Site icon Vistara News

Karnataka Election 2023: ಯಮಕನಮರಡಿ ಕ್ಷೇತ್ರದಲ್ಲಿ ಹಿಂದೂಸ್ಥಾನವು ಸಂಸ್ಥಾಪನೆಯಾಗಲಿ: ಬಸವರಾಜ ಹುಂದ್ರಿ

Let Hindustan be established in Yamakanamaradi constituency says Basavaraj Hundri Karnataka Election updates

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ನಮ್ಮ ಬರುವಿಕೆಯನ್ನು ಜನ ಕಾಯುತ್ತಾ ಕುಳಿತಿದ್ದಾರೆ. ಹಿಂದೂಸ್ಥಾನವು ನಮ್ಮ ಕ್ಚೇತ್ರದಲ್ಲಿ ಸಂಸ್ಥಾಪನೆ ಆಗಬೇಕು. ಹಾಗಾಗಬೇಕು ಅಂದರೆ ಜನ ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಹೇಳಿದರು.

ಅವರು ಗೌಂಡವಾಡ ಗ್ರಾಮದಲ್ಲಿ ಮನೆ ಮನೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ ಜತೆ ಮಾತನಾಡಿ, ಭೌಗೋಳಿಕವಾಗಿ ನಮ್ಮದು ಬಹಳ ದೊಡ್ಡ ಕ್ಷೇತ್ರವಾಗಿದೆ. 109 ಗ್ರಾಮಗಳನ್ನು ಹೊಂದಿರುವ ಕ್ಷೇತ್ರ ನಮ್ಮದಾಗಿದೆ. ಜನರ ಸ್ಪಂದನೆ ಉತ್ತಮವಾಗಿದೆ. ಅವರು ಬಿಜೆಪಿಗೆ ಮತ ನೀಡಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ ಎಂದು ಬಸವರಾಜ ಹುಂದ್ರಿ ತಿಳಿಸಿದರು.

ನಮ್ಮ ಕಾರ್ಯಕರ್ತರು ದೇಶಾಭಿಮಾನಿಗಳು

ಯಮಕನಮರಡಿ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಹುಂದ್ರಿ ಅವರು, ಹಾಗೇನೂ ಇಲ್ಲ. ನಾನು ಈಗಾಗಲೇ ಕ್ಷೇತ್ರದಾದ್ಯಂತ ಸಂಚಾರ ಮಾಡಿದ್ದೇನೆ. ಎಲ್ಲ ಕಡೆ ಬಿಜೆಪಿ ಪರವಾದ ಅಲೆ ಇದೆ. ಪಕ್ಷದ ಕಾರ್ಯಕರ್ತರು ಯಾರೂ ಸಹ ಮಾರುತಿ ಅಷ್ಟಗಿ ಅವರ ಜತೆಗೆ ಹೋಗಿಲ್ಲ. ಇನ್ನು ನಮ್ಮ ನಾಯಕರು ಸಹ ಅವರ ಮನವೊಲಿಸುವ ಕೆಲಸವನ್ನು ಮಾಡಿದ್ದರು. ನಾನೂ ಸ್ವತಃ ಎರಡು ಬಾರಿ ಮಾರುತಿ ಅವರ ಮನೆಗೆ ಹೋಗಿ ಬಂದೆ. ಆದರೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗಲಾರದು ಎಂದು ಹೇಳಿದರು.

ಯಮಕನಮರಡಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಅವರಿಂದ ಮನೆ ಮನೆ ಪ್ರಚಾರ

ಇದನ್ನೂ ಓದಿ: Karnataka Election : ಲಿಂಗಾಯತ ವೇದಿಕೆ ಒಂದು ಕಾಲ್ಪನಿಕ ಸಂಘಟನೆ ಎಂದ ಸಿಎಂ ಬೊಮ್ಮಾಯಿ

ನಮ್ಮ ಕಾರ್ಯಕರ್ತರು ಯಾರೂ ಸಹ ಮಾರುತಿ ಅಷ್ಟಗಿ ಅವರ ಹಿಂದೆಯೂ ಹೋಗಲ್ಲ. ಯಾಕೆಂದರೆ ನಮ್ಮ ಕಾರ್ಯಕರ್ತರು ದೇಶಾಭಿಮಾನಿಗಳು, ರಾಷ್ಟ್ರಾಭಿಮಾನಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಾಗೂ ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಬಜರಂದಳ‌ವನ್ನು ಬ್ಯಾನ್ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಪ್ರತಿ ಗ್ರಾಮಗಳಲ್ಲೂ ಸಹ ಹನುಮನ‌ ದೇವಸ್ಥಾನಗಳಿವೆ. ಹನುಮ ದೇವಸ್ಥಾನವನ್ನು ಬಂದ್ ಮಾಡಲು ಅವರಿಂದ ಆಗುತ್ತದೆಯಾ? ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಮಾತ್ರ ಹಿಂದುತ್ವ ಉಳಿಯುತ್ತದೆ. ಇಲ್ಲವಾದರೆ, ಸ್ಮಶಾನ, ಅದೂ ಇದು ಅಂತ ಹೇಳುವವರಿಗೆ ಇನ್ನೈದು ವರ್ಷ ಅವಕಾಶ ನೀಡಿದರೆ, ನಮ್ಮ ಕ್ಷೇತ್ರದ ಸ್ಥಿತಿ ಬೇರೆಯ ರೀತಿಯೇ ಆಗುತ್ತದೆ. ಭಾವನೆ ಹಾಗೂ ಸಂಸ್ಕೃತಿಗೆ ಧಕ್ಕೆ ತರುವವರನ್ನು ಹೊರಗೆ ಹಾಕಬೇಕು ಎಂದು ಬಸವರಾಜ ಹುಂದ್ರಿ ಗುಡುಗಿದರು.

ಇದನ್ನೂ ಓದಿ: Congress Manifesto : ಕಾಂಗ್ರೆಸ್‌ ಪ್ರಣಾಳಿಕೆಯನ್ನೇ ಸುಟ್ಟುಹಾಕಿದ ಈಶ್ವರಪ್ಪ; ಸಿದ್ದು, ಡಿಕೆಶಿ ಬಂಧನಕ್ಕೆ ಆಗ್ರಹ

ಎಮಕನಮರಡಿ ಕ್ಷೇತ್ರದ ಎಲೆಕ್ಷನ್‌ ಜಿದ್ದಾಜಿದ್ದಿ

ನಮ್ಮ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಬಹಳ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಇಲ್ಲಿ ನಿರುದ್ಯೋಗದ ಸಮಸ್ಯೆಯೂ ಇದೆ. ಹೀಗಾಗಿ ಕೈಗಾರಿಕೆಯನ್ನು ಅಭಿವೃದ್ಧಿ ಮಾಡಬೇಕಿದೆ. ಬಂಡವಾಳ ಶಾಹಿಗಳನ್ನು ತಂದು ಇಲ್ಲಿ ಬಂಡವಾಳ ಹೂಡುವಂತೆ ಮಾಡಬೇಕು. ಬ್ಯಾರೇಜ್ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಬೇಕು. ಅಲ್ಲದೆ, ಕ್ಷೇತ್ರದ ಸಾಮಾನ್ಯ ಕಷ್ಟಗಳು ನನಗೆ ಗೊತ್ತಿದೆ. ಹೀಗಾಗಿ ನಾನು ಎಲ್ಲರಿಗೂ ಸ್ಪಂದಿಸುತ್ತೇನೆ ಎಂದು ಬಸವರಾಜ ಹುಂದ್ರಿ ಹೇಳಿದರು.

Exit mobile version