Site icon Vistara News

Lok Sabha Election 2024: ತುಮಕೂರು ಜೆಡಿಎಸ್ ಮುಖಂಡನಿಗೆ ಕಾಂಗ್ರೆಸ್‌ ಗಾಳ; ದೇವೇಗೌಡರ ಭೇಟಿ ಬೆನ್ನಲ್ಲೇ ರಿವರ್ಸ್‌ ಆಪರೇಷನ್!

Lok Sabha Election 2024

ತುಮಕೂರು: ಲೋಕ‌ ಸಮರ ಹೊಸ್ತಿನಲ್ಲಿ (Lok Sabha Election 2024) ತುಮಕೂರಿನಲ್ಲಿ ಆಪರೇಷನ್ ಸದ್ದು ಜೋರಾಗಿದೆ. ಈ ಬಾರಿಯ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕ ಎಚ್.ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ ಬೆನ್ನಲ್ಲೇ, ಜೆಡಿಎಸ್ ಮುಖಂಡನಿಗೆ ಕೈ ನಾಯಕರು ಗಾಳ ಹಾಕಿದ್ದಾರೆ.

ತುಮಕೂರು ‌ನಗರದ ಜೆಡಿಎಸ್ ಮುಖಂಡ ಗೋವಿಂದರಾಜು ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ಮುಂದಾಗಿರುವ ಕೈ ನಾಯಕರು, ಜೆಡಿಎಸ್‌ ಮುಖಂಡನ ಜತೆ ಗೌಪ್ಯವಾಗಿ ಸಭೆ ನಡೆಸಿದ್ದಾರೆ. ಗೋವಿಂದರಾಜು ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದು, ಅವರೊಂದಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಗೌಪ್ಯ ಸಭೆ ನಡೆದಿದೆ. ಎಚ್‌.ಡಿ.ದೇವೇಗೌಡರಿಗೆ ಟಕ್ಕರ್ ಕಾಂಗ್ರೆಸ್ ರಿವರ್ಸ್ ಆಪರೇಷನ್ ಪ್ಲ್ಯಾನ್‌ ಮಾಡಿದೆ.

ಸಚಿವ ಕೆ.ಎನ್.ರಾಜಣ್ಣ ಹಾಗೂ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿದ್ದು, ಸಭೆಯಲ್ಲಿ ಶಾಸಕ ಎಸ್.ಆರ್ ಶ್ರೀನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭಾಗಿಯಾಗಿದ್ದರು.

ಮಾತೃ ಪಕ್ಷ ಜೆಡಿಎಸ್‌ ಸೇರ್ತಾರಾ ಮಾಜಿ ಶಾಸಕ ಎಚ್.ನಿಂಗಪ್ಪ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್‌ನಲ್ಲಿದ್ದ ಕುಣಿಗಲ್ ಮಾಜಿ ಶಾಸಕ ‌ಎಚ್.ನಿಂಗಪ್ಪ ಅವರು ಮಾತೃ ಪಕ್ಷ ಜೆಡಿಎಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಶನಿವಾರ ತುಮಕೂರಿನಲ್ಲಿ ಪ್ರಚಾರ ಸಭೆಗೆ ಆಗಮಿಸಿದ್ದ ಎಚ್‌.ಡಿ.ದೇವೇಗೌಡ ಅವರು, ನಿಂಗಪ್ಪ ಮನೆಗೆ ಭೇಟಿ ನೀಡಿ ಚರ್ಚಿಸಿದ್ದರು. ಇದರಿಂದ ಮಾಜಿ ಶಾಸಕ ಕಾಂಗ್ರೆಸ್‌ ತೊರೆಯಲಿದ್ದಾರೆ ಎಂಬ ಚರ್ಚೆಗೆ ಇಂಬು ನೀಡಿದೆ.

ಇದನ್ನೂ ಓದಿ | Lok Sabha Election 2024: ಭ್ರಷ್ಟಾಚಾರ ಮರೆ ಮಾಚಲು ವಿಪಕ್ಷಗಳು ಒಗ್ಗೂಡಿವೆ; ಬಿಜೆಪಿ ವಾಗ್ದಾಳಿ

ಜೆಡಿಎಸ್‌ ಪಕ್ಷದಿಂದ ನಾಲ್ಕು ಸೋಲು ಕಂಡ ಬಳಿಕ 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ನಿಂಗಪ್ಪ ಅವರು, ನಂತರ ಕೆಜೆಪಿ, ಕಾಂಗ್ರೆಸ್‌ನಲ್ಲಿ ಸುತ್ತಾಟ ನಡೆಸಿ ಈಗ, ಮಾತೃ ಪಕ್ಷ ಜೆಡಿಎಸ್‌ ಸೇರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕೈ ನಾಯಕರನ್ನು ಸೆಳೆಯಲು ದೇವೇಗೌಡರು ಪ್ಲ್ಯಾನ್‌ ರೂಪಿಸುತ್ತಿರುವ ನಡುವೆ, ದಳಪತಿಗಳಿಗೆ ಟಕ್ಕರ್‌ ನೀಡಲು ಕಾಂಗ್ರೆಸ್‌ ನಾಯಕರು ಕೂಡ ರಿವರ್ಸ್‌ ಆಪರೇಷನ್‌ ಶುರು ಮಾಡಿದ್ದಾರೆ.

