Site icon Vistara News

Loco Pilot: ಇನ್ನೇನು ರೈಲು ಹೊರಡುವಾಗಲೇ ಹಳಿ ದಾಟುತ್ತಿದ್ದ ವೃದ್ಧ ಎಡವಿ ಬಿದ್ದ; ಮುಂದೇನಾಯಿತು?

Loco pilot stops train, becomes punctual

Loco pilot stops train, becomes punctual

ಕೋಲಾರ: ಹಳಿ ದಾಟಲು ಹೋದ ವೃದ್ಧರೊಬ್ಬರು ಎಡವಿ ಬಿದ್ದಿದ್ದು, ಇದನ್ನು ಗಮನಿಸಿದ ಲೋಕೊ ಪೈಲೆಟ್‌ (Loco Pilot) ರೈಲು ನಿಲ್ಲಿಸಿ ಪ್ರಾಣ ಉಳಿಸಿದ್ದಾರೆ. ನೆತ್ತಿ ಮೇಲೆ ಉರಿ ಬಿಸಿಲು ಸುಡುತ್ತಿತ್ತು. ವೃದ್ಧರೊಬ್ಬರು ಬಹುಬೇಗ ಮನೆ ಸೇರುವ ದಾವಂತದಲ್ಲಿ ಇದ್ದರು. ವೃದ್ಧ ಮನೆ ಸೇರಬೇಕಾದರೆ ರೈಲು ಹಳಿ ದಾಟಿಯೇ ಹೋಗಬೇಕಿತ್ತು. ರೈಲು ಬರುವ ಹೊತ್ತಿಗೆ ಹಳಿ ದಾಟಿ ಮನೆ ಸೇರುವ ಆತುರದಲ್ಲಿದ್ದರು. ಇನ್ನೇನು ರೈಲು ಬಂತಲ್ಲ ಎಂದು ಗಾಬರಿಯಲ್ಲೇ ಹಳಿ ದಾಟಲು ಹೋಗಿ ಎಡವಿ ಬಿದ್ದಿದ್ದರು. ಆದರೆ, ಎದ್ದೇಳಲು ಆಗದೆ ಪರದಾಡುತ್ತಿದ್ದರು. ರೈಲು ಸಹ ಸಮೀಪ ಬಂದುಬಿಟ್ಟಿತ್ತು.

ಕುಪ್ಪಂ ರೈಲು ನಿಲ್ದಾಣ

ಹಳಿ ಮೇಲೆ ವೃದ್ಧ ಬೀಳುವುದನ್ನು ಗಮನಿಸಿದ ಲೋಕೋ ಪೈಲೆಟ್‌ ಕೂಡಲೇ ರೈಲು ನಿಲ್ಲಿಸಿ ಸಮಯಪ್ರಜ್ಞೆ ಮೆರೆದ ಅಪರೂಪದ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲು ನಿಲ್ದಾಣದಲ್ಲಿ ನಡೆದಿದೆ. ಚೆನ್ನೈ-ಬೆಂಗಳೂರು ನಡುವಿನ ಲಾಲ್‌ಬಾಗ್‌ ಲೋಕೋ ಪೈಲೆಟ್‌ನ ಸಮಯ ಪ್ರಜ್ಞೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲು ಹಳಿ ಮೇಲೆ ಎಡವಿದ ವೃದ್ಧ

ಇದನ್ನೂ ಓದಿ: Fire Accident: ದೇವರಾಯನದುರ್ಗ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ; ಅಗ್ನಿಜ್ವಾಲೆಗೆ ಸಿಲುಕಿ ಬಾಲಕಿ ಸಾವು‌, ಮತ್ತಿಬ್ಬರಿಗೆ ಗಾಯ

ವೃದ್ಧನ ಸಹಾಯಕ್ಕೆ ಧಾವಿಸಿದ ಲೋಕೋ ಪೈಲೆಟ್‌

ಲೋಕೋ ಪೈಲೆಟ್‌ ರೈಲು ನಿಲ್ಲಿಸಿದ್ದು ಮಾತ್ರವಲ್ಲದೆ, ಟ್ರ್ಯಾಕ್ ಮೇಲೆ ಬಿದ್ದು ಒದ್ದಾಡುತ್ತಿದ್ದ ವೃದ್ಧನ ಸಹಾಯಕ್ಕೆ ಧಾವಿಸಿದ್ದಾರೆ. ಕಾಲು ಎಡವಿ ಹಳಿ ಮೇಲೆ ಬಿದ್ದಿದ್ದ ವೃದ್ಧನನ್ನು ಮೇಲ್ಕಕೆ ಎತ್ತಿದ್ದಾರೆ. ಬಳಿಕ ಪಕ್ಕದಲ್ಲಿ ಸುಧಾರಿಸಿಕೊಳ್ಳುವಂತೆ ಕೂರಿಸಿ ಬಳಿಕ ರೈಲು ಚಾಲನೆಗೊಳಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version