ಹಾಸನ: ಹೊಳೆನರಸೀಪುರ ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಜನರಲ್ಲಿ ನಡುಕ ಹುಟ್ಟಿಸಿದ್ದ ಚಿರತೆ (Leopard attack) ಕೊನೆಗೂ ಬೋನಿಗೆ ಬಿದ್ದಿದೆ. ಇದರಿಂದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಭಾನುವಾರ ಮುಂಜಾನೆ ೭.೩೦ರ ಹೊತ್ತಿಗೆ ಚಿರತೆ ಬೋನಿಗೆ ಬಿದ್ದಿದೆ.
ಈ ಚಿರತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಓಡಾಡುತ್ತಿತ್ತು. ಅದೆಷ್ಟೋ ಮನೆಗಳಿಗೆ ರಾತ್ರಿ ಲಗ್ಗೆ ಇಟ್ಟಿತ್ತು. ಮೇಯಲು ಬಿಟ್ಟ ದನ ಕರುಗಳಲ್ಲದೆ, ಮನೆಗೆ ಕೊಟ್ಟಿಗೆಯಿಂದಲೇ ಅವುಗಳನ್ನು ಹೊತ್ತೊಯ್ದಿತ್ತು. ನಾಯಿಗಳು ಅದಕ್ಕೆ ಆಹಾರವಾಗಿದ್ದವು.
ರಾತ್ರಿ ವೇಳೆ ಅನೇಕ ಭಾರಿ ವಾಹನ ಸವಾರರಿಗೆ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಒಂದು ವಾರದ ಹಿಂದೆ ಬೋನು ಇಟ್ಟಿತ್ತು. ಆದರೆ, ಫಲ ನೀಡಿರಲಿಲ್ಲ. ಕೊನೆಗೆ ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಚಿರತೆ ಸೆರೆಯಿಂದ ನಿಟ್ಟುಸಿರು ಗ್ರಾಮಸ್ಥರು ಬಿಟ್ಟಿದ್ದಾರೆ. ಸೆರೆಯಾದ ಚಿರತೆಯನ್ನು ನೋಡಲು ಭಾರಿ ಪ್ರಮಾಣದಲ್ಲಿ ಜನ ಸೇರಿದ್ದಾರೆ.
ಇದನ್ನೂ ಓದಿ | Leopard attack | ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಚಿರತೆ ದಾಳಿ: ಇಬ್ಬರು ಬಾಲಕರಿಗೆ ಗಂಭೀರ ಗಾಯ