Site icon Vistara News

Vijayananda Film | ʻಐಐಎಂ ವಿದ್ಯಾರ್ಥಿಗಳಿಗೆ ವಿಜಯ ಸಂಕೇಶ್ವರ ಜೀವನದ ಬಗ್ಗೆ ಪಠ್ಯವಾಗಬೇಕುʼ: ಸಿಎಂ ಬೊಮ್ಮಾಯಿ‌

Vijayananda Film

ಬೆಂಗಳೂರು: ʻʻವಿಜಯ ಸಂಕೇಶ್ವರ ಅವರಿಗೆ ಯಶಸ್ಸಿನ ಹಸಿವಿದೆ‌.‌ ಅವರು ಏನಾದರೂ ಹೊಸದನ್ನು ಮಾಡುತ್ತಲೇ ಇರುತ್ತಾರೆ. ಅವರಿಗೆ ವಯಸ್ಸಿನ ಹಂಗಿಲ್ಲ. ಅವರ ಜೀವನಾಧಾರಿತ ಚಿತ್ರ ಮೆಗಾ ಹಿಟ್ ಆಗಲಿದೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ವಿಜಯಾನಂದ ಚಿತ್ರದ (Vijayananda Film) ಟ್ರೈಲರ್‌ ರಿಲೀಸ್‌ ವೇಳೆ ಶುಭ ಕೋರಿದರು.

ನಗರದ ಖಾಸಗಿ ಹೊಟೆಲ್‌ನಲ್ಲಿ ಆಯೋಜಿಸಲಾಗಿದ್ದ ʻವಿಜಯಾನಂದʼ ಚಿತ್ರದ ಟ್ರೈಲರ್‌ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ʻʻವಿಜಯ ಸಂಕೇಶ್ವರ ಅವರು ಯಾವಾಗಲೂ ಅಡ್ವೆಂಚರ್ ಮಾಡುತ್ತಾರೆ. ಇಡೀ ಜಗತ್ತು ಎಲ್ಲಿ ಹೋಗಬೇಡ ಅಂತ ಹೇಳುತ್ತದೆಯೋ ಅಲ್ಲಿಗೆ ಅವರು ಹೋಗುತ್ತಾರೆ. ಯಾವುದು ಮಾಡಬೇಡ ಅನ್ನುತ್ತಾರೋ ಅದನ್ನೇ ಮಾಡುತ್ತಾರೆ. ಅವರು ನೋ ಎನ್ನುವುದು ಸ್ಪಷ್ಟವಾಗಿ ಹೇಳುತ್ತಾರೆ. ನೋ ಎನ್ನುವುದು ಎಲ್ಲರಿಗೂ ಆಗುವುದಿಲ್ಲ. ಅವರು ಯಶಸ್ವಿ ಆಗಿರುವುದು ಸರಿ ತಪ್ಪು ಹೇಳಿದ್ದರಿಂದ ಮತ್ತು ಸಮಯ ಪ್ರಜ್ಞೆಯಿಂದʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

Vijayananda Film

ಇದನ್ನೂ ಓದಿ | Vijayananda Film | ವಿಜಯ ಸಂಕೇಶ್ವರ ಜೀವನ ಆಧಾರಿತ ವಿಜಯಾನಂದ ಚಿತ್ರದ ಟ್ರೈಲರ್‌ ರಿಲೀಸ್‌

