Site icon Vistara News

Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು

Lokayukta officials arrest PSI, driver while accepting bribe in ranebennur

ಹಾವೇರಿ: 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಮಯದಲ್ಲಿ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆ ಪಿಎಸ್ಐ ಮತ್ತು ವಾಹನ ಚಾಲಕ ಲೋಕಾಯುಕ್ತ (Lokayukta Raid) ಬಲೆಗೆ ಬಿದ್ದಿದ್ದಾರೆ. ಪಿಎಸ್ಐ ಸುನೀಲ್‌ ತೇಲಿ ಮತ್ತು ವಾಹನ ಚಾಲಕ ಸಚಿನ್‌ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಫಿರೋಜ್ ಎಂಬುವವರ ಮನೆ ಬಾಡಿಗೆ ವಸೂಲಿ‌ ಮಾಡಿಸಿಕೊಡುವ ವಿಚಾರಕ್ಕೆ ಪಿಎಸ್‌ಐ 50 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಅದರಲ್ಲಿ 40 ಸಾವಿರ ರೂಪಾಯಿ ಪಡೆಯುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ಪಿಎಸ್‌ಐಗೆ ಸಹಕರಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Brave daughter : ಹಾವು ಕಡಿತಕ್ಕೆ ಒಳಗಾದ ತಾಯಿಯನ್ನು ಬಾಯಿಯಿಂದ ವಿಷ ಹೊರಗೆಳೆದು ರಕ್ಷಿಸಿದ ಮಗಳು

ಬಳ್ಳಾರಿ ಕೇಂದ್ರ ಕಾರಾಗೃಹದ ಮೇಲೆ ಎಸ್‌ಪಿ ತಂಡ ದಾಳಿ: ಒಂದು ಮೊಬೈಲ್, ಮೂರು ಸಿಮ್ ವಶ

ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ (Bellary Central Jail) ನಿಷೇಧಿತ ವಸ್ತುಗಳನ್ನು ಬಳಸುತ್ತಿರುವ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರ ನೇತೃತ್ವದ ಸುಮಾರು‌ 100ಕ್ಕೂ ಹೆಚ್ಚು ಸಿಬ್ಬಂದಿ‌‌‌ ಅಧಿಕಾರಿಗಳ ತಂಡ ದಾಳಿ ಮಾಡಿ ಒಂದು ಮೊಬೈಲ್ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆಸಿದೆ. ಈ ಹಿಂದೆ ಎಸ್‌ಪಿ ನೇತೃತ್ವದಲ್ಲಿ ಹಲವು ಬಾರಿ ದಾಳಿ ನಡೆಸಿದ‌ ಉದಾಹರಣೆಗಳು ಇವೆ.

ಮಂಗಳವಾರ ಬೆಳಗ್ಗೆ 6.30ಕ್ಕೆ ದಾಳಿ ಮಾಡಿದ ಅಧಿಕಾರಿಗಳು ಕಾರಾಗೃಹದ ಎಲ್ಲ ಕೋಣೆಗಳನ್ನು ಶೋಧನೆ ಮಾಡಿದ್ದು, ಶೋಧನೆ ವೇಳೆಯಲ್ಲಿ ಒಂದು ಸಿಮ್ ಇರುವ ಮೊಬೈಲ್ ಹಾಗೂ 3 ಸಿಮ್‌ ಕಾರ್ಡ್‌ಗಳು ಸಿಕ್ಕಿವೆ. ಸುಮಾರು 2 ತಾಸುಗಳ‌ ಕಾಲ ಶೋಧನಾ ಕಾರ್ಯ ಮಾಡಿದರು.

ಇದನ್ನೂ ಓದಿ: Karnataka Election: ಯುಗಾದಿಗೆ ಕಾಂಗ್ರೆಸ್‌ ರಣಕಹಳೆ: ಮೊದಲ ಪಟ್ಟಿ ಬುಧವಾರ ಬಿಡುಗಡೆ ಎಂದ ಕೆ.ಜೆ. ಜಾರ್ಜ್‌

ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಡಿವೈಎಸ್‌ಪಿ ಬಸವರಾಜ್ ಕೆ., ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸ ಮೇಟಿ, ಸಿದ್ದರಾಮೇಶ್ವರ, ಎಂ. ಎನ್. ಸಿಂಧೂರು, ವಾಸು ಕುಮಾರ್, ಬಸವರಾಜ ಪಾಟೀಲ್, ಗುಂಡೂರಾವ್, ಅಂಬರೇಶ್ ಹುಬ್ಬಳ್ಳಿ, ಅಮೋಫ್, ಗೋವಿಂದ ಸುಮಾರು 100 ಸಿಬ್ಬಂದಿ ಭಾಗಿಯಾಗಿದ್ದರು. ಈ‌ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಲತಾ, ಉಪಾಧೀಕ್ಷಕ ಅಂಬರೀಶ್ ಸೇರಿದಂತೆ ಇತರರು ಇದ್ದರು.

Exit mobile version