Site icon Vistara News

Road accident | ಲಾರಿಯ ಟಯರ್‌ ಬ್ಲಾಸ್ಟ್‌ ಆಗಿ ಚಾಲಕ ಸ್ಥಳದಲ್ಲೇ ಮೃತ್ಯುವಶ, ಚೆಕ್‌ ಮಾಡಲು ಇಳಿದಾಗ ಸ್ಫೋಟ!

lorry tyre blast

ತುಮಕೂರು: ಲಾರಿಯ ಟಯರ್‌ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಘಟನೆ (Road accident) ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಬಳಿ ಮಂಗಳವಾರ ನಡೆದಿದೆ. ವೆಂಕಟೇಶ್ (43) ಮೃತಪಟ್ಟ ಚಾಲಕ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್ ಅವರು ಲಾರಿ ಚಾಲಕರು. ಮಂಗಳವಾರ ವಾಹನ ಓಡಿಸುವಾಗ ಲಾರಿ ಟಯರ್‌ ಯಾಕೋ ಹೀಟ್‌ ಆದ ಹಾಗಿದೆಯಲ್ವಾ ಅನಿಸಿತು. ಚೆಕ್‌ ಮಾಡಿಯೇ ಬಿಡೋಣ ಎಂದು ಅವರು ಲಾರಿ ನಿಲ್ಲಿಸಿ, ಇಳಿದು ಚೆಕ್‌ ಮಾಡಲು ಶುರು ಮಾಡಿದರು. ಹೀಗೆ ಚೆಕ್‌ ಮಾಡುವ ವೇಳೆಯೇ ಟಯರ್‌ ಸ್ಫೋಟಗೊಂಡು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು.

ಮೃತ ವೆಂಕಟೇಶ್‌ ಅವರ ದಾಖಲೆ

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಸಾಮಾನ್ಯವಾಗಿ ಕೆಲವೊಮ್ಮೆ ವಾಹನ ಚಲಿಸುವಾಗಲೇ ಟಯರ್‌ ಸ್ಫೋಟಗೊಳ್ಳುವುದು ಇದೆ. ಹಾಗಾದಾಗ ಮತ್ತೊಂದು ಟಯರ್‌ನ ಆಧಾರದಲ್ಲಿ ವಾಹನ ಮುಂದಕ್ಕೆ ಚಲಿಸಲು ಅವಕಾಶವಿರುತ್ತದೆ. ಆದರೆ, ಇಲ್ಲಿ ಟಯರ್‌ ಬಿಸಿಯಾಗಿದೆಯೇನೋ ಅಂತ ಅನಿಸಿದ್ದೇ ವೆಂಕಟೇಶ್‌ ಪಾಲಿಗೆ ಮೃತ್ಯುವಾಗಿದೆ. ಅವರು ಅದನ್ನು ಪರಿಶೀಲಿಸಲು ಇಳಿದಿದ್ದೇ ಸಾವಿಗೆ ಆಹ್ವಾನ ನೀಡಿದಂತಾಗಿದೆ!

ಇದನ್ನೂ ಓದಿ | Road Accident Deaths | ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆವರೆಗೆ ವಾಹನ ಓಡಿಸಬೇಡಿ! ಇದಕ್ಕೇನು ಕಾರಣ?

Exit mobile version