Site icon Vistara News

ಬಳ್ಳಾರಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ : ಜಾಲತಾಣದಲ್ಲಿ ವೈರಲ್‌, ಸೆರೆ ಹಿಡಿಯುವ ಕಾರ್ಯ ಚುರುಕು

ಬಳ್ಳಾರಿ ಗುಡ್ಡದಲ್ಲಿ ಚಿರತೆ

ಬಳ್ಳಾರಿ : ಬಳ್ಳಾರಿಯ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಗುಡ್ಡ ಪ್ರದೇಶದಲ್ಲಿ ಶುಕ್ರವಾರ (ಆಗಸ್ಟ್‌ 5) ಸಂಜೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಳಿಕ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಂಡು ಚಿರತೆ ಪತ್ತೆಯಾದ ಸ್ಥಳ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹುಡುಕಾಟ ನಡೆಸುತ್ತಿದ್ದಾರೆ. ಇದೀಗ ಗುಡ್ಡದ ಅಂಚಿನಲ್ಲಿ ವಾಸವಿರುವ ಕುಟುಂಬಗಳಿಗೆ ಆತಂಕ ಉಂಟಾಗಿದೆ.

ಗುಡ್ಡ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಚಿರತೆ ಪ್ರತ್ಯಕ್ಷ ವಾಗುತ್ತಿರುವ ವಿಡಿಯೊ, ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಇಲಾಖೆಯವರು ಫೇಕ್ ಎಂದು ಕೊಂಡೇ ಒಂದೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಪ್ರತ್ಯಕ್ಷ ದರ್ಶಿಗಳು ಹೇಳಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವ ಕಾರ್ಯ ಚುರುಕುಗೊಳಿಸಿದ್ದಾರೆ.

ಕೆಲ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುವುದು ಸಾಮಾನ್ಯ

ಜಿಲ್ಲೆಯ ಹಳೇ ದರೋಜಿ, ಮೆಟ್ರಿ, ದೇವಲಾಪುರ ಭಾಗಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ಮೇಕೆ, ಕುರಿ ಸೇರಿದಂತೆ ಪ್ರಾಣಿಗಳ ಬಲಿ ಪಡೆದಿದೆ. ಆದರೆ ನಗರದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಆತಂಕಕ್ಕೆ ಕಾರಣವಾಗಿದೆ‌.

ಇದನ್ನೂ ಓದಿ | ಬೆಳಗಾವಿ: ಚಿರತೆ ದಾಳಿ ಮಾಡಿದರೂ ಬದುಕಿದ ಮಗ, ಆಕ್ರಮಣದ ಸುದ್ದಿ ಕೇಳಿಯೇ ತಾಯಿ ಮೃತ್ಯು

ನಗರ ಡಿವೈಎಸ್ಪಿ ಶೇಖರಪ್ಪ ನೇತೃತ್ವದಲ್ಲಿ ಸಿಪಿಐಗಳಾದ ವಾಸುಕುಮಾರ್, ಷಣ್ಮುಖಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ರಾತ್ರಿವೇಳೆ ಮನೆಯಿಂದ ಹೊರಬರದಂತೆ ಗುಡ್ಡದ ಅಂಚಿನಲ್ಲಿರುವ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಡಿಸಿಎಫ್ ಮಾತನಾಡಿ ʻʻನಗರದಲ್ಲಿ ಚಿರತೆ ಪ್ರತ್ಯೇಕ್ಷವಾಗಿರುವ ಬಗ್ಗೆ ವಿಡಿಯೊ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಪತ್ತೆಯಾದ ಸ್ಥಳದಲ್ಲಿ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಲಾಗುತ್ತಿದೆʼʼ ಎಂದರು.

ಇದನ್ನೂ ಓದಿ | ಬೆಳಗಾವಿ ನಗರಕ್ಕೇ ಲಗ್ಗೆ ಇಟ್ಟ ಚಿರತೆ, ಕಾರ್ಮಿಕನ ಮೇಲೆ ದಾಳಿ, ರಸ್ತೆಗಳನ್ನು ಬಂದ್‌ ಮಾಡಿ ಶೋಧ

Exit mobile version