Site icon Vistara News

Urigowda Nanjegowda : ರಾಜಕಾರಣ ಮಾಡುವುದಾದರೆ ಪಕ್ಷದ ಕಚೇರಿ ಸೇರ್ಕೊಳ್ಳಿ: ಅಡ್ಡಂಡಗೆ ಪ್ರೊ.ಕೃಷ್ಣೇಗೌಡ ಕ್ಲಾಸ್‌

Addanda Krishnegowda

#image_title

ಮೈಸೂರು: ʻʻರಾಜಕಾರಣ ಮಾಡುವುದಾದರೆ ಪಕ್ಷದ ಕಚೇರಿ ಸೇರಿಕೊಳ್ಳಿ. ರಂಗಾಯಣದಂತಹ ಸರ್ಕಾರಿ ಸಂಸ್ಥೆಯ ಘನತೆ ಹಾಳು ಮಾಡಬೇಡಿʼʼ ಹೀಗೆಂದು ನೇರವಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ ಸಾಹಿತಿ, ವಾಗ್ಮಿ ಪ್ರೊ. ಎಂ. ಕೃಷ್ಣೇ ಗೌಡ. ಉರಿಗೌಡ, ನಂಜೇಗೌಡ (Urigowda Nanjegowda) ವಿವಾದಕ್ಕೆ ಸಂಬಂಧಿಸಿ ಆದಿಚುಂಚನಗಿರಿ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಬಗ್ಗೆ ವಿವಾದಾತ್ಮಕ ಮಾತು ಆಡಿದ್ದಕ್ಕಾಗಿ ಅವರು ಅಡ್ಡಂಡ ಕಾರ್ಯಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻಅಡ್ಡಂಡ ಕಾರ್ಯಪ್ಪ ಉದ್ಧಟತನ, ದಾರ್ಷ್ಟ್ಯದಿಂದ ಮಾತನಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಘನತೆ, ಸಾಮಾನ್ಯ ಜ್ಱಆನ, ಸೌಜನ್ಯ ಇಟ್ಟುಕೊಂಡು ಮಾತನಾಡಬೇಕು. ಅದನ್ನೂ ಕಳೆದುಕೊಂಡು ಪಕ್ಷದ ಪರವಾಗಿ ಮಾತನಾಡಿದರೆ ಹೇಗೆ? ಕುಲಪತಿಗಳು, ಪ್ರಾಧ್ಯಾಪಕರು, ಶಿಕ್ಷಕರೆಲ್ಲರನ್ನೂ ಸರ್ಕಾರ ನೇಮಕ ಮಾಡುತ್ತದೆ. ಹಾಗಂತ ಭವಿಷ್ಯದಲ್ಲಿ ಅವರೆಲ್ಲ ಸರ್ಕಾರದ ಪರವಾಗಿ ಮಾತನಾಡಿದರೆ ಗತಿ ಏನು?ʼʼ ಎಂದು ಪ್ರಶ್ನಿಸಿದ್ದಾರೆ ಪ್ರೊ. ಕೃಷ್ಣೇಗೌಡ.

ʻʻಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಿರುದ್ಧ ಮಾತನಾಡಿಯೂ ಆ ಹುದ್ದೆಯಲ್ಲಿ ಮುಂದುವರಿದರೆ ಕಾರ್ಯಪ್ಪ ಅವರ ಮಾತುಗಳಿಗೆ ಸರ್ಕಾರ ಸಹಮತ ಇದೆ ಅಂತಲೇ ಅರ್ಥʼʼ ಎಂದು ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ಕೃಷ್ಣೇಗೌಡರು ಹೇಳಿದರು.

ʻʻಉರಿಗೌಡ, ನಂಜೇಗೌಡ ಪಾತ್ರಗಳು ಚರ್ಚೆಗೂ ಯೋಗ್ಯವಲ್ಲ. ಅವೆರಡೂ ಕಲ್ಪಿತ ಪಾತ್ರಗಳುʼʼ ಎಂದ ಅವರು ಇವುಗಳಿಗೆ ಆಧಾರಗಳಿದ್ದರೆ ಸಾಬೀತುಪಡಿಸಿ ಎಂದು ಸವಾಲು ಹಾಕಿದರು. ಅಡ್ಡಂಡ ಕಾರ್ಯಪ್ಪ ಅವರಿಗೆ ಸತ್ಯದರ್ಶನ ಆಗಿಲ್ಲ. ಅವರದು ಬರೀ ವಾದ ಮಾತ್ರ. ಆ ಆ ವಾದವನ್ನು ಮಂಡಿಸಲು ಅಭ್ಯಂತರ ಇಲ್ಲ. ಆದರೆ, ಅದೇ ಸತ್ಯ ಎಂಬ ದಾರ್ಷ್ಟ್ಯ ಬೇಡʼʼ ಎಂದಿದ್ದಾರೆ. ಪ್ರೊ.ಎಂ.ಕೃಷ್ಣೇಗೌಡ.

ಅಡ್ಡಂಡ ಕಾರ್ಯಪ್ಪ ಅವರು ಹೇಳಿದ್ದೇನು?

ಉರಿ ಗೌಡ, ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದು ತಪ್ಪು ಎಂದು ಅಡ್ಡಂಡ ಕಾರ್ಯಪ್ಪ ಅವರು ಗುರುವಾರ ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ಆಕ್ಷೇಪ ವ್ಯಕ್ತಪಡಿಸಿದ್ದರು. ʻʻಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತುʼʼ ಎಂದು ಅಡ್ಡಂಡ ಹೇಳಿದ್ದರು.

ʻʻಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ. ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲʼʼ ಎಂದಿದ್ದರು.

ಈ ಬಗ್ಗೆ ವಿವಾದ ತೀವ್ರಗೊಂಡು, ಪ್ರತಿಭಟನೆಗಳು ಎದುರಾದಾಗ ಮೊದಲು ವಿಷಾದ ಸೂಚಿಸಿ, ಬಳಿಕ ಕ್ಷಮೆ ಯಾಚನೆ ಮಾಡಿದ್ದರು.

ಇದನ್ನೂ ಓದಿ Urigowda Nanjegowda : ನಿರ್ಮಲಾನಂದನಾಥ ಶ್ರೀಗಳ ವಿರುದ್ಧ ಅಡ್ಡ ಮಾತು: ಕ್ಷಮೆ ಯಾಚಿಸಿದ ಅಡ್ಡಂಡ ಕಾರ್ಯಪ್ಪ

Exit mobile version