ಮಂಗಳೂರು: ಮಳಲಿ ಮಸೀದಿ ವಿವಾದದಲ್ಲಿ ಕೋರ್ಟ್ ವಿಚಾರಣೆ ಮಧ್ಯೆಯೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿದೆ. ಸರ್ಕಾರಿ ಜಾಗವನ್ನು ಮಳಲಿ ಮಸೀದಿ ಹೆಸರಿಗೆ ಆರ್‌ಟಿಸಿ ನೋಂದಾಯಿಸಿದ ತಹಸೀಲ್ದಾರ್ ಆದೇಶಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ತಡೆಯಾಜ್ಞೆ ನೀಡಿದ್ದಾರೆ.
ಸರ್ಕಾರಿ ಜಾಗವನ್ನು ಮಳಲಿ ಮಸೀದಿಗೆ ಕೊಟ್ಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವ ಹಿಂದೂ ಪರಿಷತ್ ಪ್ರಮುಖರು ಎಸಿಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅರ್ಜಿ ಸ್ವೀಕರಿಸಿ ವಿಚಾರಣೆ ನಡೆಸಿರುವ ಮಂಗಳೂರು ಸಹಾಯಕ ಆಯುಕ್ತರ(ಎಸಿ) ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ, ತಹಸೀಲ್ದಾರ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಾಗೆಯೇ ಮಸೀದಿ-ಮಂದಿರ ವಿವಾದ ಅರ್ಜಿ ವಿಚಾರಣೆಯನ್ನು ಜೂ.27ಕ್ಕೆ ಕೋರ್ಟ್ ಮುಂದೂಡಿದೆ.
ಮಂಗಳೂರು ತಹಸೀಲ್ದಾರ್ ಆದೇಶದಂತೆ ಸರ್ಕಾರಿ ಜಾಗವನ್ನು ಆರ್‌ಟಿಸಿ(ರೆಕಾರ್ಡ್ಸ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ) ಕಲಂ ನಂ.೧೧ರಲ್ಲಿ ಮಳಲಿ ಮಸೀದಿ ಮತ್ತು ದಫನ ಭೂಮಿ ಹೆಸರಿಗೆ ಮಸೀದಿ ಆಡಳಿತ ನಮೂದು ಮಾಡಿಸಿತ್ತು. ಹೀಗಾಗಿ ಕೋರ್ಟ್‌ನಲ್ಲೂ ಇದು ಮಸೀದಿ ಆಸ್ತಿ ಎಂದು ದಾಖಲೆ ಸಹಿತ ಮಳಲಿ ಮಸೀದಿ ಆಡಳಿತ ವಾದಿಸಿತ್ತು. ಇದೀಗ ತಹಸೀಲ್ದಾರ್ ಆದೇಶಕ್ಕೆ ಮಂಗಳೂರು ಎಸಿ ಕೋರ್ಟ್ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ | ಮಳಲಿ ಮಸೀದಿ ವಿಚಾರದಲ್ಲಿ ತೀರ್ಪು ನೀಡದಂತೆ ಸಿವಿಲ್ ಕೋರ್ಟ್‌ಗೆ ಹೈಕೋರ್ಟ್ ಸೂಚನೆ