Site icon Vistara News

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Lok Sabha Election 2024

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಕಾರವಾರದಲ್ಲಿ ಭವ್ಯ ಮೆರವಣಿಗೆಯೊಂದಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ರಾಜ್ಯ ಪ್ರಧಾ‌ನಕಾರ್ಯದರ್ಶಿ ಸುನೀಲ್‌ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರೂಪಾಲಿ ಎಸ್ ನಾಯ್ಕ್ , ಕುಮಟಾ ಶಾಸಕರಾದ ದಿನಕರ ಶೆಟ್ಟಿ ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ ಉಪಸ್ಥಿತರಿದ್ದರು.

ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಒಟ್ಟು 16.76 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ವಾರ್ಷಿಕ ಆದಾಯ ವೈಯಕ್ತಿಕ 36,31,300 ರೂಪಾಯಿ, ಅವಿಭಕ್ತ ಕುಟುಂಬದ ಆದಾಯ 45,18,753 ರೂ, ಎರಡನೇ ಪುತ್ರಿ ರಾಜಲಕ್ಷ್ಮೀ ಆದಾಯ 5,51,540 ರೂಪಾಯಿ ಇದೆ. ಕೈಯಲ್ಲಿರುವ ಹಣ 5 ಲಕ್ಷ ರೂ, ಅವಿಭಕ್ತ ಕುಟುಂಬದ ಬಳಿ 1 ಲಕ್ಷ ರೂ, ವಿವಿಧ ಬ್ಯಾಂಕುಗಳಲ್ಲಿರುವ ಎಫ್‌ಡಿ- 1,11,48,727 ರೂ, ಪತ್ನಿ ಬಳಿ 4,72,053 ರೂ, ಅವಿಭಕ್ತ ಕುಟುಂಬಕ್ಕೆ ಸೇರಿದ್ದು 1,08,69,516 ರೂ, ಎರಡನೇ ಪುತ್ರಿ ರಾಜಲಕ್ಷ್ಮೀ ಬಳಿ 8,53,776 ರೂಪಾಯಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ಕಾಗೇರಿ ಅವರ ಉಳಿತಾಯ ಖಾತೆಯಲ್ಲಿ 3,04,81,874 ರೂ., ಪತ್ನಿ ಖಾತೆಯಲ್ಲಿ 8,07,552, ಅವಿಭಕ್ತ ಕುಟುಂಬದ್ದು 2,15,34,528, ಅವಿಭಕ್ತ ಕುಟುಂಬದ ಚಾಲ್ತಿ ಖಾತೆಯಲ್ಲಿ 23,50,458 ಇರುವುದಾಗಿ ತಿಳಿಸಿದ್ದಾರೆ. ವಿವಿಧ ಬಾಂಡ್‌ಗಳಲ್ಲಿನ ಹೂಡಿಕೆ 5 ಲಕ್ಷ, ಪೋಸ್ಟ್ ಹೂಡಿಕೆ 27,400 ರೂಪಾಯಿ, ಇನ್ಶುರೆನ್ಸ್ ಪಾಲಿಸಿ 21,25,219, ನೀಡಿರುವ ಸಾಲ(ದೀನದಯಾಳ್ ಟ್ರಸ್ಟ್ ಶಿರಸಿ) 24,50,000 ರೂ. ಇದೆ.

29,44,698 ಮೌಲ್ಯದ ಇನ್ನೋವಾ ಕಾರು, 79,303 ರೂ. ಸ್ಕೂಟಿ ಹೊಂದಿದ್ದು, 72,69,500 ರೂ. ಮೌಲ್ಯದ ಆಭರಣ ಹೊಂದಿದ್ದು, ಪತ್ನಿ ಬಳಿ- 61,60,000 ರೂ. ಮೌಲ್ಯದ ಆಭರಣ ಹೊಂದಿರುವುದಾಗಿ ತಿಳಿಸಿದ್ದಾರೆ.

ಚರಾಸ್ತಿಯ ಒಟ್ಟು ಮೌಲ್ಯ

ವೈಯಕ್ತಿಕ 5,78,77,221 ರೂ.
ಪತ್ನಿ- 79,32,605 ರೂ.
ಅವಿಭಕ್ತ ಕುಟುಂಬದ್ದು- 3,48,54,502 ರೂ.
ಎರಡನೇ ಪುತ್ರಿ ರಾಜಲಕ್ಷ್ಮೀ- 12,54,676 ರೂ.
ಮೂರನೇ ಪುತ್ರಿ ಶ್ರೀಲಕ್ಷ್ಮೀ- 4,90,000 ರೂ.

