ಬೆಂಗಳೂರು: ಹದಿಹರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಆಗುವುದು ಸಹಜ. ಆದರೆ ಪ್ರೀತಿಯಲ್ಲಿ ಮುಳುಗಿದವರಿಗೆ ಪ್ರಪಂಚವೇ ಕುರುಡಾಗಿ ಬಿಟ್ಟಿರುತ್ತದೆ. ಹೀರೋ-ಹೀರೋಯಿನ್ ಮೂಡ್‌ನಲ್ಲಿರುವ ಕೆಲವರು ಬೈಕ್‌ನಲ್ಲಿ (Lovers Scooter Ride) ಕೂತು ಫಿಲ್ಮಿ ಸ್ಟೈಲ್‌ನಲ್ಲಿ ರೊಮ್ಹಾನ್ಸ್ ಮಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ.
ಇಲ್ಲಿನ ಆರ್ ಆರ್ ನಗರ ಮುಖ್ಯರಸ್ತೆಯಲ್ಲಿ ಯುವತಿಯೊಬ್ಬಳು ಸ್ಕೂಟರ್ ಓಡಿಸುತ್ತಿದ್ದರೆ ಹಿಂದೆ ಕುಳಿತಿದ್ದ ಯುವಕ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದಾನೆ. ನಡು ರೋಡಲ್ಲೇ ಹೊತ್ತು ಗೊತ್ತು ಮರೆತು ಮುತ್ತು ಕೊಟ್ಟುಕೊಂಡಿರುವ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೊವೊಂದು ವೈರಲ್ ಆಗಿದೆ.
ಪ್ರೇಮಿಗಳಿಬ್ಬರ ಬೀದಿ ಪ್ರೇಮಕ್ಕೆ ಜನರು ಆಕ್ರೋಶ ಹೊರಹಾಕಿದ್ದು, ದಾರಿ ತಪ್ಪಿದ ಮಕ್ಕಳ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲಿಗೆ ಬಂತಪ್ಪಾ ಕಾಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ರೋಡ್‌ನಲ್ಲಿ ರೋಮಿಯೊಗಳ ರೊಮ್ಯಾನ್ಸ್ ಅನ್ನು ಹಿಂಬದಿ ಕಾರು ಪ್ರಯಾಣಿಕರರೊಬ್ಬರು ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಮತ್ತೊಂದು ಕಡೆ ಪ್ರೇಮಿಗಳಿಬ್ಬರು ಹೆಲ್ಮೆಟ್ ಧರಿಸಿದೆ ಸಂಚಾರಿ ನಿಯಮವನ್ನು ಪಾಲಿಸದೆ ಇರುವುದಕ್ಕೂ ಟೀಕೆಗಳು ಶುರುವಾಗಿವೆ.
ಇದನ್ನೂ ಓದಿ | Road accident | ಲಾರಿಯ ಟಯರ್ ಬ್ಲಾಸ್ಟ್ ಆಗಿ ಚಾಲಕ ಸ್ಥಳದಲ್ಲೇ ಮೃತ್ಯುವಶ, ಚೆಕ್ ಮಾಡಲು ಇಳಿದಾಗ ಸ್ಫೋಟ!