Site icon Vistara News

Accident | ಕೊರಟಗೆರೆ ಬಳಿ ಬೈಕ್‌ಗೆ ಲಾರಿ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಮೃತ್ಯು

lorry hits bike

ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಟ್ಟಿಅಗ್ರಹಾರ ಸಮೀಪ ಬೆಳಗಿನ ಜಾವ ನಡೆದಿರುವ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡುಕೊಂಡಿದ್ದಾರೆ.

ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ವೆಂಕಟರಾಮಪ್ಪ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ವೆಂಕಟರಾಮಪ್ಪ ಬೆಂಗಳೂರಿನ ವಿವೇಕ ನಗರ ವಾಸಿಯಾಗಿದ್ದು, ಇಲ್ಲಿಗೆ ಬಂದಿದ್ದರು. ಲಾರಿ ಚಾಲಕನ ಅತಿ ವೇಗವೇ ಘಟನೆಗೆ ಕಾರಣವೆಂದು ಪೊಲೀಶರು ತಿಳಿಸಿದ್ದಾರೆ. ಕೊರಟಗೆರೆ ಪೊಲೀಸರು ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಇಬ್ಬರ ದುರ್ಮರಣ
ಬೆಳಗಾವಿ ಜಿಲ್ಲೆಯ ‌ರಾಮದುರ್ಗ ತಾಲೂಕಿನ ‌ಹಲಗತ್ತಿ ಗ್ರಾಮದ ಬಳಿ ಶನಿವಾರ ರಾತ್ರಿ ಬೈಕ್-ಟ್ರಕ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಣಮಾಪುರದ ಅರ್ಜುನ ಬಂಡಿವಡ್ಡರ (40), ಓಬಳಾಪುರದ ಸುವರ್ಣ ಹೊಳೆನ್ನವರ (28) ಮೃತ‌ ದುರ್ದೈವಿಗಳು. ಮುದಕವಿಯಿಂದ ಹಲಗತ್ತಿ ಕಡೆಗೆ ಬರುತ್ತಿದ್ದ ಬೈಕ್, ಹಲಗತ್ತಿಯಿಂದ ಮದಕವಿ ಕಡೆಗೆ ಹೊರಟಿದ್ದ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು.

ಹಾಸನದಲ್ಲಿ ಒಂಬತ್ತು ಮಂದಿ ಸಾವು
ಟೆಂಪೋ ಟ್ರಾವೆಲರ್, ಹಾಲಿನ ಲಾರಿ ಹಾಗೂ ಸಾರಿಗೆ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಮಂದಿ ಸಾವನ್ನಪ್ಪಿ ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಾಂಧಿನಗರದಲ್ಲಿ ಶನಿವಾರ ರಾತ್ರಿ ನಡೆದಿತ್ತು. ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ತೆರಳುತ್ತಿದ್ದರು. ಊರಿಗೆ ತಲುಪಲು ಎರಡರಿಂದ ಮೂರು ನಿಮಿಷವಿರುವಾಗಲೇ ಅಪಘಾತ ಸಂಭವಿಸಿದೆ.

ಇದನ್ನೂ ಓದಿ | Accident | ಹಾಸನದಲ್ಲಿ ಭೀಕರ ಅಪಘಾತ, ಐವರು ಮಕ್ಕಳು ಸೇರಿ 9 ಮಂದಿ ದುರ್ಮರಣ

Exit mobile version