Site icon Vistara News

Love Agriculture : ಕಾಲೇಜಿನಲ್ಲಿ ನಾಟಿ ಪಾಠ, ಕೆಸರಲ್ಲಿ ಮಿಂದೇಳುತ್ತಾ ನೇಗಿಲ ಯೋಗಿಗಳಾದ ವಿದ್ಯಾರ್ಥಿಗಳು

Agriculture lessons

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ (Kukke Subrahmanya Temple) ಆಡಳಿತದಡಿ ಬರುವ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು (SS PU College Students) ಭತ್ತದ ಗಿಡ ನಾಟಿ (Paddy Cultivation) ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ (Farmer Ramanna) ಎಂಬವರ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ ಪಾಠ (Lessons of Agriculture) ಮಾಡಲಾಗಿತ್ತು. ಜನಪದ ಹಾಡು ಹೇಳುತ್ತಾ ಗದ್ದೆಗಳಲ್ಲಿ ನೇಜಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ನೇಗಿಲ ಯೋಗಿಗಳಾಗಿದ್ದರು (Love agriculture). ನೇಜಿ ನಾಟಿ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಕೃಷಿ ಪಾಠದ ಜೊತೆಗೆ ಮಣ್ಣಿನಿಂದ ದೇಹಾರೋಗ್ಯದ ಜ್ಞಾನವೂ ದಕ್ಕಿತು.

ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಗದ್ದೆಯಲ್ಲಿ ನಾಟಿ

ವಿದ್ಯಾರ್ಥಿ ಜೀವನದಲ್ಲಿ ಕೇವಲ ಪಠ್ಯ ಶಿಕ್ಷಣ ಮಾತ್ರವಲ್ಲದೆ ತಮ್ಮ ಜೀವನಕ್ಕೆ ಬೇಕಾದ ಅಗತ್ಯ ಜ್ಞಾನವನ್ನೂ ಪಡೆಯಬೇಕು ಅನ್ನೋದು ಇದರ ಉದ್ದೇಶವಾಗಿತ್ತು. ಕೃಷಿಕರ ಮಕ್ಕಳಾಗಿದ್ರೂ ಶಿಕ್ಷಣದ ಒತ್ತಡದ ಕಾರಣದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳೋದು ಕಷ್ಟವಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಕೃಷಿ ಪಾಠ ಮಾಡುವ ಮೂಲಕ ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆಯ ಮೂಲಕ ಬೇಸಾಯದ ಸಮಯದಲ್ಲಿ ಹಾಡುವ ಜನಪದ ಹಾಡುಗಳ ಬಗ್ಗೆಯೂ ಮಕ್ಕಳಿಗೆ ತಿಳಿಸುವ ಕೆಲಸ ನಡೆಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದಲೇ ಭಾಗವಹಿಸಿ ಕೆಸರಿನಲ್ಲಿ ಇಳಿದು ಹಾಡು ಹೇಳಿ ನಾಟಿ ಮಾಡಿ ಒಂದು ದಿನದ ಮಟ್ಟಿಗೆ ಪರಿಪೂರ್ಣ ಕೃಷಿಕರಾಗಿ ಕೆಲಸ ಮಾಡಿದರು.

ಗದ್ದೆಯಲ್ಲಿ ನಾಟಿ ಮಾಡುತ್ತಿರುವ ಸುಬ್ರಹ್ಮಣ್ಯ ಕಾಲೇಜು ವಿದ್ಯಾರ್ಥಿಗಳು

ಇಂಪಾದ ಓಬೇಲೆ ಪಾಡ್ದನದ ಹಾಡಿಗೆ ದನಿಗೂಡಿಸಿದ ವಿದ್ಯಾರ್ಥಿಗಳು

ಗ್ರಾಮದ ಹಿರಿಯರಾದ ಮೋಂಟಿ ಅಮ್ಮ ಎಂಬವರು ಭತ್ತ ನಾಟಿ ಮಾಡುವ ವೇಳೆ ಓ..ಬೇಲೆ ಎಂಬ ತುಳುಜನಪದ ಪಾಡ್ದನದ ಹಾಡನ್ನು ಹಾಡುತ್ತಿದ್ದರೆ ಮಕ್ಕಳೂ ಕೂಡಾ ದನಿಗೂಡಿಸಿದ್ದು ವಿಶೇಷ. ಇಂದಿನ ಕಾಲದಲ್ಲಿ ಬೇಸಾಯಕ್ಕೆ ಯಂತ್ರಗಳ ಬಳಕೆ ಆಗುವ ಕಾರಣದಿಂದ ಈ ಬೇಸಾಯದ ಹಾಡು ಹಾಡುವವರು ಕಡಿಮೆಯಾಗಿದ್ದಾರೆ. ಆದರೆ ಹಿಂದೆ ಯಾವ ರೀತಿ ಹಾಡು ಹೇಳಿಕೊಂಡು ದಣಿವಾಗದಂತೆ ಕೆಲಸ ಮಾಡುತ್ತಿದ್ದರು ಅನ್ನುವುದನ್ನು ಗ್ರಾಮದ ಹಿರಿಯರು ವಿದ್ಯಾರ್ಥಿಗಳಿಗೆ ತಿಳಿಸಿದರು..

ಕಾಲೇಜಿನ ಸುಮಾರು 150ಕ್ಕೂ ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಕೃಷಿ ಜ್ಞಾನ ದೊರಕಬೇಕು ಎಂಬ ಕಾರಣಕ್ಕಾಗಿ ಜಮೀನಿನ ಮಾಲಕ ರೈತ ರಾಮಣ್ಣ ಪರ್ವತಮುಖಿ ವಿದ್ಯಾರ್ಥಿಗಳಿಗೆ ನಾಟಿ ಮಾಡಲು ಅವಕಾಶ ನೀಡಿದ್ದರು. ಕಾಲೇಜಿನ ಪ್ರಾಂಶುಪಾಲರು , ಉಪನ್ಯಾಸಕರು , ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿ ಸಂಘದ ಮುಖಂಡರು ಎಲ್ಲರೂ ಸೇರಿ ಮಕ್ಕಳಿಗೆ ಕೃಷಿ ಪಾಠ ಮಾಡುವಲ್ಲಿ ಸಹಕಾರ ನೀಡಿದ್ದರು.

ಇದನ್ನೂ ಓದಿ: Monsoon And Agriculture: ಮುಂಗಾರು ಶುರುವಾದರೆ ರೈತ ಕವಿಯಾಗುವುದೇಕೆ? ಮಳೆ ಮತ್ತು ಕೃಷಿಯ ನಂಟು ಹೇಗಿದೆ?

Exit mobile version