ಬೆಂಗಳೂರು: 10 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಿಗೇ ರಾಜ್ಯದಲ್ಲಿ 15 ಮಂದಿ ಐಪಿಎಸ್ ಅಧಿಕಾರಿಗಳನ್ನು (IPS Transfer) ಸರ್ಕಾರ ವರ್ಗಾವಣೆ ಮಾಡಿದೆ. ವರ್ಗವಾದವರಲ್ಲಿ ಹಿರಿಯ ಪೊಲೀಸ್ ಅಧಿಕಾರಿ, ಬೆಂಗಳೂರು ನಗರ ಪಶ್ಚಿಮ ವಲಯದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಹೆಚ್ಚುವರಿ ಕಮಿಷನರ್ ಆಗಿರುವ ಸಂದೀಪ್ ಪಾಟೀಲ್ (Sandeep Patil) ಅವರು ಕೂಡಾ ಸೇರಿದ್ದಾರೆ. ಅವರನ್ನು ಕರ್ನಾಟಕ ಮೀಸಲು ಪೊಲೀಸ್ ಪಡೆಯ ಐಜಿಪಿಯಾಗಿ ನಿಯೋಜಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು ಇವರು
1. ಸಂದೀಪ್ ಪಾಟೀಲ್: ಕೆಎಸ್‌ಆಪಿ ಐಜಿಪಿ
2. ಚಂದ್ರಶೇಖರ್; ಎಡಿಜಿಪಿ ಆಂತರಿಕ ಭದ್ರತಾ ವಿಭಾಗ
3. ಮಾಲಿನಿ ಕೃಷ್ಣಮೂರ್ತಿ: ಎಡಿಜಿಪಿ ಕಾರಾಗೃಹ
4. ಅರುಣ್ ಚಕ್ರವರ್ತಿ: ಎಡಿಜಿಪಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ
5. ಸತೀಶ್ ಕುಮಾರ್: ಅಡಿಷನಲ್ ಕಮೀಷನರ್ ಪಶ್ಚಿಮ
6. ರಮಣ್ ಗುಪ್ತ ಉತ್ತರ ವಲಯ ಐಜಿಪಿ
7. ಬೋರಲಿಂಗಯ್ಯ: ಡಿಐಜಿ ದಕ್ಷಿಣ ವಲಯ
8. ವಂಶಿ ಕೃಷ್ಣ: ಡಿಐಜಿ ಸಿಐಡಿ ಎಕಾನಾಮಿಕ್ ಅಫೆನ್ಸ್
9. ಋಶ್ಯಂತ್: ದಕ್ಷಿಣ ಕನ್ನಡ ಎಸ್ಪಿ
10. ಡಾ. ಕೆ. ರಾಮಚಂದ್ರ: ರಾಜ್ಯ ಪೊಲೀಸ್ ವಸತಿ ನಿಗಮದ ಎಂ.ಡಿ.
11. ಮನೀಷ್ ಕರ್ಭಿಕರ್: ಸಿಐಡಿ ಎಡಿಜಿಪಿ, ಆರ್ಥಿಕ ಅಪರಾಧಗಳ ವಿಭಾಗ
12. ವಿಪುಲ್ ಕುಮಾರ್: ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಕಮೀಷನರ್
13. ಪ್ರವೀಣ್ ಮಧುಕರ್ ಪವಾರ್: ಐಜಿಪಿ, ಸಿಐಡಿ
14. ವಿಕಾಸ್ ಕುಮಾರ್ ವಿಕಾಸ್: ಐಜಿಪಿ, ಆಂತರಿಕ ಭದ್ರತಾ ವಿಭಾಗ
15. ಎಸ್.ಎನ್, ಸಿದ್ದರಾಮಪ್ಪ: ಐಜಿಪಿ, ಬೆಂಗಳೂರು ಪ್ರಧಾನ ಕಚೇರಿ
ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ಆದೇಶ ಇಲ್ಲಿದೆ
ಇದನ್ನೂ ಓದಿ: IAS Transfer : ಆಡಳಿತಕ್ಕೆ ಚುರುಕು ಮುಟ್ಟಿಸಲು 10 ಐಎಎಸ್ ಅಧಿಕಾರಿಗಳ ವರ್ಗಾವಣೆ