ಬೆಂಗಳೂರು: ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಸಂಶೋಧನಾ ಸಂಪುಟ ಮರು ಮುದ್ರಣಕ್ಕಾಗಿ ೩೦ ಲಕ್ಷ ರೂಪಾಯಿ ಧನ ಸಹಾಯ ಮಂಜೂರು ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಗೋವಿಂದ ಪೈ ಅವರ ಸಂಶೋಧನಾ ಸಂಪುಟ ೧೯೯೫ರಲ್ಲಿ ಪ್ರಕಟವಾಗಿತ್ತು. ಇದಾಗಿ 25 ವರ್ಷಗಳ ಕಳೆದ ಹಿನ್ನೆಲೆಯಲ್ಲಿ ಸದ್ಯಕ್ಕೆ ಆ ಸಂಪುಟದ ಯಾವುದೇ ಪ್ರತಿಗಳು ಲಭ್ಯವಿಲ್ಲ. ಹೀಗಾಗಿ ಉಡುಪಿಯ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ಧನ ಸಹಾಯ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ೩೦ ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ಈ ಬಗ್ಗೆ ಕನ್ನಡ- ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಮಂಜೇಶ್ವರ ಗೋವಿಂದ ಪೈ ಅವರು ಕನ್ನಡದ ಮೊದಲ ರಾಷ್ಟ್ರಕವಿ. ಇಪ್ಪತ್ತೈದು ವರ್ಷಗಳ ನಂತರ ಅವರ ಸಂಶೋಧನಾ ಸಂಪುಟದ ಮರು ಮುದ್ರಣಕ್ಕೆ ಸರ್ಕಾರ ಧನಸಹಾಯ ಒದಗಿಸಿದೆ. ಇದರಿಂದ ಗೋವಿಂದ ಪೈ ಅವರ ಲೇಖನ ಸಂಪತ್ತು ಕನ್ನಡಿಗರನ್ನು ತಲುಪುವಂತಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಪ್ರತಾಪ್ ಸಿಂಹ ಬಂದರೆ ಹೆದ್ದಾರಿಯಲ್ಲೇ ಸ್ವಿಮ್ಮಿಂಗ್ ಮಾಡಬಹುದು: ಎಚ್.ಡಿ. ಕುಮಾರಸ್ವಾಮಿ ಕಿಡಿ