ಚಿಕ್ಕಮಗಳೂರು: ದೇಶದಲ್ಲಿ ಲವ್ ಜಿಹಾದ್ (Love Jihad) ಕೂಗು ಬಲವಾಗಿ ಕೇಳಿ ಬರುತ್ತಲೇ ಇವೆ. ಅಲ್ಲದೆ, ಈ ಸಂಬಂಧ ಸಾಕಷ್ಟು ಹೋರಾಟಗಳೂ ನಡೆದಿವೆ. ಕೆಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದೂ ಇದೆ. ಈಗ ಈ ಬಗ್ಗೆ ಮಾಜಿ ಡಿಸಿಎಂ ಆರ್. ಅಶೋಕ್ (R Ashok) ಗುಡುಗಿದ್ದಾರೆ. “ಲವ್ ಜಿಹಾದ್ ಅಂದರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಲವ್ ಅಟ್ ಬ್ಯಾಕ್ ಸೈಟ್ ಎಂದು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಆರ್. ಅಶೋಕ್, ಲವ್ ಜಿಹಾದ್ ಹಿಂದೆ ದೊಡ್ಡ ಜಾಲವೇ ಇದೆ. ಲವ್‌ಗೆ ಟ್ರೈನಿಂಗ್ ಕೊಡುತ್ತಾರೆ. ಹಾಗೇ ಹೋಗಿ ಲವ್ ಮಾಡುವುದಿಲ್ಲ. ಮೊದಲೇ ಎಲ್ಲ ಪ್ರಿಪೇರ್ ಆಗಿರುತ್ತಾರೆ. ಒಳ್ಳೆ ಬೈಕ್ ಕೊಡಿಸುತ್ತಾರೆ, ಬಾಡಿ ಬಿಲ್ಡ್ ಮಾಡಲು ಜಿಮ್‌ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಕಾಸು ಕೊಡುತ್ತಾರೆ. ಕೊನೆಗೆ ಹಿಂದು ಹುಡುಗಿಯನ್ನು ಲವ್ ಮಾಡು ಅಂತ ಕಳಿಸುತ್ತಾರೆ. ಇದು ಲವ್ ಜಿಹಾದ್ ಅಂದರೆ. ಲವ್ ಅಟ್ ಫಸ್ಟ್ ಸೈಟ್ ಇದಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: Rain News: ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ; ಇಂದು ಮಳೆಯಾಗದಿದ್ದರೆ ನಾಳೆಯೂ ಅಲ್ಲಾಗೆ ಮೊರೆ
ಹೀಗೆ ಮತಾಂತರ ಮಾಡಿ ದೇಶವನ್ನು ಕಪಿಮುಷ್ಟಿಯಲ್ಲಿ ಹಿಡಿಯಲು ಯತ್ನ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಎಲ್ಲದರ ಬಾಗಿಲು ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ, ಮುಕ್ತ ಅವಕಾಶ ನೀಡಿದೆ ಎಂದು ಆರ್. ಅಶೋಕ್ ಕಿಡಿಕಾರಿದರು.
ಮತಾಂತರಕ್ಕೆ ಸಿಎಂ ಸಿದ್ದರಾಮಯ್ಯನವರೇ ರಾಯಭಾರಿ
ಮತಾಂತರಕ್ಕೆ ಸಿಎಂ ಸಿದ್ದರಾಮಯ್ಯನವರೇ ರಾಯಭಾರಿ. ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತದೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹಿಂದುಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದರೆ, ಪಕ್ಕದ ಮನೆಯ ಅಮರನಾಥ್ ಎಂಬಾತ ಅಬ್ದುಲ್ ಘನಿ ಆಗ್ಬೇಕಾ? ಈ ದೇಶ ತಮ್ಮ ಕೈಯಲ್ಲಿ ಉಳೀಬೇಕು ಅಂದರೆ ಮತಾಂತರ ಆಗಬೇಕು ಅಂತ ಬ್ರಿಟಿಷರು ಹೇಳಿದ್ದರು. ಬಾಬರ್, ಔರಂಗಜೇಬ್ ಈ ದೇಶ ನಮ್ಮ ಕೈಗೆ ಬರಬೇಕಾದರೆ, ಎಲ್ಲರೂ ಮುಸ್ಲಿಂ ಆಗಬೇಕು ಅಂದಿದ್ದರು. ಟಿಪ್ಪು ಲಕ್ಷಾಂತರ ಜನರನ್ನು ಮತಾಂತರ ಮಾಡಿದ್ದಾನೆ. ಈಗ ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಆ್ಯಕ್ಟಿಂಗ್ ಸಿಎಂ, ಅವರದ್ದು ಅತಿರೇಕದ ನಡೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹರಿಹಾಯ್ದಿದ್ದಾರೆ. ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಆ್ಯಕ್ಟಿಂಗ್ ಸಿಎಂ ರೀತಿ ಮಾಡುತ್ತಿದ್ದಾರೆ. ಅವರದ್ದು ಒಂದು ರೀತಿ ಅತಿರೇಕದ ನಡೆ ಎಂದು ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ. ಅಲ್ಲದೆ, ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ. ಇದೇನು ಸಮ್ಮಿಶ್ರ ಸರ್ಕಾರವಾ ಎಂದು ಸಿದ್ದರಾಮಯ್ಯ ಯಾರಿಗೆ ಹೇಳಿದ್ದಾರೆ? ಅದು ಡಿ.ಕೆ. ಶಿವಕುಮಾರ್‌ಗೆ ಎಂಬುದು ಜಗಜ್ಜಾಹೀರಾಗಿದೆ. ಹೀಗಾಗಿ ತಮಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂಬ ಗ್ಯಾರಂಟಿ ಇದೆ. ಅದಕ್ಕಾಗಿ ಈಗಿನಿಂದಲೇ ಓವರ್‌ಟೇಕ್ ಮಾಡಿ ಕಿರಿಕಿರಿ ಮಾಡಲು ಹೊರಟಿದ್ದಾರೆ. ಕಿರಿಕಿರಿ ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಆದವರು ಹಿಂದಿನ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದು ಮಾಮೂಲಿ. ಆದರೆ, ಡಿಸಿಎಂ ಆದವರು ಭೇಟಿ ಮಾಡುವುದಿಲ್ಲ. ನಾನು ಡಿಸಿಎಂ ಆಗಿದ್ದೆ. ಆದರೆ, ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿರಲಿಲ್ಲ ಎಂದು ಆರ್. ಅಶೋಕ್ ಹೇಳಿದರು.
ಇದನ್ನೂ ಓದಿ: Snake Bite: ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವು; ಸ್ನೇಕ್ ಕ್ಯಾಚರ್‌ಗೆ ಕಚ್ಚೇ ಬಿಟ್ಟಿತು!
ಜುಲೈ 3ರಂದು ವಿಪಕ್ಷ ನಾಯಕನ ಹೆಸರು ಪ್ರಕಟ
ಬಿಜೆಪಿಯಿಂದ ವಿರೋಧ ಪಕ್ಷದ ನಾಯಕರ ಹೆಸರು ಇನ್ನೂ ಪ್ರಕಟ ಆಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, ಜುಲೈ 3ರಂದು ವಿರೋಧ ಪಕ್ಷದ ನಾಯಕನ ಹೆಸರನ್ನು ಪ್ರಕಟ ಮಾಡಲಾಗುತ್ತದೆ ಎಂದು ಹೇಳಿದರು.