ಬೆಂಗಳೂರು: ಜೈಲಿನಿಂದಲೇ ಫೋನ್ ಮಾಡಿ ವಿವಾಹಿತೆಗೆ ಪ್ರೀತಿಸುವಂತೆ (Love Case) ಪ್ರೇಮಿಯೊಬ್ಬ ಕೊಲೆ ಬೆದರಿಕೆ (Blackmailing) ಹಾಕಿರುವ ಘಟನೆ ವರದಿ ಆಗಿದೆ. ಅಕ್ರಮಗಳ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ಸಲೀಸಾಗಿ ಮೊಬೈಲ್ ಸಿಗುತ್ತಿದೆ. ಶ್ರೀನಿವಾಸ ಎಂಬಾತ ಜೈಲು ಸೇರಿದ್ದರೂ, ಅಲ್ಲಿಂದಲೇ ಅಮಲಾ ಎಂಬಾಕೆಗೆ ಕೊಲೆ ಬೆದರಿಕೆ (Blackmail Case) ಹಾಕುತ್ತಿದ್ದಾನೆ.
ಜೈಲಿಗೆ ಕಳಿಸಿದ್ದೀಯಾ ಈಗ ನನ್ನ ನೋಡಲು ಜೈಲಿಗೆ ಬಾ, ಬರದಿದ್ದರೆ ಹೊರಗೆ ಬಂದು ಹತ್ಯೆ ಮಾಡುವುದಾಗಿ ಅಮಲಾಗೆ ಧಮ್ಕಿ ಹಾಕಿದ್ದಾನೆ. ಜೈಲಿನಲ್ಲಿ ತನ್ನೊಟ್ಟಿಗೆ ಇರುವಂತೆ ಹೇಳುತ್ತಿದ್ದಾನೆ ಎಂದು ಸಂತ್ರಸ್ಥೆ ಆರೋಪಿ ಶ್ರೀನಿವಾಸ ವಿರುದ್ಧ ಮತ್ತೊಮ್ಮೆ ದೂರು ನೀಡಿದ್ದಾರೆ.
ಇದನ್ನೂ ಓದಿ: Self Harming : ಶಾಲೆ ಪಕ್ಕದಲ್ಲಿತ್ತು ಆಟೋ ಚಾಲಕನ ಡೆಡ್‌ಬಾಡಿ; ಇದು ಕೊಲೆಯೋ? ಆತ್ಮಹತ್ಯೆಯೋ?
ಬ್ಯಾಟರಾಯನಪುರ ನಿವಾಸಿಯಾದ ಅಮಲಾ ಮದುವೆಯಾಗಿ ಪತಿಯಿಂದ ದೂರವಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಶ್ರೀನಿವಾಸ ಅಮಲಾಳನ್ನು ಮೋಹಿಸಿದ್ದ. ಆಕೆ ಹಿಂದೆ ಬಿದ್ದು ಪ್ರೀತಿಸು ಇಲ್ಲದಿದ್ದರೆ ಆ್ಯಸಿಡ್ ಹಾಕುವೆ, ಚಾಕುವಿನಿಂದ ಚುಚ್ಚಿ ಕೊಲೆ ಮಾಡುವುದಾಗಿ ಆವಾಜ್ ಹಾಕುತ್ತಿದ್ದ.
ಆತನ ಹುಚ್ಚುತನಕ್ಕೆ ಮನಸೋತು ಅಮಲಾ ಶ್ರೀನಿವಾಸ್ ಪ್ರೀತಿಗೆ ಸಮ್ಮತಿಸಿದ್ದರು. ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದರು. ಈ ನಡುವೆ ಅಮಲಾ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗ ಶ್ರೀನಿವಾಸ ಉಲ್ಟಾ ಹೊಡೆಡಿದ್ದ. ನಿನ್ನನ್ನು ಮದುವೆ ಆಗಲ್ಲ, ಜತೆಯಲ್ಲೇ ಇರು ಸಾಕು ಎಂದಿದ್ದ. ಅಲ್ಲದೇ ಇದೇ ವಿಚಾರಕ್ಕೆ ಶ್ರೀನಿವಾಸ ಮತ್ತು ಆತನ ತಾಯಿ ಸೇರಿ ಅಮಲಾ ಮೇಲೆ ಹಲ್ಲೆ ನಡೆಸಿದ್ದರು.
ಹೀಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಮಲಾ ಈ ಸಂಬಂಧ ದೂರು ದಾಖಲಿಸಿದ್ದರು. ಆರೋಪಿ ಶ್ರೀನಿವಾಸನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲು ಸೇರಿದರೂ ಬುದ್ಧಿ ಕಲಿಯದ ಶ್ರೀನಿವಾಸ, ಅಲ್ಲಿಂದಲೇ ಅಮಲಾಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಹೀಗಾಗಿ ಸಂತ್ರಸ್ಥೆ ಮಹಿಳೆ ಶ್ರೀನಿವಾಸ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