Site icon Vistara News

Love Case : ಪ್ರಿಯಕರನ ಮೋಸಕ್ಕೆ ಮನನೊಂದು ಪ್ರಾಣ ಬಿಟ್ಟ ಯುವತಿ

self Harming by Girl

ನೆಲಮಂಗಲ: ಇಲ್ಲಿನ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ಯುವತಿಯೊಬ್ಬಳು ಪ್ರಿಯಕರ ವರ್ತನೆಗೆ ಬೇಸತ್ತು (Love Case) ನೇಣಿ ಬಿಗಿದುಕೊಂಡು (self harming) ಮೃತಪಟ್ಟಿರುವ ಘಟನೆ ಕಳೆದ ಶನಿವಾರ (ಜು. 22) ನಡೆದಿದೆ. ವಿದ್ಯಾಶ್ರೀ ಎಂಬಾಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾಶ್ರೀ ಹಾಗೂ ಅಜಯ್‌

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿದ್ಯಾಶ್ರೀ ಜತೆಗೆ ಕೆಲಸ ಮಾಡುತ್ತಿದ್ದ ಅಕ್ಷಯ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತೀಚೆಗೆ ಅಕ್ಷಯ್‌ ತನ್ನಿಂದ ದೂರವಾಗುತ್ತಿದ್ದಾನೆ, ಮೋಸವಾಗುತ್ತಿದ್ದಾನೆ ಎಂದು ಭಾವಿಸಿದ್ದಳು. ಇದರಿಂದ ಮನನೊಂದ ವಿದ್ಯಾ, ಅಕ್ಷಯ್‌ ಹೆಸರಲ್ಲಿ ಡೆತ್‌ನೋಟ್ ಬರೆದಿಟ್ಟು ಸೂಸೈಡ್‌ ಮಾಡಿಕೊಂಡಿದ್ದಾಳೆ.

ವಿದ್ಯಾ ಬರೆದಿಟ್ಟ ಡೆತ್‌ನೋಟ್‌ ನಿನ್ನೆ ಬುಧವಾರ (ಜು.26) ಸಿಕ್ಕಿದೆ. ಹೀಗಾಗಿ ಪೋಷಕರು ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಅಕ್ಷಯ್‌ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?

ವಿದ್ಯಾಶ್ರೀ ಬರೆದಿಟ್ಟ ಡೆತ್‌ನೋಟ್‌ನ ಮೊದಲ ಸಾಲಿನಲ್ಲೇ ತನ್ನ ಸಾವಿಗೆ ಅಕ್ಷಯ್‌ ಕಾರಣ. ಮಾತ್ರವಲ್ಲದೆ ನನ್ನನ್ನು ನಾಯಿಯ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದ ಎಂದು ಉಲ್ಲೇಖಿಸಿದ್ದಾಳೆ. ನನಗೆ ನೀಡಬೇಕಿದ್ದ 1,75,000 ರೂ. ವಾಪಸ್‌ ಕೊಡುವಂತೆ ಕೇಳಿದರೆ, ನನಗೂ ನನ್ನ ಕುಟುಂಬಕ್ಕೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಹಣ ಕೇಳಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ನಾನು ಡಿಫ್ರೆಶನ್‌ಗೆ ಹೋಗಿದ್ದು, ಬದುಕಲು ಆಗುತ್ತಿಲ್ಲ. ಅಮ್ಮ, ಗುರು, ಮಾವ I am Sorry Forgive Me. ಎಲ್ಲ ಹುಡುಗಿಯರಲ್ಲೂ ವಿನಂತಿ ಯಾರನ್ನು ಪ್ರೀತಿ ಮಾಡಬೇಡಿ. Good bye Too This world ಎಂದು ಬರೆದಿದ್ದಾಳೆ.

ಶೌಚಾಲಯದಲ್ಲಿ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!

ಚಿಕ್ಕಮಗಳೂರು : ಇಲ್ಲಿನ ಕೊಪ್ಪ ತಾಲೂಕಿನ (Chikkamagaluru News) ಮೊರಾರ್ಜಿ ವಸತಿ ಶಾಲೆಯ (Morarji Residential School) ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿರುವ ಅಮೂಲ್ಯ (15 ) ಶೌಚಾಲಯದಲ್ಲಿ ನೇಣಿಗೆ (Self Harming) ಶರಣಾಗಿದ್ದಾಳೆ.

ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಮೂಲ್ಯ, ಕೊಪ್ಪ ತಾಲೂಕಿನ ನಾರ್ವೆ ಮೂಲದವಳು. ಇಂದು ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವು ಪತ್ತೆ ಆಗಿದೆ. ಕೂಡಲೇ ಇತರೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಪ್ಪ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತಗ್ಗಿದ ಮಳೆ; ಕರಾವಳಿ, ಮಲೆನಾಡಲ್ಲಿ ಮುಂದುವರಿದ ಅಬ್ಬರ

ಚರಂಡಿಗೆ ಬಿದ್ದು ಮಹಿಳೆ ಸಾವು

ಶಿವಮೊಗ್ಗದ ಸಾಗರ ತಾಲೂಕಿನ ‌ಕಾನ್ಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲುವೆ ಗ್ರಾಮದಲ್ಲಿ ಚರಂಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಲಕ್ಷ್ಮಮ್ಮ (65) ಮೃತ ದುರ್ದೈವಿ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದುವಾಡ ಕೆರೆಯಲ್ಲಿ ವೃದ್ಧನ ಶವ ಪತ್ತೆ

ದಾವಣಗೆರೆ ಸಮೀಪದ ಕುಂದುವಾಡ ಕೆರೆಯಲ್ಲಿ ವೃದ್ಧರೊಬ್ಬರ ಶವ ಪತ್ತೆ ಆಗಿದೆ. ಬಿ.ವಿ.ಅಣ್ಣಪ್ಪ (75) ಮೃತ ದುರ್ದೈವಿ. ಬೆಂಗಳೂರಿನ ನಿವಾಸಿ ಬಿ.ವಿ.ಅಣ್ಣಪ್ಪ ಅವರು ದಾವಣಗೆರೆಯ ಎಸ್.ಎಸ್. ಬಡವಣೆಯ ಸಹೋದರನ ಮನೆಗೆ ಬಂದಿದ್ದರು. ಮಂಗಳವಾರ ಮನೆಯಿಂದ ಹೋದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹೆಂಡತಿಯ ತಂಗಿ ಮಗಳ ಮನೆಗೆ ಹೋಗುವುದಾಗಿ ಹೇಳಿದ್ದರು ಎನ್ನಲಾಗಿದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version