ಬೆಂಗಳೂರು: ಮದ್ಯ ಸೇವಿಸುವವರಿಗೆ ದರ ಏರಿಕೆಯ (Liquor Price hike) ಬಿಸಿ ತಟ್ಟಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಹೆಚ್ಚುವರಿ ಹಣ ಹೊಂದಿಸಲು ಹೆಚ್ಚುವರಿ ಸುಂಕವನ್ನು ಈ ಬಜೆಟ್‌ನಲ್ಲಿ ವಿಧಿಸಲಾಗಿತ್ತು. ಅದೀಗ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬ್ರ್ಯಾಂದಿ, ವಿಸ್ಕಿ, ಜಿನ್, ರಮ್, ಬಿಯರ್ ಸೇರಿದಂತೆ ಮದ್ಯದ ಮೇಲಿನ ದರದಲ್ಲಿ ಹೆಚ್ಚಳ ಕಂಡಿದೆ.
ಜುಲೈ 20ರಿಂದಲೇ ಜಾರಿಯಾಗುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಒಟ್ಟು 18 ಸ್ಲ್ಯಾಬ್‌ಗಳಲ್ಲಿ ಹೊಸ ಸುಂಕ ಘೋಷಣೆ ಮಾಡಲಾಗಿದೆ. ಬಿಯರ್ ಸುಂಕವನ್ನು ಶೇ.10 ಹಾಗೂ ಇತರೆ ಮದ್ಯದ ಸುಂಕವನ್ನು ಶೇ.20ಕ್ಕೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದರು. ಅಲ್ಲದೆ, ಇಷ್ಟು ಹೆಚ್ಚಿಸಿದರೂ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕಡಿಮೆ ದರವಿದೆ ಎಂದಿದ್ದರು.
ಯಾವ ಸ್ಲ್ಯಾಬ್‌ಗೆ ಯಾವ ದರ ನಿಗದಿ?
0 ರೂ.ನಿಂದ Rs. 449 ರೂಪಾಯಿವರೆಗಿನ ಸ್ಲ್ಯಾಬ್‌ಗೆ 179 ರೂಪಾಯಿಯಿಂದ 215 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಒಟ್ಟು 36 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.
ಇದನ್ನೂ ಓದಿ: Farmer Martyrs Day: ಕೇಂದ್ರದಲ್ಲಿ ಬಿಜೆಪಿ ಕಿತ್ತೊಗೆಯಲು ನಿರ್ಧಾರ: ಬಡಗಲಪುರ ನಾಗೇಂದ್ರ
450 ರೂಪಾಯಿಯಿಂದ 499 ರೂಪಾಯಿವರೆಗಿನ ಸ್ಲ್ಯಾಬ್‌ಗೆ 245 ರೂಪಾಯಿಯಿಂದ 294 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ 49 ರೂಪಾಯಿ ಹೆಚ್ಚಳವಾಗಿದೆ. 500 ರೂ.ನಿಂದ 549 ರೂಪಾಯಿವರೆಗಿನ ಸ್ಲ್ಯಾಬ್‌ಗೆ 322 ರೂ.ನಿಂದ 386 ರೂ.ಗೆ ಏರಿಕೆ ಮಾಡಲಾಗಿದೆ. ಒಟ್ಟು 64 ರೂಪಾಯಿ ಏರಿಕೆ ಮಾಡಿದಂತೆ ಆಗಿದೆ.
550 ರೂಪಾಯಿಯಿಂದ 599 ರೂಪಾಯಿವರೆಗಿನ ಸ್ಲ್ಯಾಬ್‌ಗೆ 414 ರೂ.ನಿಂದ 497 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದಕ್ಕೆ 83 ರೂಪಾಯಿ ಏರಿಕೆ ಮಾಡಲಾಗಿದೆ. 600 ರೂ.ಯಿಂದ 699 ರೂಪಾಯಿವರೆಗಿನ ಸ್ಲ್ಯಾಬ್‌ಗೆ 557 ರೂಪಾಯಿಯಿಂದ 668 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಒಟ್ಟು 111 ರೂಪಾಯಿ ಏರಿಕೆಯಾದಂತೆ ಆಗಿದೆ.
700 ರೂ.ನಿಂದ 799 ರೂಪಾಯಿವರೆಗಿನ ಸ್ಲ್ಯಾಬ್‌ಗೆ 680 ರೂ.ನಿಂದ 816 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ ಒಟ್ಟು 136 ರೂಪಾಯಿ ಏರಿಕೆ ಮಾಡಿದಂತೆ ಆಗಿದೆ. 800 ರೂ.ಯಿಂದ 899 ರೂಪಾಯಿವರೆಗಿನ ಸ್ಲ್ಯಾಬ್‌ಗೆ 725 ರೂಪಾಯಿಯಿಂದ 870 ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಒಟ್ಟು 145 ರೂಪಾಯಿ ಏರಿಕೆ ಮಾಡಿದಂತೆ ಆಗಿದೆ.
