ಹಾವೇರಿ: ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಎಂಬ ಹಾಡನ್ನು ಪ್ರೇಮಲೋಕ ಸಿನಿಮಾದಲ್ಲಿ (Premaloka Movie) ಕೇಳಿದ್ದೇವೆ. ಅಲ್ಲದೆ, ಪ್ರೀತಿ ಮಾಡಿದ ಮೇಲೆ ಬರುವ ಅಡೆತಡೆಗಳನ್ನು ಎದುರಿಸುವ ಧೈರ್ಯ ಇರಬೇಕು ಎಂಬ ಮಾತನ್ನೂ ಕೇಳಿದ್ದೇವೆ. ಆದರೆ, ಇಲ್ಲೊಂದು ಯುವ ಪ್ರೇಮಿಗಳ ಜೋಡಿಯು ಮನೆಯಲ್ಲಿ ಪ್ರೀತಿಗೆ ವಿರೋಧ (Love Failure) ಮಾಡಿದ್ದಾರೆಂದು ಬೇಸರಗೊಂಡು ಸಾಯುವ ತೀರ್ಮಾನಕ್ಕೆ ಬಂದಿದ್ದಾರಲ್ಲದೆ, ವಿಷ ಕುಡಿದು ಬಸ್‌ನ ಸ್ಲೀಪರ್ ಕೋಚ್‌ನಲ್ಲಿ ಮಲಗಿದ್ದರು. ಕೊನೆಗೆ ಆಕೆ ಜೀವ ಬಿಟ್ಟರೆ, ಈಗ ಗಂಭೀರಗೊಂಡಿದ್ದ ಪ್ರಿಯಕರ ಚೇತರಿಸಿಕೊಂಡಿದ್ದಾನೆ.
ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿಯಾಗಿದ್ದರೆ, ಅಖಿಲ್ ಚೇತರಿಸಿಕೊಂಡಿದ್ದಾನೆ. ಬೆಂಗಳೂರು ಮೂಲದ ಹೇಮಾ ಹಾಗೂ ಬಾಗಲಕೋಟೆ ಮೂಲದ ಯುವಕ ಅಖಿಲ್ ಪ್ರೀತಿ ಮಾಡಿದವರು. ಬಿ.ಕಾಂ ಅಂತಿಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ ಹೇಮಾ ಹಾಗೂ ಅಖಿಲ್ ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದರು. ಈ ವಿಷಯವನ್ನು ಮನೆಯವರ ಗಮನಕ್ಕೂ ತಂದಿದ್ದರು.
ಇದನ್ನೂ ಓದಿ: Karnataka Politics: ಜನರಿಗಾಗಿ ಯುದ್ಧ ಮಾಡಲೂ ಸಿದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು
ತಾವಿಬ್ಬರೂ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದೇವೆ. ನಮಗೆ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದು. ಹೀಗಾಗಿ ನೀವು ನಮಗೆ ಮದುವೆ ಮಾಡಿಕೊಡಿ. ನಾವು ಜೀವನವನ್ನು ಸಾಗಿಸಿಕೊಂಡು ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿದ್ದಾರೆ. ಆದರೆ, ಮನೆಯವರು ಮಾತ್ರ ಇವರ ಪ್ರೀತಿಗೆ ಒಪ್ಪಲಿಲ್ಲ ಎನ್ನಲಾಗಿದೆ. ಇಷ್ಟಾದರೂ ಹಲವು ಬಾರಿ ಮನೆಯವರ ಮನವೊಲಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ ಎಂದು ಹೇಳಲಾಗಿದೆ.
ಸಾಯುವ ನಿರ್ಧಾರ
ಹೇಗೂ ಮನೆಯವರು ತಮ್ಮನ್ನು ಒಟ್ಟಾಗಿ ಇರಲು ಬಿಡುವುದಿಲ್ಲ. ಹೀಗಾಗಿ ಸಾವಿನಲ್ಲಾದರೂ ಒಂದಾಗೋಣ ಎಂಬ ನಿರ್ಧಾರಕ್ಕೆ ಇವರು ಬಂದಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಕೊನೇ ಕ್ಷಣದಲ್ಲಿ ಇಬ್ಬರೂ ಒಟ್ಟಾಗಿ ಇರೋಣ ಎಂದು ವಿಷವನ್ನು ಹಿಡಿದು ಸ್ಲೀಪರ್ ಕೋಚ್ ಬಸ್‌ವೊಂದನ್ನು ಹತ್ತಿದ್ದಾರೆ.
ಇವರು ಹತ್ತಿದ್ದ ಸ್ಲೀಪರ್ ಕೋಚ್‌ನ ಖಾಸಗಿ ಬಸ್ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ಊಟಕ್ಕಾಗಿ ಬಸ್ ನಿಲ್ಲಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಸ್ ಸಿಬ್ಬಂದಿಗೆ ಅನುಮಾನ ಬಂದು ನೋಡಿದಾಗ ಇಬ್ಬರೂ ಪ್ರಜ್ಞೆ ಇಲ್ಲದೇ ಇರುವುದು ಗೊತ್ತಾಗಿದೆ.
ಇದನ್ನೂ ಓದಿ: Moral policing: ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್: ಡಾ. ಜಿ. ಪರಮೇಶ್ವರ್
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಇವರಿಬ್ಬರನ್ನು ಕೆಳಗೆ ಇಳಿಸಿ ನೋಡಿದಾಗ ಹೇಮಾ ಅದಾಗಲೇ ಮೃತಪಟ್ಟಿದ್ದಳು. ಆದರೆ, ಅಖಿಲ್‌ಗೆ ಜೀವ ಇತ್ತು. ಹೀಗಾಗಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಆತ ಚೇತರಿಸಿಕೊಂಡು ಡಿಶ್ಚಾರ್ಚ್ ಆಗಿದ್ದಾನೆ. ಈ ಪ್ರಕರಣ ನಡೆದು 5 ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.