ಸ್ಥಿರಾಸ್ತಿಯ ಮೌಲ್ಯ

ವೈಯಕ್ತಿಕ- 4,45,00000
ಪತ್ನಿ- 2,05,00,000

ಇದನ್ನೂ ಓದಿ | Lok Sabha Election 2024: ಕೆ.ಎಸ್‌.ಈಶ್ವರಪ್ಪ 35.86 ಕೋಟಿ ರೂ. ಒಡೆಯ; ಪತ್ನಿಗೆ ಕೊಟ್ಟ ಸಾಲ ಎಷ್ಟು?

ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ 15.53 ಕೋಟಿ ರೂಪಾಯಿ ಒಡೆಯ

ಕೊಪ್ಪಳ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಕುಟುಂಬವು 15.53 ಕೋಟಿ ರೂಪಾಯಿ ಒಡೆಯರಾಗಿದ್ದಾರೆ. ಅವರ ಬಳಿ 14.17 ಕೋಟಿ ರೂಪಾಯಿ ಸ್ಥಿರ ಹಾಗೂ ಚರಾಸ್ತಿ ಇದೆ. ಅವರ ಪತ್ನಿ ರಶ್ಮಿ ಬಳಿ 1.30 ಕೋಟಿ ರೂಪಾಯಿ ಸ್ಥಿರ ಹಾಗೂ ಚರಾಸ್ತಿ ಇದೆ.

ಇನ್ನು ರಾಜಶೇಖರ ಹಿಟ್ನಾಳ ಬಳಿ 5 ಕಾರು ಸೇರಿ 22 ವಾಹನಗಳಿವೆ. ಅವರ ಪತ್ನಿ ಬಳಿಯಲ್ಲಿ ಒಂದು ಸ್ಕೂಟಿ ಇದೆ. ರಾಜಶೇಖರ ಬಳಿ 305 ಗ್ರಾಂ ಚಿನ್ನ, ಅವರ ಪತ್ನಿ ಬಳಿಯಲ್ಲಿ 970 ಗ್ರಾಂ ಚಿನ್ನ ಹಾಗೂ
2.50 ಕೆಜಿ ಬೆಳ್ಳಿ ಇದೆ. 9 ಎಕರೆ ಕೃಷಿ, ಕೃಷಿಯೇತರ ಭೂಮಿ ಇದೆ. ರಾಜಶೇಖರ ಅವರು 10.88 ಕೋಟಿ ರೂಪಾಯಿ ಸಾಲಗಾರ ಆಗಿದ್ದು, ಪತ್ನಿ ಹೆಸರಿನಲ್ಲಿ 1.73 ಕೋಟಿ ರೂಪಾಯಿ ಸಾಲವಿದೆ.

ರಾಜಶೇಖರ ಹಾಗೂ ಅವರ ಪತ್ನಿ ಗಣಿ ನಿಯಮ ಉಲ್ಲಂಘನೆ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ರಾಜಶೇಖರ 2019 ರಲ್ಲಿ 3.06 ಕೋಟಿ ಒಡೆಯರಾಗಿದ್ದರು, ಅವರ ಪತ್ನಿ ಆಗ 3.5 ಕೋಟಿ ಮೌಲ್ಯ ಒಡತಿಯಾಗಿದ್ದರು. ಐದು ವರ್ಷದಲ್ಲಿ ಅವರ ಆಸ್ತಿಯು 12 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ಆಗ ರಾಜಶೇಖರ 2.35 ಕೋಟಿ ರೂಪಾಯಿ, ಪತ್ನಿ ರಶ್ಮಿಗೆ 1.48 ಕೋಟಿ ಸಾಲವಿತ್ತು.

ಇದನ್ನೂ ಓದಿ | First Time Voters: ಮೊದಲ ಬಾರಿ ಮತದಾನ ಮಾಡುತ್ತಿದ್ದೀರಾ? ಈ ಸಂಗತಿಗಳನ್ನು ಗಮನಿಸಿ

ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಫಿಡವಿಟ್ ವಿವರ

ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ 10.26 ಕೋಟಿ ರೂಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ. ಡಾ. ಬಸವರಾಜ ಬಳಿ 19.34 ಲಕ್ಷ ರೂಪಾಯಿ ನಗದು, 65 ಲಕ್ಷ ರೂಪಾಯಿ ಮೌಲ್ಯದ ಕಾರು, 200 ಗ್ರಾಂ ಚಿನ್ನ ಇದೆ. 66 ಲಕ್ಷ ರೂಪಾಯಿ ಮೌಲ್ಯದ 6 ಕೃಷಿ ಹಾಗೂ ಕೃಷಿಯೇತರ ಭೂಮಿ ಇದೆ. ಡಾ. ಬಸವರಾಜರಿಗೆ 5.08 ಕೋಟಿ ರೂಪಾಯಿ ಸಾಲವಿದೆ.

Exit mobile version