ಚಿಕ್ಕಬಳ್ಳಾಪುರ/ಬೆಂಗಳೂರು: ಪ್ರೀತಿಸುವ ವಿಚಾರದಲ್ಲಿ (Love Case) ಯುವಕರಿಬ್ಬರು ಕಿರುಕುಳ ನೀಡಿದ್ದಕ್ಕೆ (Mental harassment) ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಹಾರಿಕ (22) ಮೃತ ದುರ್ದೈವಿ.
ಮೂಲತಃ ಆಂಧ್ರಪ್ರದೇಶದ ಅನಂತರಪುರ ಸಮೀಪದ ಧರ್ಮಾವರಂ ಟೌನ್‌ನ ನಿವಾಸಿಯಾಗಿರುವ ನಿಹಾರಿಕ (22), ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿದ್ದಳು. ಕಳೆದ 1 ತಿಂಗಳ ಹಿಂದಷ್ಟೇ ಎಚ್.ಎಸ್.ಆರ್ ಲೇಔಟ್‌ನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಕೆಲಸಕ್ಕೆ ಸಮೀಪವಿರುವ ಲೇಡಿಸ್ ಪಿಜಿಯಲ್ಲಿ ವಾಸವಿದ್ದಳು.
ಇತ್ತೀಚೆಗೆ ನಿಹಾರಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ಅಜಯ್ ಗೂಂಟೂರು ಎಂಬಾತ ಪರಿಚಯವಾಗಿದ್ದ. ಬೆಂಗಳೂರಿಗೆ ಬಂದ ನಿಹಾರಿಕಾಳನ್ನು ಭೇಟಿ ಮಾಡಿ ಆಕೆಯೊಂದಿಗೆ ಫೋಟೊಗಳನ್ನು ತೆಗೆದುಕೊಂಡಿದ್ದ. ಈ ಮಧ್ಯೆ ಕಾಲೇಜಿನಲ್ಲಿ ಓದುವಾಗಲೆ ಚವ್ವ ವಂಶಿದಾರ್ ತಾಡಪತ್ರಿ ಎಂಬಾತ ಸ್ನೇಹಿತನಾಗಿದ್ದ. ಚವ್ವ ವಂಶಿದಾರ್ ತಂಗಿ ಗ್ರೀಷ್ಮಾ ಕೂಡ ನಿಹಾರಿಕಾಳಿಗೆ ಪರಿಚಯವಿತ್ತು.
ಇವರಿಬ್ಬರು ಒಳ್ಳೆ ಸ್ನೇಹಿತರಾಗಿದ್ದರಿಂದ ಒಮ್ಮೆ ನಿಹಾರಿಕಾ ಚವ್ವ ವಂಶಿದಾರ್ ತಂಗಿ ಗ್ರೀಷ್ಮಾಳಿಗೆ ಅಜಯ್‌ನನ್ನು ಪರಿಚಯ ಮಾಡಿಕೊಟ್ಟಿದ್ದಳು. ಈ ಅಜಯ್ ನಿಹಾರಿಕಾ ಜತೆಗಿದ್ದ ಫೋಟೊವನ್ನುಗ್ರೀಷ್ಮಾಳಿಗೆ ಕಳುಹಿಸಿದ್ದ. ಈ ಎಲ್ಲ ಫೋಟೊವನ್ನು ಗ್ರೀಷ್ಮಾ ತನ್ನ ಅಣ್ಣನಿಗೆ ತೋರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಚವ್ವ ವಂಶಿದಾರ್ ಅಜಯ್‌ನನ್ನು ಸಂಪರ್ಕಿಸಿ ನಿಹಾರಿಕಾ ನನ್ನ ಕ್ಲಾಸ್‌ಮೇಟ್, ಅವಳನ್ನು ನಾನು ಪ್ರೀತಿಸುತ್ತಿದ್ದೇನೆ. ಅವಳಿಂದ ನೀನು ದೂರ ಇರು ಎಂದಿದ್ದ. ಆಗ ಅಜಯ್ ಕೂಡ ನಿಹಾರಿಕಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ.
