Site icon Vistara News

Vande Bharat: ಮದುರೈನಿಂದ ಬೆಂಗಳೂರಿಗೆ ಶೀಘ್ರವೇ ವಂದೇ ಭಾರತ್‌ ರೈಲು; ಬೆಲೆ ಎಷ್ಟು?

vande bharat train

Madurai to Bengaluru in 6 hrs: Vande Bharat Express Train Linking Two Cities Coming Soon

ಬೆಂಗಳೂರು: ತಮಿಳುನಾಡಿನ ಮದುರೈನಿಂದ ಶೀಘ್ರದಲ್ಲೇ ವಂದೇ ಭಾರತ್‌ ರೈಲು (Vande Bharat) ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಬೆಂಗಳೂರಿನಿಂದ ಮದುರೈಗೆ, ಮದುರೈನಿಂದ ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮದುರೈ-ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ (Madurai-Bengaluru Vande Bharat Express Train) ಮುಂದಿನ ವಾರ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಬೆಂಗಳೂರು ಹಾಗೂ ಮದುರೈ ನಿವಾಸಿಗಳಿಗೆ ಸಂತಸದ ಸುದ್ದಿಯಾಗಿದೆ.

ಕೇಸರಿ ಬಣ್ಣದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ದಿಂಡಿಗಲ್‌, ಕರೂರ್‌, ಸೇಲಂ, ಧರ್ಮಪುರಿ ಹಾಗೂ ಹೊಸೂರಿನಲ್ಲಿ ರೈಲು ನಿಲುಗಡೆಯಾಗಲಿದೆ. ಎಂಟು ಬೋಗಿಗಳ ವಂದೇ ಭಾರತ್‌ ರೈಲು ಸಂಚಾರ ಆರಂಭವಾದರೆ, ಮದುರೈನಿಂದ ಕೇವಲ 6 ಗಂಟೆಗಳಲ್ಲಿಯೇ ಬೆಂಗಳೂರು ತಲುಪಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಹಚ್ಚಿನ ಸಮಯ ಉಳಿಯಲಿದೆ. ಈಗ ಮದುರೈನಿಂದ ಬೆಂಗಳೂರಿಗೆ ರೈಲಿನಲ್ಲಿ 8-10 ಗಂಟೆ ಬೇಕಾಗುತ್ತದೆ.

ಮದುರೈ-ಕೊಯಮತ್ತೂರು ರೈಲಿಗೆ ಚಾಲನೆ ನೀಡುವ ದಿನಾಂಕ ಹಾಗೂ ಟಿಕೆಟ್‌ ದರಗಳ ಕುರಿತು ಇದುವರೆಗೆ ಹಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇದು ಕರ್ನಾಟಕಕ್ಕೆ ಸಂಪರ್ಕಿಸುವ ಆರನೇ ವಂದೇ ಭಾರತ್‌ ರೈಲು ಎನಿಸಲಿದೆ. ವರ್ಚ್ಯುವಲ್‌ ವೇದಿಕೆ ಮೂಲಕ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು-ಕೊಯಮತ್ತೂರು ರೈಲು ಸಮಯ ಬದಲು

ಬೆಂಗಳೂರಿನಿಂದ ತಮಿಳುನಾಡಿನ ಕೊಯಮತ್ತೂರಿಗೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಾಗಿದೆ. ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನಿಂದ ಹೊರಡುವ ಬದಲು 7.30ಕ್ಕೆ ಹೊರಡಲಿದೆ. ಬೆಳಗ್ಗೆ 11.30ಕ್ಕೆ ಬೆಂಗಳೂರು ತಲುಪುವ ಬದಲು ಮಧ್ಯಾಹ್ನ 1.50ಕ್ಕೆ ತಲುಪಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

ಬೆಂಗಳೂರಿನಿಂದ ಬೆಳಗ್ಗೆ 11.30ಕ್ಕೆ ಹೊರಡುವ ಬದಲು ಮಧ್ಯಾಹ್ನ 2.20ಕ್ಕೆ ಹೊರಡಲಿದೆ. ರಾತ್ರಿ 8 ಗಂಟೆಗೆ ಕೊಯಮತ್ತೂರು ತಲುಪುವ ಬದಲು 8.45ಕ್ಕೆ ತಲುಪಲಿದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಈಗ ಚೆನ್ನೈ, ಕೊಯಮತ್ತೂರು ಸೇರಿ ಐದು ನಗರಗಳಿಗೆ ವಂದೇ ಭಾರತ್‌ ರೈಲು ಸಂಪರ್ಕ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version