ಬಿಜೆಪಿ ಹೈಕಮಾಂಡ್‌ ಜತೆ ಮತ್ತೆ ಚರ್ಚಿಸಿ ಹೇಳುವೆನೆಂದ ಸುಮಲತಾ; ಎಚ್‌ಡಿಕೆ ಹೇಳಿದ್ದೇನು?

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ. ಈಗ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿ ಸ್ಟಾರ್‌ ಚಂದ್ರ ಅವರನ್ನು ಆಯ್ಕೆ ಮಾಡಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಕಣಕ್ಕಿಳಿದಿದ್ದಾರೆ. ಈ ನಡುವೆ ಹಾಲಿ ಸಂಸದೆ, ಸ್ವಾಭಿಮಾನಿ ಸುಮಲತಾ ಅಂಬರೀಶ್‌ (Sumalatha Ambareesh) ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಅವರು ತಮ್ಮ ಅಂತಿಮ ನಿರ್ಧಾರವನ್ನು ಏಪ್ರಿಲ್‌ 3ರಂದು ಹೇಳುವುದಾಗಿ ಈಗಾಗಲೇ ಹೇಳಿದ್ದಾರೆ. ಅಪ್ಪಿತಪ್ಪಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ಎಂಬ ಆತಂಕದ ನಡುವೆಯೇ ಇಂದು (ಭಾನುವಾರ – ಮಾ. 31) ಸುಮಲತಾ ಅವರನ್ನು ಎಚ್‌ಡಿಕೆ ಭೇಟಿ ಮಾಡಿದ್ದಾರೆ. ಈ ವೇಳೆ ಸುಮಲತಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರಾದರೂ ಇನ್ನೊಂದು ಸುತ್ತು ಬಿಜೆಪಿ ನಾಯಕರ ಜತೆ ಮಾತನಾಡಬೇಕು. ಅದಾದ ಬಳಿಕ ತಾವು ಅಭಿಮಾನಿಗಳ ಜತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನು ಹೇಳುವುದಾಗಿ ಹೇಳಿದ್ದಾರೆ. ಹೀಗಾಗಿ ಸುಮಲತಾ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಸುಮಲತಾ ಅಂಬರೀಶ್‌ ಅವರನ್ನು ಭೇಟಿಯಾದ ಎಚ್‌.ಡಿ. ಕುಮಾರಸ್ವಾಮಿ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜಕೀಯವಾಗಿ ತಮ್ಮಿಂದ ಏನೆಲ್ಲ ಸಹಕಾರ ಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಇದು ಸೌಹಾರ್ದಯುತವಾದ ಭೇಟಿಯಾಗಿದೆ. ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಕ್ಕನವರ ಸಹಕಾರ ಕೋರಿದ್ದೇನೆ. ಅಂಬರೀಶ್ ಮನೆ ನನಗೆ ಹೊಸದಲ್ಲ.‌ ಅವರು ಮಂಡ್ಯದಲ್ಲಿ ತಮ್ಮ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ನಿನ್ನೆ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೊನ್ನೆ ಇಲ್ಲಿಗೆ ಭೇಟಿ ನೀಡಿ ಹಲವು ವಿಚಾರವನ್ನು ಚರ್ಚೆ ಮಾಡಿ ಬಂದಿದ್ದಾರೆ ಎಂದು ಹೇಳಿದರು.

ಸುಮಲತಾ ಅಂಬರೀಶ್‌ ಅವರು ಏಪ್ರಿಲ್ 3ರಂದು ತೀರ್ಮಾನ ಮಾಡುತ್ತಾರೆ. ಎಲ್ಲವನ್ನೂ ಮುಕ್ತವಾಗಿ ಚರ್ಚೆ ಮಾಡಿದ್ದೇವೆ. ಅದನ್ನು ನಾನು ಇಲ್ಲಿ ಹೇಳಲು ಆಗಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.‌

ಡಿಕೆಶಿ ನನ್ನ ದೊಡ್ಡ ಹಿತೈಶಿ!

ಡಿಸಿಎಂ ಡಿ.ಕೆ. ಶಿವಕುಮಾರ್‌ ನನಗೆ ವೈರಿಯಲ್ಲ. ಅವರು ನನಗೆ ದೊಡ್ಡ ಹಿತೈಷಿ. ಐದು ವರ್ಷ ಸರ್ಕಾರ ಸಂಪೂರ್ಣ ನಡೆಸಲಿ ಎಂದು 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ಟೆವು ಎಂದು ಪದೇ ಪದೆ ಹೇಳುತ್ತಿದ್ದಾರೆ. ಐದು ವರ್ಷ ನಾಮ್‌ಕಾವಸ್ತೆಯಾಗಿ ಅಧಿಕಾರ ಕೊಟ್ಟರು. ಒಂದು ದಿನವೂ ಅಧಿಕಾರವನ್ನು ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತಿರುಗೇಟು ಕೊಟ್ಟರು.