900 ರೂಪಾಯಿಯಿಂದ 999 ರೂಪಾಯಿವರೆಗಿನ ಸ್ಲ್ಯಾಬ್‌ಗೆ 782 ರೂಪಾಯಿಯಿಂದ 938 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಒಟ್ಟು 156 ರೂಪಾಯಿಯನ್ನು ಏರಿಕೆ ಮಾಡಿದಂತೆ ಆಗಿದೆ. 1000 ರೂಪಾಯಿಯಿಂದ 1099 ರೂಪಾಯಿವರೆಗಿನ ಸ್ಲ್ಯಾಬ್‌ಗೆ 818 ರೂಪಾಯಿಯಿಂದ 982 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಒಟ್ಟು 164 ರೂ. ಏರಿಕೆಯಾಗಿದೆ.
ಈ ಸ್ಲ್ಯಾಬ್‌ಗೆ 221 ರೂಪಾಯಿ ಹೆಚ್ಚಳ
1100 ರೂ.ನಿಂದ 1199 ರೂಪಾಯಿವರೆಗಿನ ಸ್ಲ್ಯಾಬ್‌ಗೆ 918 ರೂಪಾಯಿಯಿಂದ 1102 ರೂಪಾಯಿವರೆಗೆ ಏರಿಸಿದ್ದು, ಒಟ್ಟು 184 ರೂಪಾಯಿ ಹೆಚ್ಚಳವಾಗಿದೆ. 1200 ರೂಪಾಯಿಯಿಂದ 1299 ರೂಪಾಯಿವರೆಗಿನ ಸ್ಲ್ಯಾಬ್‌ಗೆ 1104 ರೂಪಾಯಿಯಿಂದ 1325 ರೂಪಾಯಿವರೆಗೆ ಏರಿಸಲಾಗಿದೆ. ಒಟ್ಟು 221 ರೂಪಾಯಿ ಹೆಚ್ಚಳವಾಗಿದೆ.
1300 ರೂ.ನಿಂದ 1399 ರೂಪಾಯಿವರೆಗಿನ ಸ್ಲ್ಯಾಬ್‌ಗೆ 1284 ರೂಪಾಯಿಯಿಂದ 1541 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಒಟ್ಟು 257 ರೂಪಾಯಿವರೆಗೆ ಏರಿಕೆ ಕಂಡಿದೆ. 1400 ರೂಪಾಯಿಯಿಂದ 1799 ರೂಪಾಯಿವರೆಗಿನ ಸ್ಲ್ಯಾಬ್‌ಗೆ 1389 ರೂಪಾಯಿಯಿಂದ 1667 ರೂಪಾಯಿವರೆಗೆ ಹೆಚ್ಚಳವಾಗಿದೆ. ಒಟ್ಟು 278 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.
1800 ರೂಪಾಯಿಯಿಂದ 2199 ರೂಪಾಯಿವರೆಗಿನ ಸ್ಲ್ಯಾಬ್‌ಗೆ 1550 ರೂಪಾಯಿಯಿಂದ 1860 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಒಟ್ಟು 310 ರೂಪಾಯಿ ಏರಿಕೆ ಕಂಡಿದೆ. 2200 ರೂ.ನಿಂದ 4924 ರೂಪಾಯಿವರೆಗಿನ ಸ್ಲ್ಯಾಬ್‌ಗೆ 1770 ರೂಪಾಯಿಯಿಂದ 2124 ರೂಪಾಯಿ ಹೆಚ್ಚಳ ಮಾಡಲಾಗಿದೆ. ಒಟ್ಟು 354 ರೂಪಾಯಿ ಹೆಚ್ಚಳ ಕಂಡಿದೆ.
ಇದನ್ನೂ ಓದಿ: Karnataka Politics : NICE ಹೆಸರಲ್ಲಿ ನೈಸಾಗಿ ಬೆಸೆದುಕೊಂಡ ಕುಮಾರಸ್ವಾಮಿ, ಬೊಮ್ಮಾಯಿ! ಜಂಟಿ ಮಾತೇನು?
893 ರೂಪಾಯಿ ಏರಿಕೆ!
4925 ರೂ.ನಿಂದ 7650 ರೂಪಾಯಿವರೆಗಿನ ಸ್ಲ್ಯಾಬ್‌ಗೆ 2069 ರೂಪಾಯಿಯಿಂದ 2483 ರೂಪಾಯಿವರೆಗೆ ಏರಿಸಲಾಗಿದೆ. ಒಟ್ಟು 414 ರೂಪಾಯಿ ಏರಿಕೆ ಮಾಡಲಾಗಿದೆ ಎನ್ನಲಾಗಿದೆ. 7651 ರೂಪಾಯಿಯಿಂದ 15000 ರೂಪಾಯಿವರೆಗಿನ ಸ್ಲ್ಯಾಬ್‌ಗೆ 2976 ರೂಪಾಯಿಯಿಂದ 3571 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದಕ್ಕೆ ಒಟ್ಟು 595 ರೂಪಾಯಿ ಏರಿಕೆ ಮಾಡಿದಂತೆ ಆಗಿದೆ. 15001 ರೂಪಾಯಿ ಹಾಗೂ ಅದಕ್ಕಿಂದ ಹೆಚ್ಚಿನ ದರದ ಮದ್ಯಗಳಿಗೆ 4465 ರೂಪಾಯಿಯಿಂದ 5358 ರೂಪಾಯಿಗೆ ಏರಿಕೆ ಮಾಡಲಾಗಿದೆ. ಒಟ್ಟು 893 ರೂಪಾಯಿ ಏರಿಕೆ ಮಾಡಿದಂತೆ ಆಗಿದೆ.