Site icon Vistara News

Life Save | ವಿಮಾನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿದ ಡಾ. ತಾಜೀಶ್ ಫಾತಿಮಾ

doctor Phatima Spice Jet Treatment

ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಿಸಿ (Life Save) ಮಂಗಳೂರಿನ‌ ವೈದ್ಯೆ ಸುದ್ದಿಯಾಗಿದ್ದಾರೆ.

ಡಾ.ತಾಜೀಶ್ ಫಾತಿಮಾ ಅವರು ದುಬೈ ಸ್ಪೈಸ್ ಜಟ್‌ನಲ್ಲಿ ದುಬೈನಿಂದ ಬುಧವಾರ ರಾತ್ರಿ ವೇಳೆಯಲ್ಲಿ ಮಂಗಳೂರಿಗೆ ಬರುವಾಗ ಸುಮಾರು‌ 40 ವರ್ಷದ ಪ್ರಾಯದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. ತುರ್ತು ಚಿಕಿತ್ಸೆಯ ಅಗತ್ಯ ಇದ್ದ ಕಾರಣ ವಿಮಾನದಲ್ಲಿ ವೈದ್ಯರ ಅಗತ್ಯತೆ ಇತ್ತು. ಈ ವೇಳೆ ವಿಮಾನ ಸಿಬ್ಬಂದಿ ಯಾರಾದರೂ ವೈದ್ಯರಿದ್ದಾರಾ ಎಂದು ವಿಚಾರಿಸಿದ್ದಾರೆ. ಆಗ ತಾಜೀಶ್‌ ಫಾತಿಮಾ ರೋಗಿಯ‌ ನೆರವಿಗೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಇದರಿಂದ ರೋಗಿಯ ಆರೋಗ್ಯ ಸುಧಾರಿಸಿದೆ. ಡಾ. ತಾಜೀಶ್ ಫಾತಿಮಾ ಮಂಗಳೂರಿನ ಕುಲಶೇಖರ ಮೂಲದವಾರಗಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ಕಾರ್ಯಕ್ಕೆ ವ್ಯಾಪಕ‌ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ: ಕುಕ್ಕರ್‌ ಬಾಂಬ್‌ ಸ್ಫೋಟ ತನಿಖೆಯನ್ನು NIAಗೆ ವಹಿಸಲು ನಿರ್ಧಾರ

Exit mobile version