Site icon Vistara News

Pai International | ಮೆಗಾ ಮಾನ್ಸೂನ್‌ ಮೇಳ ಲಕ್ಕಿ ಡ್ರಾ ವಿಜೇತರ ಆಯ್ಕೆ, ಬಹುಮಾನ ಗೆದ್ದವರ ಪಟ್ಟಿ ಬಿಡುಗಡೆ

pai international

ಬೆಂಗಳೂರು : ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವತಿಯಿಂದ (Pai International) ಬೆಂಗಳೂರಿನ ಕೂಡ್ಲು ಗೇಟ್‌ನಲ್ಲಿರುವ ಪೈ ಸೆಂಟ್ರಲ್ ವೇರ್‌ಹೌಸ್‌ನಲ್ಲಿ ಭಾನುವಾರ (ಸೆಪ್ಟೆಂಬರ್‌ ೧೧ರಂದು) ಮೆಗಾ ಮಾನ್ಸೂನ್ ಮೇಳ ಲಕ್ಕಿ ಡ್ರಾ ಕಾರ್ಯಕ್ರಮ ನಡೆಯಿತು.

ಪೈ ಶೋ ರೂಮ್‌ಗಳಲ್ಲಿ ೨೦೨೨ರ ಜೂನ್ 1 ರಿಂದ ಸೆಪ್ಟೆಂಬರ್‌ ೬ವರೆಗೆ ಶಾಪಿಂಗ್ ಮಾಡಿದ ಗ್ರಾಹಕರಿಗೆ ಕೂಪನ್‌ಗಳನ್ನು ನೀಡಲಾಗಿತ್ತು. ಒಟ್ಟಾರೆ 22,85,180 ವಿತರಿಸಲಾಗಿದ್ದು, ಇದರಲ್ಲಿ 63,030 ಮಂದಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ನೀಡಲಾಗುತ್ತದೆ.

ಕೂಪನ್‌ಗಳನ್ನು ಪಡೆದುಕೊಂಡಿರುವ ಗ್ರಾಹಕರು ತಮಗೆ ಸಮೀಪ ಇರುವ ಪೈ ಶೋರೂಮ್‌ನಲ್ಲಿ ವಿಜೇತರ ಹೆಸರನ್ನು ಪರಿಶೀಲಿಸಬಹುದಾಗಿದೆ. ಪೈ ಇಂಟರ್‌ನ್ಯಾಶನಲ್‌ನ ವೆಬ್‌ಸೈಟ್‌ಗೆ ಬೇಟಿ ನೀಡಿಯೂ ಪರಿಶೀಲನೆ ನಡೆಸಬಹುದಾಗಿದೆ.

ಲಕ್ಕಿ ಡ್ರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೈ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ “ಎಲೆಕ್ಟ್ರಾನಿಕ್ಸ್ ಉಪಕರಣಗಳು, ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ವಿಶ್ವಾಸಾರ್ಹ ಮತ್ತು ಪ್ರಮುಖ ಬ್ರ್ಯಾಂಡ್ ಆಗಿ ಪೈ ಇಂಟರ್‌ನ್ಯಾಷನಲ್‌ ಜನರ ಮನೆ ಮಾತಾಗಿದೆ. ಪೂರ್ಣ ಪ್ರಮಾಣದ ಶೋರೂಮ್‌ಗಳು ಕರ್ನಾಟಕ ಮತ್ತು ತೆಲಂಗಾಣದಾದ್ಯಂತ ಹರಡಿಕೊಂಡಿವೆ. ಮೆಗಾ ಮಾನ್ಸೂನ್ ಮೇಳ ಲಕ್ಕಿ ಡ್ರಾ ಸಮಾರಂಭವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನಡೆಸಿಲಾಗಿದೆ. ಲಕ್ಕಿ ಕೂಪನ್ ಡ್ರಾವನ್ನು ನಡೆಸುವಾಗ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದ್ದು, ಬಹುಮಾನ ವಿತರಣೆ ಮಾಡಲಾಗುವುದು,” ಎಂದರು.

Exit mobile version