ಬೆಂಗಳೂರು: ಯುವತಿಯರು ಸ್ನಾನ ಮಾಡುತ್ತಿದ್ದಾಗ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಖದೀಮನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಮಹದೇವಪುರ ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ಯುವತಿಯರ ವಿಡಿಯೊ ತೆಗೆದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಸೆರೆ ಹಿಡಿದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಆರೋಪಿ. ಈತ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪಿಜಿಯಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 7 ಯುವತಿಯರ ಸ್ನಾನದ ವಿಡಿಯೊ ಆರೋಪಿಯ ಫೋನ್‌ನಲ್ಲಿ ಪತ್ತೆಯಾಗಿವೆ.
ಆರೋಪಿ ಪುರುಷರ ಪಿಜಿಯಲ್ಲಿ ವಾಸವಿದ್ದ. ಅದೇ ಕಟ್ಟಡಕ್ಕೆ ಹೊಂದಿಕೊಂಡು ಯುವತಿಯರ ಪಿಜಿ ಕೂಡ ಇತ್ತು. ಹೀಗಾಗಿ ಯುವತಿಯರು ಸ್ನಾನ ಮಾಡುವಾಗ ಕಿಟಕಿ ಬಳಿ ಹೋಗಿ ಚಿತ್ರೀಕರಣ ಮಾಡುತ್ತಿದ್ದ. ಇದು ಯುವತಿಯರ ಗಮನಕ್ಕೆ ಬಂದಿರಲಿಲ್ಲ.
ಇದನ್ನೂ ಓದಿ | Murder Case: ಸ್ನೇಹಿತರೇ ಹಂತಕರು; ವೀಕೆಂಡ್ ಪಾರ್ಟಿಯಲ್ಲಿ ಕಿರಿಕ್, ನೇಪಾಳಿ ಯುವಕನ ಬರ್ಬರ ಹತ್ಯೆ
ಜೂನ್ 21ರಂದು ವಿಡಿಯೊ ಮಾಡುತ್ತಿದ್ದಾಗ ಸ್ಥಳೀಯರೊಬ್ಬರು ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದರು. ಮೊಬೈಲ್ ಅನ್ನು ಪರಿಶೀಲಿಸಿದಾಗ ಆತನ ಕೃತ್ಯ ಬಯಲಾಗಿದೆ. ಆರೋಪಿ 4 ತಿಂಗಳಲ್ಲಿ ಏಳು ಬಾರಿ ಯುವತಿಯರ ವಿಡಿಯೊ ಚಿತ್ರೀಕರಣ ಮಾಡಿದ್ದ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Car Accident: ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
ಬೆಂಗಳೂರು: ರಾಜಾಜಿನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಸಿಗ್ನಲ್‌ನಲ್ಲಿ ಕಾರು ಡಿಕ್ಕಿಯಾಗಿದ್ದರಿಂದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ನವರಂಗ್ ಸಿಗ್ನಲ್ ಬಳಿ ಯೂಟರ್ನ್ ಹೊಡೆಯುತ್ತಿದ್ದ ಕಾರು, ಪಾದಚಾರಿಗೆ ಡಿಕ್ಕಿಯಾಗಿದೆ. ಇದರಿಂದ ವ್ಯಕ್ತಿಯ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ಮೃತಪಟ್ಟಿದ್ದಾರೆ.
ಪ್ರಕಾಶ್ ನಗರದ ನಿವಾಸಿ ಕೃಷ್ಣಪ್ಪ (55) ಮೃತರು. ನವರಂಗ್ ಸಿಗ್ನಲ್‌ನ ಜೀಬ್ರಾ ಕ್ರಾಸ್ ಬಳಿ ನಿಂತಿದ್ದ ಕೃಷ್ಣಪ್ಪಗೆ ಕಾರು ವೇಗವಾಗಿ ಬಂದು ಯೂಟರ್ನ್ ಮಾಡಿದಾಗ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ. ಸದ್ಯ ಕಾರು ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Fraud Case: ರ‍್ಯಾಂಪ್ ವಾಕ್ ಮಾಡಬೇಕಾದವರು ಠಾಣೆ ಮೆಟ್ಟಿಲೇರಿದ್ರು; ಇದು ಫ್ಯಾಷನ್ ದೋಖಾ
ಮೃತ ಕೃಷ್ಣಪ್ಪ, ಪ್ರಕಾಶ್ ನಗರದಲ್ಲಿ 40 ವರ್ಷದಿಂದ ವಾಸವಾಗಿದ್ದರು ಎನ್ನಲಾಗಿದೆ. ಇವರಿಗೆ ಕುಟುಂಬಸ್ಥರು ಯಾರೂ ಇರಲಿಲ್ಲ ಎಂಬ ಮಾಹಿತಿ ಇದೆ.