Site icon Vistara News

Save Water: ಬನ್ನಿ ಜೀವ ಜಲ ಉಳಿಸೋಣ; ನೀರನ್ನು ಗೌರವಿಸೋಣ! ಇದು ವಿಸ್ತಾರ ನ್ಯೂಸ್‌ ಕಳಕಳಿ

SAVE WATER VISTARANEWS Campaign

ಬೆಂಗಳೂರು: ಕರ್ನಾಟಕದಲ್ಲಿ ಬರಗಾಲ (Drought in Karnataka) ತಾಂಡವವಾಡುತ್ತಿದೆ. ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. 219 ತಾಲೂಕುಗಳು ತೀವ್ರವಾಗಿ ಬಾಧಿತವಾಗಿವೆ. ಈಗಾಗಲೇ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮೇವು ಹಾಗೂ ನೀರಿಗೆ ಹಾಹಾಕಾರ (water Crisis) ಶುರುವಾಗಿದೆ. ನೀರು ಪೂರೈಕೆಗೆ ಸರ್ಕಾರ ಶತಪ್ರಯತ್ನ ಮಾಡುತ್ತಿದೆ. ಅಲ್ಲದೆ, ಖಾಸಗಿ ಬೋರ್‌ವೆಲ್‌ಗಳ (Private borewell) ಸಹಿತ ನೀರಿನ ಮೂಲವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಕಾರಣ, ನೀರು ಯಾರೊಬ್ಬರ ಸ್ವತ್ತಲ್ಲ ಎಂದು ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ. ಅದೂ ಅಲ್ಲದೆ, ಈಗ ಬಿರು ಬೇಸಿಗೆ ಕಾಲವಾಗಿದ್ದರಿಂದ ನೀರಿನ ಸಂರಕ್ಷಣೆಯಲ್ಲಿ (Save Water) ನಾಗರಿಕರ ಜವಾಬ್ದಾರಿ ಸಹ ಅಷ್ಟೇ ಮುಖ್ಯವಾಗಿದೆ. ನೀರಿನ ಮಿತ ಬಳಕೆಯನ್ನು ನಾವು ಮಾಡಲೇಬೇಕಿದೆ. ಇದು ನಿಮ್ಮ ವಿಸ್ತಾರ ನ್ಯೂಸ್‌ನ (Vistara News) ಕಳಕಳಿಯೂ ಆಗಿದೆ. ಇನ್ನು ಇಂದಿರಾ ನಗರದ ಅಪಾರ್ಟ್ಮೆಂಟ್‌ ಒಂದರಲ್ಲಿ ಸ್ನಾನಕ್ಕೆ ಅರ್ಧ ಬಕೆಟ್‌ ನೀರನ್ನು ಮಾತ್ರ ಬಳಸಿ ಎಂಬ ಸಲಹೆಯನ್ನಿತ್ತಿದೆ!

ರಾಜ್ಯ ಸರ್ಕಾರದ ದಾಖಲೆಯ ಪ್ರಕಾರ 16,781 ಬೋರ್‌ವೆಲ್‌ಗಳಿವೆ. ಅವುಗಳಲ್ಲಿ 6,997 ಬೋರ್‌ವೆಲ್‌ಗಳು ಈಗಾಗಲೇ ಬತ್ತಿ ಹೋಗಿವೆ. ಉಳಿದ 7,784 ಕಾರ್ಯನಿರ್ವಹಿಸುತ್ತಿವೆ. ಇನ್ನು ಬೆಂಗಳೂರು ಸೇರಿ ಪ್ರಮುಖ ನಗರಗಳ ಪರಿಸ್ಥಿತಿ ಹೇಳತೀರದು. ಬೆಂಗಳೂರಿನಲ್ಲಿ ಖಾಸಗಿಯಾಗಿ ನೀರು ತರಿಸುವುದು ಎಂದರೆ ಬಲು ದುಬಾರಿಯಾಗಿಬಿಟ್ಟಿದೆ. ಇದನ್ನೇ ಕೆಲವರು ವ್ಯಾಪಾರ ಮಾಡಿಕೊಂಡಿದ್ದು, ಸುಲಿಗೆಗೆ ಇಳಿದಿದ್ದಾರೆ. ಇದರ ಪರಿಣಾಮ ಪ್ರತಿ ಟ್ಯಾಂಕರ್‌ ನೀರಿಗೆ 500 ರೂಪಾಯಿಯಿಂದ 2,000 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಹಲವು ದೂರುಗಳು ಹೋಗಿವೆ. ಇದಕ್ಕೆ ಕಡಿವಾಣ ಹಾಕುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: Viral News: ಬೆಂಗಳೂರಲ್ಲಿ ಫ್ಲೈಟ್‌ ಚಾರ್ಜ್‌ಗೆ ಸಮವಾಯ್ತೇ ಪಾರ್ಕಿಂಗ್‌ ಶುಲ್ಕ? ಯುಬಿ ಮಾಲ್‌ನಲ್ಲಿ ಗಂಟೆಗೆ 1000 ರೂ.!