ಫೋಟೊ ತೋರಿಸಿ ಯುವಕರಿಬ್ಬರ ಬ್ಲ್ಯಾಕ್‌ಮೇಲ್
ಈ ಮಧ್ಯೆ ಗ್ರೀಷ್ಮಾಗೆ ಕಾಲ್ ಮಾಡಿದ ಅಜಯ್, ನಿಹಾರಿಕಾ ನನ್ನೊಂದಿಗೂ ನಿಮ್ಮ ಅಣ್ಣನೊಂದಿಗೆ ಸಲುಗೆಯಿಂದ ಇದ್ದಾಳೆ. ಆಕೆ ನನ್ನನ್ನು ಪ್ರೀತಿ ಮಾಡದೆ ಇದ್ದರೆ ನನ್ನೊಟ್ಟಿಗೆ ತೆಗೆಸಿಕೊಂಡಿರುವ ಫೋಟೊವನ್ನು ಅವರ ಅಪ್ಪ-ಅಮ್ಮಗೆ ಕಳುಹಿಸುವುದಾಗಿ ಹೇಳಿದ್ದಾನೆ. ಇದೇ ಮಾತನ್ನೇ ಚವ್ವ ವಂಶಿದಾರ್ ಕೂಡ ಹೇಳಿದ್ದಾನೆ. ಇವರಿಬ್ಬರ ಮಧ್ಯೆ ಸಿಲುಕಿದ ನಿಹಾರಿಕಾ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದಾಳೆ.
ಊರಿಗೆ ಬರುತ್ತೇನೆ ಎಂದವಳು ಕೆರೆಗೆ ಹಾರಿದಳು
ಹೀಗೆ ಇವರಿಬ್ಬರ ಕಾಟದಿಂದ ಬೇಸತ್ತು ಹೋದ ನಿಹಾರಿಕ ಊರಿಗೆ ಬರುವುದಾಗಿ ಹೇಳಿದ್ದಾಳೆ. ಊರಿನ ಬಸ್ ಹತ್ತಿದ್ದವಳು ಬಾಗೇಪಲ್ಲಿಯಲ್ಲಿ ಇಳಿದುಕೊಂಡಿದ್ದಾಳೆ. ಅಲ್ಲಿಂದ ಚಿತ್ರಾವಳಿ ನದಿಗೆ ಹಾರಿದ್ದಾಳೆ ಎಂದು ನಿಹಾರಿಕ ತಂದೆ ದೂರಿನಲ್ಲಿ ಉಲ್ಲೇಖಸಿದ್ದಾರೆ. ಮನೆಗೆ ಮಗಳು ಬಾರದೆ ಇದ್ದಾಗ ಗಾಬರಿಕೊಂಡ ಪೋಷಕರು ಎಲ್ಲ ಕಡೆ ವಿಚಾರಿಸಿದ್ದರೂ ನಾಪತ್ತೆಯಾಗದೆ ಇದ್ದಾಗ ಈ ಸಂಬಂಧ ಪ್ರಕರಣವನ್ನು ದಾಖಲಿಸಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೊ ಕಾಲ್ ಮಾಡಿ ಮನೆಯವರೊಂದಿಗೆ ಮಾತನಾಡಿದ್ದಳು. ಮಾರನೇ ದಿನ ನದಿಯಲ್ಲಿ ನಿಹಾರಿಕಾಳ ಮೃತದೇಹ ಪತ್ತೆಯಾಗಿತ್ತು.
ಸದ್ಯ ಈ ಸಂಬಂಧ ದೂರು ನೀಡಿರುವ ನಿಹಾರಿಕಾಳ ಪೋಷಕರು ಮಗಳ ಸಾವಿಗೆ ಅಜಯ್ ಹಾಗೂ ಚವ್ವ ವಂಶಿದಾರ್ ಕಾರಣರಾಗಿದ್ದಾರೆ. ಮಗಳನ್ನು ಪ್ರೀತಿಸುವಂತೆ ಒತ್ತಾಯಿಸಿ, ಬ್ಲ್ಯಾಕ್ ಮಾಡಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿದಿದ್ದಾರೆ.
ಇದನ್ನೂ ಓದಿ: Murder Case : ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರ್ ಸಾವಿಗೆ ಟ್ವಿಸ್ಟ್! ಹೃದಯಾಘಾತವಲ್ಲ, ಕೊಲೆ?
ಲಾಡ್ಜ್‌ನಲ್ಲಿ ನೇಣುಬಿಗಿದುಕೊಂಡ ಯುವಕ
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆಯ ಲಾಡ್ಜ್‌ನಲ್ಲಿ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಮೊಗ್ಗ ಮೂಲದ ಕಾರ್ತಿಕ್ (29) ಮೃತ ದುರ್ದೈವಿ. ಕಾರ್ತಿಕ್ ಲಾಡ್ಜ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