Site icon Vistara News

Dog Bite: ಅಥಣಿಯ ಮೂರು ಊರಲ್ಲಿ 18 ಜನರಿಗೆ ಕಚ್ಚಿದ ಹುಚ್ಚು ನಾಯಿ!

mad dog Bite case in Athani 3

ಚಿಕ್ಕೋಡಿ: ಅಥಣಿ ತಾಲೂಕಿನಲ್ಲಿ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು, ಮೂರು ಗ್ರಾಮಗಳ ನಿದ್ದೆಗೆಡಿಸಿದೆ. ಈ ವರೆಗೆ 18 ಜನರಿಗೆ ಕಚ್ಚಿದ್ದು, ಜನರು ಭಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ, ಗುಂಡೆವಾಡಿ, ಬಳ್ಳಿಗೇರಿ ಗ್ರಾಮದಲ್ಲಿ ಹುಚ್ಚು ನಾಯಿಯ ಕಡಿತ (Dog Bite) ಪ್ರಕರಣಗಳು ಹೆಚ್ಚಾಗಿವೆ. ನಾಯಿ ಕಡಿತಕ್ಕೆ ಒಳಗಾದವರಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಬ್ಬರು ಮಕ್ಕಳಿಗೆ ಮಾರಣಾಂತಿಕ ಗಾಯವಾಗಿದೆ. ಓರ್ವ ಬಾಲಕನನ್ನು ಅಥಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಇನ್ನೊಬ್ಬ ಬಾಲಕನನ್ನು ಮೀರಜ್ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Security Breach in Lok Sabha: ಭದ್ರತಾ ವೈಫಲ್ಯ; We stand with Prathap simha ಅಭಿಯಾನ ಶುರು

ಮುಖ, ಕೈ, ಕಾಲುಗಳಿಗೆ ಈ ಹುಚ್ಚು ನಾಯಿ ಕಚ್ಚಿದೆ. ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ನಾಯಿಯಿಂದ ಎಚ್ಚರಿಕೆ ವಹಿಸುವಂತೆ ಗ್ರಾಮದಲ್ಲಿ ಡಂಗುರ ಹೊರಡಿಸಲಾಗಿದೆ. ಗ್ರಾಮ ಪಂಚಾಯಿತಿ ವಾಹನಗಳ ಮೂಲಕ ನಾಯಿ ಕುರಿತು ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದರು.

ನಾಯಿ ಹಿಡಿಯಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಈ ಹುಚ್ಚು ನಾಯಿಯು ಒಂದು ಗ್ರಾಮದಿಂದ ತಪ್ಪಿಸಿಕೊಂಡು ಇನ್ನೊಂದು ಗ್ರಾಮಕ್ಕೆ ಓಡಾಡುತ್ತಿದ್ದು, ಹೋದ ಕಡೆಯಲ್ಲೆಲ್ಲ ದಾಳಿ ನಡೆಸುತ್ತಿದೆ. ಮೂರು ಗ್ರಾಮದಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ. ನಾಯಿ ಭಯಕ್ಕೆ ಗ್ರಾಮಸ್ಥರು ಮನೆಯಿಂದ ಆಚೆ ಬರುತ್ತಿಲ್ಲ.

ನವಜಾತ ಶಿಶುವನ್ನು ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಚರಂಡಿಗೆ ಎಸೆದು ಓಡಿದ ಮಹಾತಾಯಿ!

ರಾಯಚೂರು: ಮಹಾತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು (Newborn Baby) ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ದೇವದುರ್ಗ ಪಟ್ಟಣದ ಬಸ್‌ಸ್ಟ್ಯಾಂಡ್ (Devadurga Bus Stand) ಬಳಿ ಇರುವ ಚರಂಡಿಗೆ ಎಸೆದು (Throw down to drain) ಜಾಗ ಖಾಲಿ ಮಾಡಿರುವ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ತಾಯಿಯೊಬ್ಬಳು ಎಸೆದು ಓಡಿದ್ದಾಳೆ. ಬಸ್ ಸ್ಟ್ಯಾಂಡ್‌ನ ಚರಂಡಿಯಲ್ಲಿ ಬಾಕ್ಸ್‌ ಪತ್ತೆಯಾಗಿದ್ದು, ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ.

