Site icon Vistara News

Lok Adalat: ಲೋಕ್ ಅದಾಲತ್‌ ದಾವೆದಾರರ ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಹಕಾರಿ: ನ್ಯಾಯಾಧೀಶ ರವಿಕುಮಾರ್

Lok Adalat hosanagara

#image_title

ಹೊಸನಗರ: ʻರಾಜ್ಯದಲ್ಲಿ ಲೋಕ್ ಅದಾಲತ್ (Lok Adalat) ಕಾರ್ಯಕ್ರಮಗಳು ನ್ಯಾಯಾಲಯದಲ್ಲಿ ನಡೆಸುತ್ತಿರುವುದರಿಂದ ಸಾರ್ವಜನಿಕರ ಅಮೂಲ್ಯ ಸಮಯದ ಜೊತೆಗೆ ನ್ಯಾಯಾಲಯದ ಸಮಯ ವ್ಯರ್ಥವಾಗುವುದಿಲ್ಲ. ದಾವೆದಾರರ ಸಂಬಂಧಗಳೂ ಗಟ್ಟಿಯಾಗಿ ಉಳಿಯಲು ಸಹಕಾರಿಯಾಗುತ್ತದೆʼ ಎಂದು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ಕೆ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೊಸನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ (ಫೆ.೧೧) ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ,‌ ʻಸಿವಿಲ್ ಕೇಸ್, ಕ್ರಿಮಿನಲ್ ಕೇಸ್ ಗಳು ನಡೆಯುವುದು ಸಹಜ. ಆದರೆ ಆ ಕೇಸುಗಳನ್ನು ತಿಂಗಳು, ವರ್ಷಗಳವರೆಗೆ ಎಳೆಯುವುದಕ್ಕಿಂತ ಎದುರುದಾರರು ಮತ್ತು ದೂರು ನೀಡಿದವರು ರಾಜಿ ಮಾಡಿಕೊಂಡು ನೆಮ್ಮದಿಯಿಂದ ಬದುಕುವುದು ದೊಡ್ಡಗುಣ. ರಾಜಿ ಸಂಧಾನಕ್ಕಾಗಿಯೇ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಜಾರಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ರಾಜಿ ಮಾಡಲು ಸಾಧ್ಯವಾಗುವಂತಹ ಪ್ರಕರಣಗಳನ್ನು ಎದುರುದಾರ ಮತ್ತು ದೂರುದಾರರ ಸಮ್ಮುಖದಲ್ಲಿ ನ್ಯಾಯಬದ್ಧವಾದ ತೀರ್ಮಾನಗಳನ್ನು ಮಾಡಿ ರಾಜಿ ಮಾಡಲಾಗುವುದು. ನ್ಯಾಯಾಲಯದಲ್ಲಿರುವ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತʼ ಎಂದರು.

ಇದನ್ನೂ ಓದಿ: JDS Pancharatna: ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಮಾಡಲು ಜೆಡಿಎಸ್‌ಗೆ ಒಂದು ಅವಕಾಶ ನೀಡಿ: ಎಚ್‌.ಡಿ.ಕುಮಾರಸ್ವಾಮಿ

ಹೊಸನಗರದ ಹಿರಿಯ ವ್ಯವಹಾರ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಲತಾ ಕೆ ಮಾತನಾಡಿ, ʻರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಹಿರಿಯ ಶ್ರೇಣಿ ನ್ಯಾಯಾಲಯ 97 ಪ್ರಕರಣಗಳು ಅದಾಲತ್‌ಗೆ ಬಂದಿದ್ದು ಅದರಲ್ಲಿ 14 ಪ್ರಕರಣಗಳನ್ನು ಇತ್ಯರ್ಥಪಡಿಸುವುದರ ಜೊತೆಗೆ 65,72,289 ರೂ. ಮತ್ತು ಪ್ರಧಾನ ವ್ಯವಹಾರ ನ್ಯಾಯಾಲಯದಿಂದ 801 ಪ್ರಕರಣಗಳಲ್ಲಿ 712 ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರ ಜೊತೆಗೆ 41,34,960 ರೂಪಾಯಿಗಳು ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ 516 ಪ್ರಕರಣಗಳಲ್ಲಿ 446 ಪ್ರಕರಣಗಳನ್ನು ಇತ್ಯರ್ಥಪಡಿಸಿ 16,14,508 ರೂಪಾಯಿಗಳನ್ನು ಇತ್ಯರ್ಥಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಲೋಕ್ ಅದಾಲತ್ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು‌ʼ ಎಂದರು.

ಇದನ್ನೂ ಓದಿ: Amit Shah in Karavali : ಕ್ಯಾಪಿಟಲಿಸಂ, ಕಮ್ಯುನಿಸಂ ವಿರುದ್ಧ ಗೆದ್ದ ಕೋ-ಆಪರೇಟಿಸಂ; ಬೊಮ್ಮಾಯಿ ವ್ಯಾಖ್ಯಾನ

ಮದುವೆಯಾಗಿ 9 ವರ್ಷವಾಗಿದ್ದ ವೀರೇಶ್ ಮತ್ತು ಉಷಾ ಅವರ ಸಂಸಾರದಲ್ಲಿ ಇತ್ತೀಚೆಗೆ ಬಿರುಕು ಸೃಷ್ಟಿಯಾಗಿಬೇರೆಯಾಗಿದ್ದರು. ಅವರನ್ನು ಹೊಸನಗರ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆ ಹಾಗೂ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಲತಾ ಅವರು ಈ ರಾಷ್ಟ್ರೀಯ ಅದಾಲತ್ ಕಾರ್ಯಕ್ರಮದಲ್ಲಿ ಒಂದು ಮಾಡಿದರು.

ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್, ಹಿರಿಯಪ್ಪ, ಷಣ್ಮುಖಪ್ಪ, ಚಂದ್ರಪ್ಪ, ಕೆ.ಎಸ್. ವಿನಾಯಕ, ವೈ.ಪಿ ಮಹೇಶ್, ಗುರುಕಿರಣ್, ಬಸವರಾಜ್ ಮಂಡಾಣಿ ಗುರುರಾಜ್, ಅಮೃತ ದೂನ, ಸವಿತಾ, ಶರಣಪ್ಪ, ಗುರುಮೂರ್ತಿ, ಉಮೇಶ್, ವಿನೋದ, ಗೀತಾ, ರೇಖಾ, ಪ್ರೀತಿ, ಸುನಿಲ್, ಗುರುರಾಜ್, ಈರಪ್ಪ, ಲೋಕೇಶ್ ಲೋಕಪ್ಪ ನ್ಯಾಯಾಲಯದ ಎಲ್ಲಾ ನ್ಯಾಯಾವಾದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Kantara Movie: ಕಾಂತಾರ-2ಗೆ ಊರ್ವಶಿ ರೌಟೇಲಾ? ರಿಷಬ್‌ ಶೆಟ್ಟಿ ಜತೆ ಫೋಟೊ ಹಂಚಿಕೊಂಡ ನಟಿ

Exit mobile version