Site icon Vistara News

Fire tragedy | ಯಲ್ಲಾಪುರ ಆರತಿಬೈಲ್‌ ಘಾಟಿಯಲ್ಲಿ ಕಬ್ಬಿಣ ಹೊತ್ತು ಸಾಗುತ್ತಿದ್ದ ಲಾರಿ ಬೆಂಕಿಗೆ ಆಹುತಿ!

Lorry burnt

ಶಿರಸಿ: ಉತ್ತರ‌ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಆರತಿಬೈಲ್ ಘಾಟಿ ಬಳಿ ಕಬ್ಬಿಣದ ಸರಕು ಸಾಗಿಸುತ್ತಿದ್ದ ಲಾರಿಯೊಂದು (Fire tragedy) ಹೊತ್ತು ಉರಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

ಬುಧವಾರ ರಾತ್ರಿ 3 ಗಂಟೆ ಸುಮಾರಿಗೆ ಮಂಗಳೂರಿಗೆ ಕಬ್ಬಿಣದ ರಾಡ್ ಹೊತ್ತೊಯ್ಯುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಗ್ಗತ್ತಲಿನಲ್ಲೇ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದಾಗಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ | Fire Accident | ಬೆಳಗಾವಿಯಲ್ಲಿ ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಮನೆ; ಅಪಾರ ಹಾನಿ, ಪ್ರಾಣಾಪಾಯದಿಂದ ಪಾರು!

Exit mobile version