ಮಗು ಎಸೆದ ಬಳಿಕ ಪಾಪಿ ತಾಯಿ ಅಲ್ಲಿಂದ ಓಡಿಹೋಗಿದ್ದಾಳೆ. ಹೀಗಾಗಿ ಚರಂಡಿಯಲ್ಲಿ ಸತ್ತು ಬಿದ್ದಿದ್ದ ಶಿಶುವಿನ ಕಳೇಬರವನ್ನು ಸಾರ್ವಜನಿಕರೇ ಹೊರಗೆ ತೆಗೆದಿದ್ದಾರೆ. ಇಂಥ ಒಂದು ಅಮಾನವೀಯ ಘಟನೆಗೆ ಹಿಡಿಶಾಪ ಹಾಕಿದ್ದಾರೆ. ಬಳಿಕ ಅವರೇ ಎಲ್ಲರೂ ಸೇರಿ ಆ ಶಿಶುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರನ್ನು ಅಟ್ಟಾಡಿಸಿ ಹೊಡೆದ ಟೂರಿಸ್ಟ್ ಬೋಟ್ ಸಿಬ್ಬಂದಿ

ಉಡುಪಿ:‌ ಮಲ್ಪೆ ಬೀಚ್‌ನಲ್ಲಿ (Malpe Beach) ನೈತಿಕ ಪೊಲೀಸ್‌ಗಿರಿ (Moral policing) ನಡೆದ ಘಟನೆಯೊಂದು ವರದಿಯಾಗಿದೆ. ಟೂರಿಸ್ಟ್ ಬೋಟ್ ಸಿಬ್ಬಂದಿಯಿಂದಲೇ (Tourist boat crew) ಪ್ರವಾಸಿಗರ ಮೇಲೆ ಹಲ್ಲೆ (Attack on tourists) ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಹಲ್ಲೆ ವಿಡಿಯೊ ವೈರಲ್‌ (Video Viral) ಆಗಿದೆ.

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಯಾವ ವಿಷಯಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿರುವ ದೃಶ್ಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೀಚ್‌ನಲ್ಲಿ ಪ್ರವಾಸಿಗರು ಹೋಗುವಾಗ ಅವರ ಮೇಲೆ ದಾಳಿ ನಡೆಸಿದ ಟೂರಿಸ್ಟ್ ಬೋಟ್ ಸಿಬ್ಬಂದಿ ಏಕಾಏಕಿ ಹೊಡೆಯಲು ಶುರು ಮಾಡಿದ್ದಾರೆ. ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಈ ಪ್ರವಾಸಿಗರು ಹರಸಾಹಸಪಟ್ಟಿದ್ದಾರೆ. ಬುಧವಾರ (ನ.14) ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿರಾರು‌ ಪ್ರವಾಸಿಗರಿದ್ದ ವೇಳೆಯೇ ನೈತಿಕ ಪೊಲೀಸ್‌ಗಿರಿ ನಡೆಸಿರುವುದರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ, ಈ ಬಗ್ಗೆ ಪೊಲೀಸ್‌ ಕೇಸ್‌ ದಾಖಲಾದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Murder Case: ಸೂಲಿಬೆಲೆಯಲ್ಲಿ ರಾಡ್‌ನಿಂದ ಹೊಡೆದು ವೃದ್ಧ ದಂಪತಿಯ ಕೊಲೆ

ಹಲ್ಲೆ ಮಾಡಿದವರು ಟೂರಿಸ್ಟ್ ಬೋಟ್ ಸಿಬ್ಬಂದಿಯಾಗಿದ್ದರಿಂದ ಬೋಟ್‌ ವಿಚಾರವಾಗಿ ಇವರುಗಳ ಮಧ್ಯೆ ಯಾವುದಾದರೂ ತಕರಾರುಗಳು ನಡೆದಿದ್ದವೇ? ಇಲ್ಲವೇ ಗಲಾಟೆ ಮಾಡಿಕೊಂಡು ಬರಲಾಗಿದೆಯೇ? ಈ ಕಾರಣಕ್ಕಾಗಿ ಅವರು ಎಲ್ಲರೂ ಒಟ್ಟಾಗಿ ಬಂದು ಹೊಡೆದಿದ್ದಾರೆಯೇ? ಎಂಬುದು ಗೊತ್ತಾಗಿಲ್ಲ.

Exit mobile version