ಚಿಕ್ಕಬಳ್ಳಾಪುರ : ಇಲ್ಲಿನ ಶಿಡ್ಲಘಟ್ಟ ನಗರದಲ್ಲಿ ಪ್ರಿಯತಮೆ ಹಾಗೂ ಕುಟುಂಬಸ್ಥರು ಸೇರಿ ಪ್ರಿಯಕರನಿಗೆ (Assault case) ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕಿರಿಗಿಂಬಿ ಗ್ರಾಮದ ಚೇತನ್ ಎಂಬಾತ ಇಟಪ್ಪನಹಳ್ಳಿ ಗ್ರಾಮದ ಬಾಬು ಎಂಬವರ ಪುತ್ರಿ ವನಿತಾಳಿಗೆ ಪ್ರೀತಿಸಿ (Love case) ವಂಚಿಸಲು (Fraud case) ಯತ್ನಿಸಿದ್ದ.
ಪ್ರಿಯಕರ ಚೇತನ್ ವನಿತಾಳೊಂದಿಗೆ 2 ವರ್ಷ ಪ್ರೀತಿ ಹೆಸರಲ್ಲಿ ಆಟವಾಡಿದ್ದ. ಯುವತಿಯನ್ನು ಪುಸಲಾಯಿಸಿ ದೈಹಿಕ ಸಂರ್ಪಕ ಬೆಳಸಿದ್ದ. ಆಕೆ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಗರ್ಭಪಾತ ಮಾಡಿಸಲು ಪದೆಪದೇ ಒತ್ತಾಯಿಸುತ್ತಿದ್ದ. ಇಂದು ಶುಕ್ರವಾರ ಗರ್ಭಪಾತ ಮಾಡಿಸಲು ವನಿತಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಈ ವಿಷಯ ತಿಳಿದು ಯುವತಿ ಹಾಗೂ ಆಕೆಯ ಪೋಷಕರು ನಡು ರಸ್ತೆಯಲ್ಲೇ ಥಳಿಸಿದ್ದಾರೆ.
ಥಳಿಸಿ ತಾಳಿ ಕಟ್ಟಿಸಿದ ಪೋಷಕರು
ಎರಡು ವರ್ಷಗಳಿಂದ ಪ್ರೀತಿ ಹೆಸರಲ್ಲಿ ವಂಚಿಸಿ ಪರಾರಿ ಆಗುತ್ತಿದ್ದ ಚೇತನ್‌ಗೆ ಯುವತಿ ತಕ್ಕ ಪಾಠ ಕಲಿಸಿದ್ದಾಳೆ. ಪ್ರಿಯತಮೆಯ ಥಳಿತಕ್ಕೆ ಭಯಪಟ್ಟ ಚೇತನ್ ನಡು ರಸ್ತೆಯಲ್ಲೇ ತಾಳಿ ಕಟ್ಟಿದ್ದಾನೆ.