Site icon Vistara News

Mahavir jayanti 2023: ಮಹಾವೀರ ಜಯಂತಿ; ಬೆಂಗಳೂರಲ್ಲಿ ಏ.4ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

Mahavir jayanti 2023

#image_title

ಬೆಂಗಳೂರು: ಮಹಾವೀರ ಜಯಂತಿ ಪ್ರಯುಕ್ತ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧ ಮಾಡಲಾಗಿದೆ. ಮಾಂಸ ಮಾರಾಟ ಮತ್ತು ಮಾಂಸ ವಧೆ ಮಾಡಿದರೆ ಬಿಬಿಎಂಪಿಯಿಂದ ದಂಡ ವಿಧಿಸಲಾಗುತ್ತಿದೆ.

ಏಪ್ರಿಲ್‌ 4ರಂದು ಮಹಾವೀರ ಜಯಂತಿ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ಆದೇಶ ಹೊರಡಿಸಿದ್ದಾರೆ.

ಬದಲಾಯಿಸಲಾಗಿದ್ದ ಸರ್ಕಾರಿ ರಜೆ

ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗುವ ಸರ್ಕಾರಿ ರಜಾದಿನವನ್ನು (Government holiday) ಬದಲಾಯಿಸಿ ಆದೇಶವನ್ನು ಹೊರಡಿಸಲಾಗಿತ್ತು. ಸರ್ಕಾರದ ಮೂಲ ರಜಾ ದಿನಗಳ ಪಟ್ಟಿಯಲ್ಲಿ ಏಪ್ರಿಲ್‌ 3ರಂದು ರಜೆ ಎಂದಿದೆ. ಅದನ್ನು ಬದಲಾಯಿಸಿ, ಸರ್ಕಾರಿ ರಜಾ ದಿನವನ್ನು ಏಪ್ರಿಲ್‌ 4 ಎಂದು ಪ್ರಕಟಿಸಲಾಗಿತ್ತು.

ಅಂದು ವಾರ್ಷಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಿಗೇ ಅದಕ್ಕೊಂದು ಸ್ಪಷ್ಟೀಕರಣವನ್ನು ನೀಡಿ ಏಪ್ರಿಲ್‌ ನಾಲ್ಕರಂದು ರಜೆ ಎಂದು ತಿಳಿಸಲಾಗಿತ್ತು. ಆದರೆ, ಬಹುತೇಕರು ಇಟ್ಟುಕೊಳ್ಳುವ ಮೂಲ ರಜಾ ಪಟ್ಟಿಯಲ್ಲಿ ಏಪ್ರಿಲ್‌ 3 ಎಂದೇ ಇರುವುದರಿಂದ ಸರ್ಕಾರ ಮತ್ತೊಮ್ಮೆ ನೆನಪು ಮಾಡಿತ್ತು. ಅಂದರೆ 2023ನೇ ಸಾಲಿನ ಮಹಾವೀರ ಜಯಂತಿ ರಜೆ ಏಪ್ರಿಲ್‌ 4ರ ಮಂಗಳವಾರ ಇರುತ್ತದೆ. ಅಂದು ಸರ್ಕಾರ ಕಚೇರಿಗಳು ಕೆಲಸ ಮಾಡುವುದಿಲ್ಲ ಎಂದು ತಿಳಿಸಲಾಗಿತ್ತು.

ಏನಿತ್ತು ಸುತ್ತೋಲೆಯಲ್ಲಿ?

ಸರ್ಕಾರ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು ಅದರಲ್ಲಿ ರಜೆಯ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರ್ಕಾರ 2022ರ ನವೆಂಬರ್‌ 21ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಮಹಾವೀರ ಜಯಂತಿಗೆ ಸಂಬಂಧಿಸಿ ತಿದ್ದುಪಡಿ ಆದೇಶ ಹೊರಡಿಸಿದ್ದರು.

ರಾಜ್ಯ ಸರ್ಕಾರದಿಂದ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆ 4ರಲ್ಲಿ ಮಹಾವೀರ ಜಯಂತಿ (Mahavir Jayanthi ) ಪ್ರಯುಕ್ತ ರಜೆಯನ್ನು ದಿನಾಂಕ 03-04-2023ರಂದು ನೀಡಲಾಗಿತ್ತು. ಈ ರಜೆಯನ್ನು ದಿನಾಂಕ 04-04-2023ರಂದು ನೀಡಲಾಗಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಿನಾಂಕ 03-04-2023ರಂದು ನೀಡಲಾಗಿದ್ದಂತಹ ಮಹಾವೀರ ಜಯಂತಿಯ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 04-04-2023ರಂದು ನೀಡಲಾಗಿದೆ- ಇದು ಸರಕಾರ ನೀಡಿರುವ ಸ್ಪಷ್ಟೀಕರಣ

ಚೈತ್ರ ಮಾಸದ ಶುಕ್ಲ ತ್ರಯೋದಶಿ ಜನ್ಮ ದಿನ

ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಅತ್ಯಂತ ಮುಖ್ಯವಾದುದು. ಇದು ಕೊನೆಯ ತೀರ್ಥಂಕರರಾದ ಮಹಾವೀರ ಜನ್ಮದಿನವನ್ನು ಆಚರಿಸಲಾಗುತ್ತದೆ. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ಅಂದರೆ ಕ್ರಿ.ಪೂ. 599. ಮಹಾವೀರರು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು ಎಂದು ದಾಖಲೆಯಲ್ಲಿದೆ. ಇದು ತಿಥಿ ಆಧಾರಿತ ಜನ್ಮ ದಿನವಾಗಿದ್ದರಿಂದ ವರ್ಷವೂ ಬದಲಾಗುತ್ತದೆ. ಈ ಬಾರಿ ಸರ್ಕಾರ ಕ್ಯಾಲೆಂಡರ್‌ ಪಟ್ಟಿ ಮಾಡುವಾಗ ಯಾವುದೇ ಮಾಹಿತಿಯನ್ನು ಗಮನಿಸಿ ಏಪ್ರಿಲ್‌ 3 ಎಂದು ನಿಗದಿ ಮಾಡಿತ್ತು. ಆದರೆ, ಬಳಿಕ ಅದಕ್ಕೆ ಬಂದ ಪ್ರತಿಕ್ರಿಯೆ ಆಧರಿಸಿ ಎಲ್ಲರೂ ಆಚರಿಸುವ ದಿನವನ್ನೇ ರಜಾ ದಿನವಾಗಿ ನಿರ್ಧಾರ ಮಾಡಲಾಗಿದೆ.

Exit mobile version