Site icon Vistara News

Lok Sabha Election 2024: ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ರಾಜ್ಯ ಒಕ್ಕಲಿಗ ಸಂಘ; ಡಿಕೆಶಿಯನ್ನು ಸಿಎಂ ಮಾಡುವುದಾಗಿ ಶಪಥ

DCM D K Shivakumar Latest statement in Belagavi

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದೆ. ಬಿಜೆಪಿ, ಜೆಡಿಎಸ್‌ನಲ್ಲಿ ಒಕ್ಕಲಿಗರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿರುವ ಸಂಘದ ಮುಖಂಡರು, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಅವರು ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಂಘಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಒಕ್ಕಲಿಗ ಸಮುದಾಯಕ್ಕೆ ಶೇ. 11 ಮೀಸಲಾತಿ ನೀಡಿದರು. ಕಾಲೇಜು ಕಟ್ಟಲು ಕಾಂಗ್ರೆಸ್ ಸರ್ಕಾರ ಬನಶಂಕರಿ ಯಲ್ಲಿ 9 ಎಕರೆ ಭೂಮಿ ನೀಡಿದೆ. ಈಗ ಡಿಕೆಶಿಯವರು ಒಕ್ಕಲಿಗ ಸಂಘದ ಮೆಡಿಕಲ್ ಕಾಲೇಜಿಗೆ ಕೋಟ್ಯಂತರ ಬಡ್ಡಿ ಹಣ ಮನ್ನಾ ಮಾಡಲು ಮುಂದಾಗಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.

ಇನ್ನು ಇದು ಕಾಂಗ್ರೆಸ್ ಪ್ರೇರಿತ ಸುದ್ದಿಗೋಷ್ಠಿ ಎಂದು ಒಪ್ಪಿಕೊಂಡ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತಯ್ಯ, ದೇವೆಗೌಡರ ವಿರುದ್ಧ ಕಿಡಿ ಕಾರಿದರು. ಒಕ್ಕಲಿಗ ಸಮಾಜದ ಮತ್ತೊಂದು ಪೀಠವನ್ನು ಜೆಡಿಎಸ್ ಸ್ಥಾಪಿಸಿತು. ರಾಜಕೀಯವಾಗಿ ಎಚ್‌.ಎನ್. ನಂಜೇಗೌಡ. ಬೈರೇಗೌಡ, ನಾಗೇಗೌಡ, ಬಚ್ಚೇಗೌಡ. ನಟ ಅಂಬರೀಶ್ ಅವರನ್ನು ಪಕ್ಷದಿಂದ ಹೊರ ಹಾಕಿದ್ದ ಜೆಡಿಎಸ್. ಬಿಜೆಪಿ ಪಕ್ಷದಿಂದ ಕೂಡ ಒಕ್ಕಲಿಗ ಸಂಘಕ್ಕೆ ಯಾವುದೇ ಕೊಡುಗೆ ಇಲ್ಲ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಶ್ರೀಗಂಧದ ಕಾವಲು ಒಕ್ಕಲಿಗ ಸಂಘದ ಜಾಗವನ್ನು ಬೇರೆಯವರಿಗೆ ಮಂಜೂರು ಮಾಡಿದರು ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Priyanka Gandhi: ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ ಮಂಗಳಸೂತ್ರ ಉಳಿಸೋದು ಗೊತ್ತಿಲ್ಲವೇ?; ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

ಪ್ರೊ.ಕೃಷ್ಣೇಗೌಡ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರನ್ನು ನಾವು ಮುಖ್ಯಮಂತ್ರಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ ಅವರು, ಈಗ ನಮ್ಮ ಜನಾಂಗ ನೋವು ಅನುಭವಿಸುತ್ತಿದೆ. ಮುಂದೆಯೂ ಈ ನೋವು ಅನುಭವಿಸುವುದು ಬೇಡ. ಆಗಾಗಿ ನಮ್ಮ ಜನಾಂಗದವರಿಗೆ ಕಣ್ಣು ತೆರೆಸಬೇಕು ಅಂತ ಸುದ್ದಿಗೋಷ್ಠಿ ಮಾಡಿದ್ದೇವೆ. ಅಪ್ಪ , ಮಕ್ಕಳಿಗೆ ಸಪೋರ್ಟ್ ಮಾಡಿ ನಮ್ಮ ಜನಾಂಗ ಮೋಸ ಹೋಗಿದೆ ಎಂದು ಕಣ್ಣೀರು ಹಾಕುತ್ತಿದ್ದೇವೆ. ಅವರ ಮೊಮ್ಮಗ ಬಿಟ್ಟರೆ ಬೇರೆ ಯಾರು ಅಭ್ಯರ್ಥಿ ಇಲ್ಲವಾ? ನಾನು ಕೂಡ ಪ್ರೋಫೆಸರ್‌. ಅವರು ಮೂರೂ ಕಡೆ ಸೋಲುತ್ತಾರೆ ಎಂದು ದೇವೇಗೌಡ ಕುಟುಂಬದ ವಿರುದ್ಧ ಕಿಡಿಕಾರಿದರು.

Exit mobile version