Site icon Vistara News

ಖರ್ಗೆಯಿಂದ ಕಾಂಗ್ರೆಸ್‌ಗೆ ಉತ್ತಮ ನಾಯಕತ್ವ ಎಂದು ಬಣ್ಣಿಸಿದ ಸೋನಿಯಾ; ಪುಸ್ತಕ ಬಿಡುಗಡೆ

Mallikarjun kharge provides leadership congress party Says Sonia Gandhi

ನವದೆಹಲಿ: ರಾಜಕಾರಣದಲ್ಲಿ 50 ವರ್ಷ ಬಹಳ ದೊಡ್ಡದು. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತತ್ವ, ಸಿದ್ಧಾಂತದ ವಿಚಾರದಲ್ಲಿ ಒಮ್ಮೆಯೂ ರಾಜಿಯಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ (Congress Party) ಖರ್ಗೆ ಅವರು ಉತ್ತಮ ನಾಯಕತ್ವವನ್ನು ನೀಡುತ್ತಿದ್ದಾರೆ(Good Leadership). ಖರ್ಗೆ ಅವರ ಪಾಲಿಗೆ ಸ್ವಹಿತಾಸಕ್ತಿಗಿಂತ ಪಕ್ಷ ಮತ್ತು ಸಂಘಟನೆ ದೊಡ್ಡದು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಹೇಳಿದರು.

ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Book About Mallikarjun Kharge) ಅವರ ಕುರಿತಾದ ಪುಸ್ತಕವನ್ನು ದಿಲ್ಲಿಯಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಕರ್ನಾಟಕ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ರಾಜಕೀಯಕ್ಕೆ ಎಂಟ್ರಿಕೊಟ್ಟೆ. ಕಳೆದ ವರ್ಷವೇ ಪುಸ್ತಕ ಬಿಡುಗಡೆಯಾದ ಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ಆದರೆ ಈಗ ಪುಸ್ತಕ ಬಿಡುಗಡೆ ಖುಷಿ ತಂದಿದೆ. ಇದಕ್ಕಾಗಿ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಎಂದು ತಿಳಿಸಿದರು.

ಪುಸ್ತಕ ಹೊರತರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ನನ್ನ ಜೀವನದ 80 ವಸಂತ ಮತ್ತು 50 ವರ್ಷಗಳ ರಾಜಕೀಯ ಜೀವನದ ಕಥಾ ಹಂದರ ಈ ಕೃತಿಯಾಗಿದೆ. ನನ್ನಿಂದ ನನ್ನ ಕ್ಷೇತ್ರದ ಜನರಿಗೆ, ನನ್ನ ರಾಜ್ಯಕ್ಕೆ ಮತ್ತು ಪಕ್ಷಕ್ಕೆ ಕೃತಜ್ಞ. ನನಗೆ 29 ವರ್ಷದ ವಯಸ್ಸಿನಲ್ಲೆ ಚುನಾವಣೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ಮೊದಲ ಬಾರಿಯ ಗೆಲುವಿನ ನಂತರವೆ ಸಚಿವಸ್ಥಾನ ಇಂದಿರಾ ಗಾಂಧಿ ಅವರು ನೀಡಿದರು. ಈ ಹಿಂದೆ ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯ ಅಷ್ಟು ಸರಾಗವಾಗಿ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಈಗ ನಮ್ಮ ದೇಶ, ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ನಮ್ಮ ಮುಂದೆ ಹಲವು ಸವಾಲುಗಳಿವೆ. ನಾವೆಲ್ಲರೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವ ವಿರೋಧದ ಜೊತೆಗೆ ಹೋರಾಡಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ನವದೆಹಲಿಯ ಜವಾಹರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಸುಖದೇವ್ ಟೋರಟ್, ಚೇತನ್ ಶಿಂಧೆ ಅವರು ಸಂಪಾದಿಸಿದ್ದಾರೆ. ಖರ್ಗೆ ರಾಜಕೀಯ ಜೀವನದ ಕಥನ ಪುಸ್ತಕದಲ್ಲಿ ದಾಖಲಿಸಲಾಗಿದೆ. 75 ಲೇಖಕರು ಖರ್ಗೆ ಅವರ ಕುರಿತು ಬರೆದಿದ್ದಾರೆ.

ರಾಹುಲ್ ಗಾಂಧಿ, ಶಶಿ ತರೂರ್, ಡಿ.ಕೆ‌.ಶಿವಕುಮಾರ್, ಎಚ್. ಕೆ ಪಾಟೀಲ್ ಅವರೂ ಖರ್ಗೆ ಅವರ ಬಗ್ಗೆ ಬರೆದಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ, ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧ್ಯಾ ಅವರು ತಮ್ಮ ನಡುವಿನ ಸಂಬಂಧವನ್ನು ಬಿಂಬಿಸುವ ಲೇಖನ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Mallikarjun Kharge: ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ 1 ವರ್ಷ; ಏಳು-ಬೀಳುಗಳೇನು?

Exit mobile version