ಪತ್ರಿಕೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು
ʻʻಸತ್ಯವನ್ನೇ ಹೇಳಿದರೂ, ಜನ ಬೆಂಬಲಿಸಿ ಮೂರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದರು. ಅವರಿಗೆ ಬಹಳ ಜನ ಪತ್ರಿಕೆ ತೆರೆಯಬೇಡ ಎಂದು ಹೇಳಿದ್ದರು. ಆದರೂ ಅವರು ಅದನ್ನು ಆರಂಭಿಸಿ ಯಶಸ್ವಿಯಾದರು.
ಅವರು ಪತ್ರಿಕೆಯನ್ನು ಒಂದು ರೂಪಾಯಿಗೆ ಮಾರಾಟ ಮಾಡಿದರು. ಅದರಲ್ಲಿ ನಷ್ಟ ಅನುಭವಿಸಿದರೂ ಅವರು ಅದನ್ನು ಹೇಗೆ ಯಶಸ್ವಿ ಮಾಡಬೇಕೆಂಬ ಸತ್ಯ ಗೊತ್ತಿತ್ತು. ಲಾಜಿಸ್ಟಿಕ್ಸ್‌ನಲ್ಲಿಯೂ ಯಶಸ್ವಿಯಾಗಿದ್ದಾರೆ. ನಮ್ಮ‌ ಕಡೆ ಒಂದು ಗಾದೆ ಮಾತು ಇದೆ. ಯಾರನ್ನಾದರೂ ಮುಗಿಸಬೇಕು ಎಂದರೆ ಹಳೆ ಲಾರಿ ಕೊಟ್ಟು ನೋಡಿ ಅಂತʼʼ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ನಗೆ ಚಟಾಕಿ ಹಾರಿಸಿದರು.

ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು
ʻʻವಿಜಯ ಸಂಕೇಶ್ವರ ಅವರ ಬದುಕೇ ಒಂದು ರೀತಿ ಅದ್ಭುತ. ಅವರ ಬಗ್ಗೆ ಸಿನೆಮಾ ಮಾಡಿದ್ದು ಒಳ್ಳೆಯದ್ದಾಗಿದೆ. ಅವರ ಜೀವನದ ಬಗ್ಗೆ ಐಐಎಂ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು ಅನ್ನುವುದು ನನ್ನ ಬಯಕೆ. ಅವರಿಗೆ ಎಂಎಲ್ ಸಿ ಮಾಡಿದಾಗ ಅವರು ಇಲ್ಲಿ ಕುಳಿತು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ರಾಜೀನಾಮೆ ನಿಡಿದರು. ಅವರು ಅತ್ಯಂತ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ವ್ಯಕ್ತಿ. ಅವರು ಫ್ಲೈಟ್ ತೆಗೆದುಕೊಂಡು ಲಾಭ ಮಾಡಿದ್ದಾರೆ‌. ಅವರಿಗೆ ದೇಶ, ಧರ್ಮದ ಬಗ್ಗೆ ಅಪಾರವಾದ ಗೌರವ ನಂಬಿಕೆ ಇದೆ. ಅವರು ಕಾಯಕ ನಂಬಿದವರು. ಅವರು ಸವಾಲು ಎದುರಿಸಿದಾಗ ಕಾಯಕ ಶಕ್ತಿ ಅವರನ್ನು ಕೈ ಹಿಡಿದಿದೆ. ರಾಜ್ಯದಲ್ಲಿ ಒಬ್ಬ ಕಾಯಕ ಜೀವಿʼʼಎಂದರು.

ʻʻಚಿತ್ರ ಡಿಸೆಂಬರ್ 9 ರಂದು ಬಿಡುಗಡೆ ಆಗಲಿದ್ದು, 1400 ಸ್ಕ್ರೀನ್‌ನಲ್ಲಿ ಪ್ರದರ್ಶನವಾಗಲಿದೆ. ಹೊರ ದೇಶ ಅಮೆರಿಕದಲ್ಲಿ 200 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಎಲ್ಲರಿಗೂ ಪ್ರೇರಣೆ ಆಗಲಿ‌. ಈ ಚಿತ್ರದಿಂದ ರಾಜ್ಯದಲ್ಲಿ ನೂರು ವಿಜಯಾನಂದರು ಹುಟ್ಟಲಿ. ಈ ಚಿತ್ರ ಯಶಸ್ಬಿಯಾಗಲಿʼʼಎಂದು ಹರಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ವಿಆರ್ ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ, ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮಾ ಹಾಜರಿದ್ದರು.

ಇದನ್ನೂ ಓದಿ | Vijayananda Film | ʻವಿಜಯಾನಂದʼ ಟ್ರೈಲರ್‌ ಲಾಂಚ್‌ ಇವೆಂಟ್‌: ಸಾಧನೆಯ ಹಾದಿ ನೆನೆದ ವಿಜಯ ಸಂಕೇಶ್ವರ

Exit mobile version