ಬೆಂಗಳೂರು: ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಮನೆಯಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. 85 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಲಕ್ಷಾಂತರ ರೂಪಾಯಿ ಬೆಲೆಬಾಳುವ 6 ಬ್ರಾಂಡೆಡ್ ವಾಚ್‌ಗಳು ಕಳ್ಳತನವಾಗಿತ್ತು.
ಎಂ.ಬಿ. ಪಾಟೀಲ್ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ ಎಂಬಾತನಿಂದ ಈ ಕೃತ್ಯ ನಡೆದಿತ್ತು. ಕಳ್ಳತನ ನಡೆಸಿ ಒಡಿಸ್ಸಾಗೆ ಆರೋಪಿ ಜಯಂತ್ ದಾಸ್ ಪರಾರಿಯಾಗಿದ್ದ. ಅಡುಗೆ ಭಟ್ಟ ಸಿದ್ದು ಎಂಬುವವರ ದೂರಿನ ಆಧಾರದ ಮೇಲೆ ಸದಾಶಿವನಗರ ಠಾಣೆಯಲ್ಲಿ ಎಂ.ಬಿ. ಪಾಟೀಲ್ ಎಫ್ಐಆರ್ ದಾಖಲಿಸಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ A1: ಉಡುಪಿ ಠಾಣೆಯಲ್ಲಿ FIR
ಐದು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಯಂತ್ ದಾಸ್ ಕಳೆದ ಐದು ವರ್ಷದಿಂದ ಎಂ.ಬಿ. ಪಾಟೀಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.