Site icon Vistara News

Makar Sankranti 2023 | ಸಂಕ್ರಾಂತಿ ಹಬ್ಬದಂದು ತರಗತಿ ನಡೆಸಿದ ಕ್ರೈಸ್ಟ್ ಶಾಲೆ; ಅಂಬೇಡ್ಕರ್​ ಭಾವಚಿತ್ರ ಮೂಲೆಗಿಟ್ಟು ಅವಮಾನ!

ಚಾಮರಾಜನಗರ: ಇಲ್ಲಿನ ಗುಂಡ್ಲುಪೇಟೆಯ ಕ್ರೈಸ್ಟ್ ಸಿಎಂಐ ಪಬ್ಲಿಕ್‌ ಶಾಲೆಯಲ್ಲಿ ಸಾರ್ವತ್ರಿಕ ರಜೆ ಇದ್ದರೂ ಸಂಕ್ರಾಂತಿ ಹಬ್ಬದ (Makar Sankranti 2023) ದಿನದಂದು ತರಗತಿ ನಡೆಸಿದ ಶಾಲೆಯ ಆಡಳಿತ ಮಂಡಳಿ ವಿರುದ್ಧ ಹಿಂದು ಜಾಗರಣ ವೇದಿಕೆ ಹಾಗೂ ದಲಿತ ಸಂಘಟನೆಗಳು ಕಿಡಿಕಾರಿವೆ. ಜತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಅವರ ಫೋಟೊವನ್ನು ಮೂಲೆಗಿಟ್ಟಿದ್ದು ಸಹ ಆಕ್ರೋಶಕ್ಕೆ ಕಾರಣವಾಗಿತ್ತು.

ಹಿಂದು ಮಕ್ಕಳು ಹಬ್ಬ ಆಚರಣೆ ಮಾಡಬಾರದೆಂಬ ದುರುದ್ದೇಶದಿಂದಲೇ ತರಗತಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಭಾನುವಾರ ಸಾರ್ವತ್ರಿಕ ರಜೆ ಹಾಗೂ ಸಂಕ್ರಾಂತಿ ಹಬ್ಬವಿದ್ದರೂ ತರಗತಿ ನಡೆಸಿದ್ದಕ್ಕೆ ಶಾಲೆಯ ಪ್ರಾಂಶುಪಾಲರನ್ನು ಹಿಂದು ಸಂಘಟನೆಗಳ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಪ್ರಾಂಶುಪಾಲರು ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕೇವಲ ಕ್ರೈಸ್ತ ಧರ್ಮದ ಬಗ್ಗೆ ಮಾತ್ರ ಪ್ರಚಾರ ಮಾಡುತ್ತಿದ್ದು, ಮಕ್ಕಳ ತಲೆಗೆ ತುಂಬುತ್ತಿದ್ದಾರೆಂದು ಆರೋಪಿಸಿದ್ದಾರೆ. ಶಾಲೆಯಲ್ಲಿ ರಾಷ್ಟ್ರ ನಾಯಕರ ಫೋಟೊಗಳನ್ನು ಅಳವಡಿಸದೆ ಕೇವಲ ಏಸುವಿನ ಫೋಟೊ ಅಳವಡಿಕೆ ವಿರುದ್ಧವೂ ಆಕ್ರೋಶ ಬಂದಿದೆ. ಶಾಲೆಯ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕ್ರಿಶ್ಚಿಯನ್ ಶಾಲೆಯಲ್ಲಿ ಅಂಬೇಡ್ಕರ್​ಗೆ ಅವಮಾನ!
ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್, ಮಹಾತ್ಮ ಗಾಂಧೀಜಿ​ ಸೇರಿದಂತೆ ಹಲವು ರಾಷ್ಟ್ರನಾಯಕರ ಭಾವಚಿತ್ರಗಳನ್ನು ಮೂಲೆಯಲ್ಲಿಟ್ಟು ಕೇವಲ ಕ್ರಿಸ್ತನ ಫೋಟೊವನ್ನು ಹಾಕಲಾಗಿದೆ ಎಂದು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ರಾಷ್ಟ್ರ ನಾಯಕ ಫೋಟೊ ಹಾಕಿಸಿ ಮುಂದೆ ಈ ರೀತಿ ಘಟನೆ ನಡೆಯದಂತೆ ತಾಕೀತು ಮಾಡಿದರು.

ಇದನ್ನೂ ಓದಿ | Viral Video | ರಾಧಾರಮಣ ದೇಗುಲದಲ್ಲಿ ಭಜನೆ ಹಾಡಿದ ಬಿಜೆಪಿ ಸಂಸದೆ ಹೇಮ ಮಾಲಿನಿ; ನೃತ್ಯವಷ್ಟೇ ಅಲ್ಲ, ಗಾಯನಕ್ಕೂ ಸೈ

Exit mobile version