ವಿಜಯಪುರ: ನಗರದ ರಾಜಾಜಿನಗರದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿ (LPG Cylinder Blast) ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಮನೆಯಲಿದ್ದ ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟುಕರಲಾಗಿವೆ.
ಮಹಾದೇವ ದಿಂಡವಾರ ಎಂಬುವವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿ ಅವಘಡ ಸಂಭವಿಸಿದ್ದು, ಮಹಾದೇವ, ಸಂಕೇತ, ಮಣಿಕಂಠ, ರಾಮು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Tourist Rescued : ಕುಡ್ಲೇ ಬೀಚಲ್ಲಿ ಅಪಾಯಕ್ಕೆ ಸಿಲುಕಿದ ಯುವಕನ ರಕ್ಷಣೆ; ವಿದೇಶಿ ಗೆಳತಿ ಜತೆ ಬಂದಿದ್ದ
ಇಬ್ಬರು ಮಕ್ಕಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾನೂ ಆಹುತಿಯಾದ ತಾಯಿ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ (Chitradurga News) ಚಳ್ಳಕೆರೆ ತಾಲೂಕಿನ ಮಲ್ಲ ಸಮುದ್ರ ಗ್ರಾಮದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊನೆಗೆ ತಾನೂ ಅಗ್ನಿ ಪ್ರವೇಶ ಮಾಡಿದ್ದಾಳೆ (Mother kills two Children and Ends life). ಕೌಟುಂಬಿಕ ಕಲಹದ (Family Dispute) ಹಿನ್ನೆಲೆಯಲ್ಲಿ ಈ ದುರಂತ ನಡೆದಿದೆ (Self Harming) ಎಂದು ಹೇಳಲಾಗಿದೆ.
ಮಾರಕ್ಕ ಎಂಬ 24 ವರ್ಷದ ಮಹಿಳೆಯೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳಾದ ನಯನ (4) ಮತ್ತು ಹರ್ಷ ವರ್ಧನ್ (2)ಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದವರು.
ಮಕ್ಕಳನ್ನು ಮನೆಯಿಂದ ಹೊರಡಿಸಿ ಗ್ರಾಮದ ಹೊರವಲಯಕ್ಕೆ ಹೋಗಿ ಅಲ್ಲಿ ಈ ಅತಿರೇಕದ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದ ತೀವ್ರವಾಗಿ ನೊಂದಿದ್ದ ಆಕೆ ಬದುಕು ಬೇಡವೆಂದು ತೀರ್ಮಾನಿಸಿದ್ದಾರೆ. ನಾನು ಇಲ್ಲದಿದ್ದರೆ ಈ ಪುಟ್ಟ ಮಕ್ಕಳು ಹೇಗೆ ಬದುಕಿಯಾವು ಎಂಬ ಯೋಚನೆ ಬರುತ್ತಿದ್ದಂತೆಯೇ ಮೊದಲು ಅವರನ್ನು ಬೆಂಕಿಗೆ ಹಾಕಿ ಕೊನೆಗೆ ತಾನೂ ಆಹುತಿಯಾಗಿದ್ದಾರೆ.
ಬೆಂಕಿಯ ಕೆನ್ನಾಲಿಗೆಯಲ್ಲಿ ಮಕ್ಕಳು ಮತ್ತು ತಾಯಿ ಸುಟ್ಟು ಹೋದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Hanuman Chalisa : ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್; ನಗರ್ತ ಪೇಟೆ ಕಿರಾತಕರ ಸ್ಟೇಟಸ್
ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಮಾರಕ್ಕ ಎದುರಿಸುತ್ತಿದ್ದ ಮಾನಸಿಕ ಹಿಂಸೆೈ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.