ಇದು ವಿಸ್ತಾರ ನ್ಯೂಸ್‌ ಕಳಕಳಿ

ನೀರಿನ ಮಿತ ಬಳಿಕೆ ನಿಮ್ಮ ವಿಸ್ತಾರ ನ್ಯೂಸ್‌ನ ಕಳಕಳಿಯಾಗಿದೆ. ಹೀಗಾಗಿ ನೀರಿನ ಮೌಲ್ಯದ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ನೀರನ್ನು ಮೊದಲು ನಾವು ಗೌರವಿಸಬೇಕಿದೆ. ಅದರ ಮೌಲ್ಯವನ್ನು ಅರಿಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲೂ ಈ ಚಿಕ್ಕ ಚಿಕ್ಕ ಸಂಗತಿಯನ್ನು ಅನುಸರಿಸಲಿ ಎಂಬುದು ನಿಮ್ಮ ವಿಸ್ತಾರ ನ್ಯೂಸ್‌ನ ಕಾಳಜಿಯಾಗಿದೆ.

ಬನ್ನಿ ಜೀವ ಜಲ ಉಳಿಸೋಣ. ಮನೆ ಮಂದಿಯ ನೀರಿನ ಬಳಕೆ ಮೇಲೆ ನಿಗಾ ಇಡಿ, ಹಿತಮಿತವಾಗಿ ನೀರು ಬಳಸುವಂತೆ ಹಿತವಾಗಿ ಹೇಳಿ!

ದಿನಕ್ಕೆ ಅರ್ಧ ಬಕೆಟ್‌ ನೀರು ಬಳಸಿ!

“ದಿನಕ್ಕೆ ಅರ್ಧ ಬಕೆಟ್‌ ನೀರು ಬಳಸಿ!” ಇದು ಇಂದಿರಾ ನಗರದ ಬೆನಕ ಟವರ್ಸ್‌ ಸೂಚನೆ. ಇಲ್ಲಿ ತಮ್ಮ ಅಪಾರ್ಟ್ಮೆಂಟ್‌ ನಿವಾಸಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಮನೆಯ ಸದಸ್ಯರು ಸ್ನಾನ ಮಾಡಲು ದಿನಕ್ಕೆ ಅರ್ಧ ಬಕೆಟ್‌ ನೀರನ್ನು ಮಾತ್ರವೇ ಬಳಸಿ, ನೆಲ ಒರೆಸಲು, ಬಚ್ಚಲು ಮನೆ ತೊಳೆಯಲು ಹೆಚ್ಚಿಗೆ ನೀರನ್ನು ಪೋಲು ಮಾಡಬೇಡಿ, ಅನಗತ್ಯವಾಗಿ ವಾಷಿಂಗ್‌ ಮಷಿನ್‌ ಬಳಕೆ ಮಾಡಬೇಡಿ, ಅಕ್ವಾಗಾರ್ಡ್‌ನ ವೇಸ್ಟೇಜ್‌ ನೀರನ್ನು ಪಾತ್ರೆ ತೊಳೆಯಲು ಉಪಯೋಗಿಸಿ ಎಂಬಿತ್ಯಾದಿ ಸಲಹೆಗಳನ್ನು ನೀಡಿದೆ.

Exit mobile version