ರಾಯಚೂರು: ಇಲ್ಲಿನ ಕೃಷ್ಣ ರೈಲ್ವೆ ನಿಲ್ದಾಣದ ಬಳಿ ಪ್ರೇಮಿಗಳಿಬ್ಬರು (Lovers Suicide) ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ್ (26) ಮತ್ತು ಅನಿತಾ (16) ಮೃತ ಪ್ರೇಮಿಗಳು.
ಇವರು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವರಾಗಿದ್ದು, ಕುಟುಂಬಸ್ಥರು ಪ್ರೀತಿಗೆ ಅಡ್ಡಿಪಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ರೈಲು ಬರುವ ಸಮಯಕ್ಕೆ ಟ್ರ್ಯಾಕ್ ಮೇಲೆ ಕೈ ಕೈ ಹಿಡಿದು ಮಲಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಇವರ ಮೇಲೆ ಟ್ರೈನ್ ಹರಿದ ಪರಿಣಾಮ ರುಂಡ-ಮುಂಡ ಪ್ರತ್ಯೇಕವಾಗಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Suicide Case | ಮಾನಸಿಕ ಖಿನ್ನತೆ; ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ 19ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