Site icon Vistara News

Pramod Muthalik : ಮುತಾಲಿಕ್‌ ಕಾರ್ಕಳದಿಂದ ಸ್ಪರ್ಧಿಸಲು ಸ್ವತಂತ್ರ, ಯಾರು ಗೆಲ್ಬೇಕು ಅಂತ ಮತದಾರ ನಿರ್ಣಯಿಸ್ತಾನೆ: ಸುನಿಲ್‌ ಕುಮಾರ್

pramod muthalik

ಶಿರಸಿ:‌ ಶ್ರೀರಾಮ ಸೇನೆಯ ಸಂಸ್ಥಾಪಕರಾಗಿರುವ ಪ್ರಮೋದ್‌ ಮುತಾಲಿಕ್‌ (Pramod Muthalik) ಅವರು ಕಾರ್ಕಳದಿಂದ ಸ್ಪರ್ಧೆ ಮಾಡಲು ಸ್ವತಂತ್ರರಿದ್ದಾರೆ. ಅವರ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ: ಹೀಗೆಂದು ಸ್ಪಷ್ಟವಾಗಿ ಹೇಳಿದ್ದಾರೆ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಪ್ರಮೋದ್‌ ಮುತಾಲಿಕ್‌ ಅವರು ಕಾರ್ಕಳದಿಂದ ಸ್ಪರ್ಧೆ ಮಾಡಲು ಬಯಸಿದ್ದು, ಅವರಿಗಾಗಿ ಈ ಹಿಂದೆ ಅವರ ಶಿಷ್ಯರಾಗಿದ್ದ ಸುನಿಲ್‌ ಕುಮಾರ್‌ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಕೆಲವೆಡೆ ಬೇಡಿಕೆ ಕೇಳಿಬಂದಿದೆ. ಅದರಲ್ಲೂ ಮುಖ್ಯವಾಗಿ ಧಾರವಾಡ ಮತ್ತಿತರ ಕಡೆ ಪ್ರತಿಭಟನೆಗಳೇ ನಡೆದಿವೆ. ಸ್ವತಃ ಮುತಾಲಿಕ್‌ ಅವರೇ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಬೇಡಿಕೆ ಮಂಡಿಸಿದ್ದರು.

ಆದರೆ, ಸುನಿಲ್‌ ಕುಮಾರ್‌ ಅವರು ಈ ಬೇಡಿಕೆಗೆ ಸೊಪ್ಪು ಹಾಕಿಲ್ಲ. ಇದೀಗ ಹೇಳಿಕೆ ಮೂಲಕ ಅದನ್ನು ಸ್ಪಷ್ಟಪಡಿಸಿದ್ದು, ಇಬ್ಬರೂ ಕಣಕ್ಕಿಳಿಯೋಣ, ಜನರು ಅವರಿಗೆ ಬೇಕಾದವರನ್ನು ಗೆಲ್ಲಿಸಲಿ ಎಂಬ ಮಾತು ಹೇಳಿದ್ದಾರೆ.

ಸಿದ್ದಾಪುರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ʻʻಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು, ಎಲ್ಲರೂ ಸ್ವತಂತ್ರರು. ಪ್ರ.ಮೋದ್ ಮುತಾಲಿಕ್ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಸ್ಪರ್ಧೆಗಳು ಇರಬೇಕು. ಅಂತಿಮವಾಗಿ ಮತದಾರ ತನ್ನ ನಿರ್ಣಯ ಮಾಡುತ್ತಾನೆ. ಕಾರ್ಕಳ ಕ್ಷೇತ್ರದಲ್ಲಿ ಯಾರಿಗೆ ಮತದಾನ ಮಾಡ್ಬೇಕು ಅಂತ ಪ್ರಜ್ಞಾವಂತ ಮತದಾರರು ತೀರ್ಮಾನ ಮಾಡ್ತಾರೆʼʼ ಎಂದು ಹೇಳಿದರು.

ಅದೇ ಹೊತ್ತಿಗೆ, ʻʻನಮ್ಮ ಪಕ್ಷದ ನಿಲುವು ಹೇಗಿರ್ಬೇಕು ಅನ್ನೋದನ್ನ ಬೇರೆಯವರು ನಮಗೆ ಹೇಳುವ ಅಗತ್ಯತೆ ಇಲ್ಲʼʼ ಎಂದು ಪ್ರಮೋದ್‌ ಮುತಾಲಿಕ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : Pramod muthalik | ಕಾರ್ಕಳ ಕ್ಷೇತ್ರದ ಮೇಲೆ ಮುತಾಲಿಕ್‌ ಕಣ್ಣು, ಬಿಟ್ಟುಕೊಡುವಂತೆ ಸುನಿಲ್‌ ಕುಮಾರ್‌ಗೆ ತಾಕೀತು

Exit mobile version