯಲ್ಲಿ ನಿಂತಿದ್ದ ಮೀನು ವ್ಯಾಪಾರಿಯ ಪ್ರಾಣ ತೆಗೆದ ಬೊಲೆರೋ ಪಿಕಪ್ ವಾಹನ

Exit mobile version