Site icon Vistara News

Living Together : ಲಿವ್ ಇನ್ ರಿಲೇಷನ್‌ನಲ್ಲಿ ಹೆಚ್ಚಾಯ್ತು ಟಾರ್ಚರ್‌!

Torture increased in living in a relationship

ಬೆಂಗಳೂರು : ವಿದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಲಿವ್ ಇನ್ ರಿಲೇಷನ್‌ (Living Together) ಪರಿಕಲ್ಪನೆ ಭಾರತಕ್ಕೂ ಚಾಚಿ ವರ್ಷಗಳೇ ಕಳೆದಿವೆ. ಲಿವ್ ಇನ್ ರಿಲೇಷನ್‌ ಎಂಬುದು ನಗರದ ಪ್ರದೇಶದಲ್ಲಿ ಸಾಮಾನ್ಯ ಎಂಬಾತಾಗಿದೆ. ಇನ್ನು ಲಿವ್ ಇನ್ ರಿಲೇಷನ್‌ನಿಂದಾಗಿ ದೆಹಲಿ, ಮುಂಬೈನಲ್ಲಿ ಭೀಕರ ಹತ್ಯೆಗಳು ನಡೆದಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಲಿವಿಂಗ್‌ ಟುಗೆದರ್‌ ಸಂಬಂಧ ಹಲವರ ಜೀವನವನ್ನು ಎಂಡ್​ ಮಾಡಿದೆ. ಇತ್ತೀಚೆಗೆ ಲಿವ್ ಇನ್ ರಿಲೇಷನ್‌ನಲ್ಲಿ ಟಾರ್ಚರ್​ ಜಾಸ್ತಿಯಾಗಿದೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಆತಂಕಕಾರಿ ವರದಿ ನೀಡಿದೆ.

ಲಿವ್ ಇನ್ ರಿಲೇಷನ್‌ನಲ್ಲಿ ಕ್ರೌರ್ಯಗಳು ಹೆಚ್ಚಾಗುತ್ತಿವೆ ಎನ್ನಲಾಗುತ್ತಿದೆ. ಲಿವ್ ಇನ್ ರಿಲೇಷನ್‌ನಲ್ಲಿ ವೈಮನಸ್ಸು ಉಂಟಾದರೆ ಪ್ರೇಯಸಿಗೆ ಸಿಗರೇಟ್​ನಿಂದ ಸುಡುವುದು. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ.

ಕಳೆದ ಮೂರು ವರ್ಷದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳ ವಿಭಾಗದಲ್ಲಿ 2,700ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಲಿವಿಂಗ್‌ ಟುಗೆದರ್​ನಿಂದ ಆದ ಅವಾಂತರಗಳೇ ಹೆಚ್ಚಿವೆ. ಮಾತ್ರವಲ್ಲ ಲಿವಿಂಗ್‌ ಟುಗೆದರ್‌ನಲ್ಲಿದ್ದರೂ ಎಂಬುದೇ ಮನೆಯವರಿಗೆ ತಿಳಿದಿಲ್ಲ ಎಂದು ಪ್ಲಾಸ್ಟಿಕ್​ ಸರ್ಜರಿ ಹಾಗೂ ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ. ರಮೇಶ್ ತಿಳಿಸಿದ್ದಾರೆ.

200ಕ್ಕೂ ಹೆಚ್ಚು ಮಹಿಳೆಯರು ಮೃತ್ಯು

ಸುಟ್ಟಗಾಯಗಳಿಂದಲೇ 481 ಜನರು ಮೃತಪಟ್ಟಿದ್ದಾರೆ. ಈ ಕೇಸ್​ಗಳಲ್ಲಿ ಲಿವಿಂಗ್‌ ಟುಗೆದರ್​ ಹೊರತುಪಡಿಸಿ ಸಿಲಿಂಡರ್ ಸ್ಫೋಟ, ಎಲೆಕ್ಟ್ರಿಕ್‌​​ ಶಾಕ್​​, ಕೆಲಸದ ಸ್ಥಳದಲ್ಲಿ ಆಗುವ ಅಪಘಾತದಿಂದಲೂ ಅವಾಂತರವಾಗಿದೆ. ಕಳೆದ ಮೂರು ವರ್ಷದಲ್ಲಿ ಮೃತಪಟ್ಟವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಆಸ್ಪತ್ರೆಗೆ ದಾಖಲಾದ 708 ಮಹಿಳೆಯರಲ್ಲಿ 218 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version