Site icon Vistara News

Mahavir Jayanti : ರಾಜ್ಯದಲ್ಲಿ ಮಹಾವೀರ ಜಯಂತಿ ಸರಕಾರಿ ರಜಾ ದಿನ ಬದಲಾವಣೆ, ಏಪ್ರಿಲ್‌ 3ರ ಬದಲು ಏಪ್ರಿಲ್‌ 4

Government holiday Mahavir Jayanti

#image_title

ಬೆಂಗಳೂರು: ಶ್ರೀ ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗುವ ಸರ್ಕಾರಿ ರಜಾದಿನವನ್ನು (Government holiday) ಬದಲಾಯಿಸಲಾಗಿದೆ. ಸರ್ಕಾರದ ಮೂಲ ರಜಾ ದಿನಗಳ ಪಟ್ಟಿಯಲ್ಲಿ ಏಪ್ರಿಲ್‌ 3ರಂದು ರಜೆ ಎಂದಿದೆ. ಅದನ್ನು ಬದಲಾಯಿಸಲಾಗಿದ್ದು ಈ ಬಾರಿ ಸರ್ಕಾರಿ ರಜಾ ದಿನ ಏಪ್ರಿಲ್‌ 4 ಎಂದು ಪ್ರಕಟಿಸಲಾಗಿದೆ.

ಅಂದು ವಾರ್ಷಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಿಗೇ ಅದಕ್ಕೊಂದು ಸ್ಪಷ್ಟೀಕರಣವನ್ನು ನೀಡಿ ಏಪ್ರಿಲ್‌ ನಾಲ್ಕರಂದು ರಜೆ ಎಂದು ತಿಳಿಸಲಾಗಿತ್ತು. ಆದರೆ, ಬಹುತೇಕರು ಇಟ್ಟುಕೊಳ್ಳುವ ಮೂಲ ರಜಾ ಪಟ್ಟಿಯಲ್ಲಿ ಏಪ್ರಿಲ್‌ 3 ಎಂದೇ ಇರುವುದರಿಂದ ಸರ್ಕಾರ ಮತ್ತೊಮ್ಮೆ ನೆನಪು ಮಾಡಿದೆ. ಅಂದರೆ 2023ನೇ ಸಾಲಿನ ಮಹಾವೀರ ಜಯಂತಿ ರಜೆ ಏಪ್ರಿಲ್‌ 4ರ ಮಂಗಳವಾರ ಇರುತ್ತದೆ. ಅಂದು ಸರ್ಕಾರ ಕಚೇರಿಗಳು ಕೆಲಸ ಮಾಡುವುದಿಲ್ಲ ಎಂದು ತಿಳಿಸಲಾಗಿದೆ.

ಏನಿದೆ ಸುತ್ತೋಲೆಯಲ್ಲಿ?

ಸರಕಾರ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು ಅದರಲ್ಲಿ ರಜೆಯ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸರ್ಕಾರ 2022ರ ನವೆಂಬರ್‌ 21ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಮಹಾವೀರ ಜಯಂತಿಗೆ ಸಂಬಂಧಿಸಿ ತಿದ್ದುಪಡಿ ಆದೇಶ ಹೊರಡಿಸಿದ್ದರು.

ರಾಜ್ಯ ಸರ್ಕಾರದಿಂದ ಪ್ರಕಟಿಸಿದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಕ್ರಮ ಸಂಖ್ಯೆ 4ರಲ್ಲಿ ಮಹಾವೀರ ಜಯಂತಿ (Mahavir Jayanthi ) ಪ್ರಯುಕ್ತ ರಜೆಯನ್ನು ದಿನಾಂಕ 03-04-2023ರಂದು ನೀಡಲಾಗಿತ್ತು. ಈ ರಜೆಯನ್ನು ದಿನಾಂಕ 04-04-2023ರಂದು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ದಿನಾಂಕ 03-04-2023ರಂದು ನೀಡಲಾಗಿದ್ದಂತ ಮಹಾವೀರ ಜಯಂತಿಯ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ 04-04-2023ರಂದು ನೀಡಲಾಗಿದೆ- ಇದು ಸರಕಾರ ನೀಡಿರುವ ಸ್ಪಷ್ಟೀಕರಣ

ಚೈತ್ರ ಮಾಸದ ಶುಕ್ಲ ತ್ರಯೋದಶಿ ಜನ್ಮ ದಿನ

ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಅತ್ಯಂತ ಮುಖ್ಯವಾದುದು. ಇದು ಕೊನೆಯ ತೀರ್ಥಂಕರರಾದ ಮಹಾವೀರ ಜನ್ಮದಿನವನ್ನು ಆಚರಿಸಲಾಗುತ್ತದೆ. ಮಹಾವೀರ ಜನಿಸಿದ್ದು ಚೈತ್ರ ಮಾಸದ ಶುಕ್ಲ ತ್ರಯೋದಶಿಯಂದು. ಅಂದರೆ ಕ್ರಿ.ಪೂ. 599. ಮಹಾವೀರರು ಗನರಾಜ್ಯ ಎಂಬ ರಾಜ್ಯದಲ್ಲಿ ಜನಿಸಿದರು ಎಂದು ದಾಖಲೆಯಲ್ಲಿದೆ. ಇದು ತಿಥಿ ಆಧರಿತ ಜನ್ಮ ದಿನವಾಗಿದ್ದರಿಂದ ವರ್ಷವೂ ಬದಲಾಗುತ್ತದೆ. ಈ ಬಾರಿ ಸರ್ಕಾರ ಕ್ಯಾಲೆಂಡರ್‌ ಪಟ್ಟಿ ಮಾಡುವಾಗ ಯಾವುದೇ ಮಾಹಿತಿಯನ್ನು ಗಮನಿಸಿ ಏಪ್ರಿಲ್‌ 3 ಎಂದು ನಿಗದಿ ಮಾಡಿತ್ತು. ಆದರೆ, ಬಳಿಕ ಅದಕ್ಕೆ ಬಂದ ಪ್ರತಿಕ್ರಿಯೆ ಆಧರಿಸಿ ಎಲ್ಲರೂ ಆಚರಿಸುವ ದಿನವನ್ನೇ ರಜಾ ದಿನವಾಗಿ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ : Shravanabelagola swameeji No more : ನಾಲ್ಕು ಮಹಾಮಸ್ತಕಾಭಿಷೇಕಗಳ ರೂವಾರಿ, ಶ್ರವಣಬೆಳಗೊಳದ ಮಹಾಬೆಳಕು

Exit mobile version