ಯಾರು ಶತ್ರು? ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಸುಮಲತಾ ಅಂಬರೀಶ್‌ ಅವರು ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಸೂಕ್ಷ್ಮವಾಗಿ ಹೆಜ್ಜೆ ಇಡುತ್ತೇನೆ: ಸುಮಲತಾ ಅಂಬರೀಶ್

ಎಚ್‌ಡಿಕೆ ಭೇಟಿ ಬಳಿಕ ಸುಮಲತಾ ಅಂಬರೀಶ್ ಮಾತನಾಡಿ, ಕುಮಾರಸ್ವಾಮಿಯವರು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ನಾನು ಏಪ್ರಿಲ್ 3ರಂದು ಮಂಡ್ಯದಲ್ಲಿ ತೀರ್ಮಾನ ಹೇಳುವುದಾಗಿ ಹೇಳಿದ್ದೇನೆ. ಆ ಸಭೆಯಲ್ಲಿ ದರ್ಶನ್, ಅಭಿಷೇಕ್ ಅಂಬರೀಶ್ ಇರುತ್ತಾರೆ. ನಾನು ರಾಜಕೀಯವಾಗಿ ಆ ಸಭೆಯನ್ನು ಕರೆದಿಲ್ಲ. ರಾಜಕೀಯವಾಗಿ 2019ಕ್ಕೂ ಮುಂಚೆ ಯಾವುದೇ ಅನುಭವ ಇರಲಿಲ್ಲ. ಆ ಬಳಿಕ ಐದು ವರ್ಷಗಳಲ್ಲಿ ಒಂದಷ್ಟು ಪಾಠ ಕಲಿಸಿದೆ. ರಾಜಕೀಯ ಚದುರಂಗದಾಟ ಅನ್ನೋದು ಗೊತ್ತಾಗಿದೆ. ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಮುನ್ನ ಸೂಕ್ಷ್ಮವಾಗಿ ಹೆಜ್ಜೆ ಇಡುತ್ತೇನೆ. ಮಂಡ್ಯ ಜಿಲ್ಲೆಯ ಜನರಿಗೆ ಅನುಕೂಲ ಆಗಲೆಂದು ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಜನರ ಹಿತದೃಷ್ಟಿಯನ್ನಿಟ್ಟುಕೊಂಡು ತೀರ್ಮಾನ

ಕಾಂಗ್ರೆಸ್ ನಾಯಕರು ಅವರವರ ಪಕ್ಷದ ಪರ ಹೇಳಿಕೆ ಕೊಡುತ್ತಾರೆ. ಆದರೆ, ನಾನು ಜಿಲ್ಲೆಯ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ನನ್ನ ಜತೆ ಇರುವ ಬೆಂಬಲಿಗರನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅವರ ಹಿತವನ್ನೂ ನಾನು ಕಾಯಬೇಕು ಅಲ್ಲವೇ? ಎಂದು ಸುಮಲತಾ ಅಂಬರೀಶ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ | IT Notice : ಕಾಂಗ್ರೆಸ್​ಗೆ ಮತ್ತೊಂದು ಆದಾಯ ತೆರಿಗೆ ನೋಟಿಸ್; 3,567 ಕೋಟಿ ರೂ. ಪಾವತಿಸುವಂತೆ ಸೂಚನೆ

ಡಿಕೆಶಿ ಹೇಳಿಕೆಗೆ ಕಿಡಿ

ವಿಷ- ವೈರಿ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್‌, ಡಿಕೆಶಿ ಹೇಳಿಕೆ ನನಗೆ ಆಶ್ಚರ್ಯ ಮೂಡಿಸಿದೆ. ಹಾಗಾದರೆ ಕಾಂಗ್ರೆಸ್‌ಗೆ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ. ಕಾಂಗ್ರೆಸ್‌ಗೆ ಅಂಬರೀಶ್ ಏನು ಅನ್ಯಾಯ ಮಾಡಿದ್ದರು? 25 ವರ್ಷ ಅಂಬರೀಶ್ ಕಾಂಗ್ರೆಸ್‌ಗೆ ಸೇವೆ ಸಲ್ಲಿಸಿದ್ದರು. ಈ ಐದು ವರ್ಷದಲ್ಲಿ ಕಾಂಗ್ರೆಸ್ ನಾಯಕರಿಗೆ ಅದು ನೆನಪಾಗಲಿಲ್ಲವಾ? ನಾನೂ ಹಾಗೆಯೇ ಪ್ರಶ್ನೆ ಮಾಡಬಹುದಲ್ವಾ? ಡಿ.ಕೆ. ಶಿವಕುಮಾರ್ ಈಗ ಈ ವಿಷಯ ಮಾತನಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರು ಯಾರು ಯಾರು ಸಂಪರ್ಕ ಮಾಡಿದ್ದಾರೆ? ಮಾಡುತ್ತಿದ್ದಾರೆ ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ ಎಂದು ಹೇಳಿದರು.

Exit mobile version